ಬಂಜಾರ ಸಮಾಜ ಸೌಜನ್ಯತೆಯ ಪ್ರತೀಕ ಹಾರಕೂಡ ಶ್ರೀ

ಬಂಜಾರ ಸಮಾಜ ಸೌಜನ್ಯತೆಯ ಪ್ರತೀಕ ಹಾರಕೂಡ ಶ್ರೀ
ವಿನಯ, ಸೌಜನ್ಯತೆ, ದೈವಿಭಕ್ತಿಯ ಪ್ರತೀಕವಾಗಿರುವ ಬಂಜಾರ ಸಮಾಜ ನಮ್ಮ ನಾಡು ಹಾಗೂ ರಾಷ್ಟ್ರದಲ್ಲಿಯೇ ಆದರ್ಶ ಪರಂಪರೆಯನ್ನು ಹೊಂದಿದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಹತ್ಯಾಳ ತಾಂಡದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ ಲಿಂಗೋತ್ರಣ ಮರಿಯಮ್ಮದೇವಿ ಆರಾಧನಾ ಮಹೋತ್ಸವ ಧರ್ಮ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಸಂತ ಸೇವಾಲಾಲ ಮಹಾರಾಜರ ಆಶೀರ್ವಾದದ ನೆರಳಲ್ಲಿ ದೇವಿ ಆರಾಧಕರಾಗಿರುವ ಬಂಜಾರ ಸಮಾಜ ತನ್ನದೇ ಆದ ವಿಶಿಷ್ಟ ಧರ್ಮ ಸಂಸ್ಕೃತಿಯನ್ನು ಹೊಂದಿರುವ ಸಮಾಜವಾಗಿದೆ.
ದೇವಿಯ ನಾಮ, ರೂಪ ಬೇರೆ ಬೇರೆಯಾದರೂ ಆದಿಶಕ್ತಿ ಜಗನ್ಮಾತೆಯೇ ಎಲ್ಲರ ತಾಯಿ ಎನ್ನುವುದನ್ನು ಅರಿತು, ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಅಂತಹ ಸಮಾಜ ಶಾಂತಿ ಸೌಹಾರ್ದತೆಯ ನೆಲೆ ಬೀಡಾಗುತ್ತದೆ ಎಂದು ನುಡಿದರು.
ಮಳೆಯಲ್ಲಿಯೂ ಭಕ್ತಿ ಶ್ರದ್ಧೆಯಿಂದ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಆಯೋಜಿಸಿದ ಹತ್ಯಾಳ ತಾಂಡ ಜನತೆಯ ದೇವಿನಿಷ್ಠೆ ಶ್ಲಾಘನೀಯವಾಗಿದ್ದು ಎಲ್ಲರಿಗೂ ಹಾರಕೂಡಧೀಶ ಹಾಗೂ ಜಗನ್ಮಾತೆ ಮರಿಯಮ್ಮದೇವಿಯು ಸನ್ಮಂಗಳವನ್ನುಂಟು ಮಾಡಲಿ ಎಂದು ಶುಭ ಹಾರೈಸಿದರು.
ಜಗನ್ನಾಥ ಅಡೆ ಸ್ವಾಗತಿಸಿ, ನಿರೂಪಣೆ ಮಾಡಿದರು.
ಆನಂದರಾವ ಝಳಕೆ, ರೋಹಿದಾಸ ಅಡೆ, ಧನಸಿಂಗ ಹೀರಾಡೆ, ಧನಸಿಂಗ ರಾಮಾಡೆ, ಬಳಿರಾಮ ಜಾಧವ, ರೂಪಸಿಂಗ ಚೌಹಣ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲ್ಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಚಿತ್ರ : ತಾಲೂಕಿನ ಶ್ರೀ ಲಿಂಗೋತ್ರಣ ಮರಿಯಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಜರುಗಿದ ಧರ್ಮಸಭೆಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖಂಡರಾದ ಜಗನ್ನಾಥ ಅಡೆ, ಆನಂದರಾವ ಝಳಕೆ, ರೋಹಿದಾಸ ಅಡೆ, ಧನಸಿಂಗ ಹೀರಾಡೆ, ಧನಸಿಂಗ ರಾಮಾಡೆ, ಬಳಿರಾಮ ಜಾಧವ, ರೂಪಸಿಂಗ ಚೌಹಣ ಮುಂತಾದವರು ಉಪಸ್ಥಿತರಿದ್ದರು.