ಬಿಳವಾರ ಗ್ರಾಮದಲ್ಲಿ ಸರಪಳಿ ಪವಾಡ

ಬಿಳವಾರ ಗ್ರಾಮದಲ್ಲಿ ಸರಪಳಿ ಪವಾಡ 

ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಗುರು ಸಿದ್ದಿ ಪುರುಷ ಅವಧೂತ ಅಯ್ಯಣ್ಣ ಮುತ್ಯಾನವರ ಜಾತ್ರೆಯಲ್ಲಿ ಸರಪಳಿ ಪವಾಡ ನಡೆಯಿತು ,

ಜಾತ್ರೆಯಲ್ಲಿ ನಾಡಿನ ಭಕ್ತಾದಿಗಳು ಭಾಗವಹಿಸಿ ಅಯ್ಯಣ್ಣ ಮುತ್ಯಾನವರ ಆಶೀರ್ವಾದ ಪಡೆದರು, ಅಯ್ಯಣ್ಣ ಮುತ್ಯಾನ ಜಾತ್ರೆಯಲ್ಲಿ ದೇವಸ್ಥಾನಕ್ಕೆ ಬಾಜಾ ಭಜಂತ್ರಿ ಡೊಳ್ಳಿನ ಮೆಳದೊಂದಿಗೆ ಮುತ್ಯಾನ ಸ್ವಾಗತಿಸಿದರು . ಸುತ್ತಮುತ್ತಲಿನ ಹಳ್ಳಿಯ ಭಕ್ತರು ಭಕ್ತಿಯಿಂದ ಭಂಡಾರ ಎರಚಿ ಸಂಭ್ರಮಿಸಿದ್ದರು ಈ ಸಂದರ್ಭದಲ್ಲಿ ದೇವಸ್ಥಾನದ ಮಂಡಳಿ ವತಿಯಿಂದ ಉಚಿತ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಎಂದು ಗ್ರಾಮಸ್ಥರಾದ ಶಿವಲಿಂಗಪ್ಪ ಪಡಿಶೆಟ್ಟಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು