ಜಿಂಕೆ ಬೇಟೆ ಒಬ್ಬ ಆರೋಪಿ ಬಂಧನ ತಲೆಮರೆಸಿಕೊಂಡ ಐವರು

ಜಿಂಕೆ ಬೇಟೆ ಒಬ್ಬ ಆರೋಪಿ ಬಂಧನ ತಲೆಮರೆಸಿಕೊಂಡ ಐವರು

ಜಿಂಕೆ ಬೇಟೆ ಒಬ್ಬ ಆರೋಪಿ ಬಂಧನ ತಲೆಮರೆಸಿಕೊಂಡ ಐವರು

ಚಿಂಚೋಳಿ: ವನ್ಯಜೀವಿ ವಲಯದ ಕುಂಚಾವರಂ ಸಮೀಪದ ಬುರುಗದೊಡ್ಡಿ ಅರಣ್ಯದಲ್ಲಿ ವನ್ಯಜೀವಿ ಚುಕ್ಕಿ ಜಿಂಕೆ ಬೇಟೆಯಾಡಿದ ಆರೋಪಿ ಸೇವು ಎಂಬಾತನನ್ನು ಬಂಧಿಸಿ‌ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಜವಾಹರನಗರ ತಾಂಡಾದ ಐದು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಬಂಧಿತರಿಂದ ಎರಡು ಹೀರೋ ಹೋಂಡಾ ದ್ವಚಕ್ರ ವಾಹನ , ಚುಕ್ಕೆ ಜಿಂಕೆ ಮಾಂಸದ ತುಂಡುಗಳು ಮತ್ತು ನಾಲ್ಕು ಕಬ್ಬಿಣದ ಚೂರಿಗಳು ವಶಕ್ಕೆ ಪಡೆಯಲಾಗಿದೆ.

 ಜಿಲ್ಲಾ ಅರಣ್ಯಾಧಿಕಾರಿ ಸುಮೀತಕುಮಾರ ಪಾಟೀಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ ಮುನೀರ್ ಅಹ್ಮದ್ , ಮಾರ್ಗದರ್ಶನದಲ್ಲಿ, ವಲಯ ಅರಣ್ಯ ಅಧಿಕಾರಿಗ ಭಾಗಪಗೌಡ ನೇತೃತ್ವದಲ್ಲಿ ವಲಯ ಅಧಿಕಾರಿ ಭಾನು ಪ್ರತಾಪ್ ಸಿಂಗ್ , ಶಿವಾನಂದ್ ಬಿರಾದರ್, ಅಂಕುಶ್ ಬಿ ಎಂ, ಸಿದ್ಧಾರೂಢ ಹೋಕ್ಕುಂಡಿ, ನಟರಾಜ್ , ಗಸ್ತು ಅರಣ್ಯಪಾಲಕರಾದ ಚೇತನ್ ದೊಡ್ಡಮನಿ, ರೂಪೇಶ್ ಕುಮಾರ್, ಹೈದರಾಲಿ, ಶೇಕ್ ಅಮೀರ್ ಇನ್ನಿತರರು ಇದ್ದರು ಎಂದು ವನ್ಯಜೀವಿ ಧಾಮದ ಅಧಿಕಾರಿಗಳು ತಿಳಿಸಿದ್ದಾರೆ.