ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್ ಗೆ ಆದರ್ಶ ಬಸವಶ್ರೀ ಪ್ರಶಸ್ತಿಗೆ ಆಯ್ಕೆ

ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್ ಗೆ ಆದರ್ಶ ಬಸವಶ್ರೀ ಪ್ರಶಸ್ತಿಗೆ ಆಯ್ಕೆ
ಚಿಂಚೋಳಿ : ಕಳೆದ 30 ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಶಿಕ್ಷಣ, ಸಾಹಿತ್ಯ, ಸಂಘಟನೆ, ಸಮಾಜಕಾರ್ಯ, ಜವಾಬ್ದಾರಿಯುತ ಆಡಳಿತ ನಡೆಸುವಲ್ಲಿ ಮಲ್ಲಿಕಾರ್ಜುನ ಪಾಲಾಮೂರ್ ರವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಬಸವತತ್ವ ನಿಷ್ಠೆಯನ್ನು ಗುರುತಿಸಿ ಆದರ್ಶ ಬಸವಶ್ರೀ ಪ್ರಶಸ್ತಿ ಆಯ್ಕೆ ಮಾಡಿ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಪ್ರಗತಿಪರ ಉಪಾಧ್ಯಾಯರ ಸಂಘದ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರು ಅವರು ತಿಳಿಸಿದ್ದಾರೆ.
ಬಸವಾಭಿಮಾನಿಗಳು, ಸಾಹಿತಿಗಳು, ಉಪನ್ಯಾಸಕರು, ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರು, ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ ರವರಿಗೆ ರಾಜ್ಯ ಮಟ್ಟದ ಆದರ್ಶ ಬಸವಶ್ರೀ ಪ್ರಶಸ್ತಿಯನ್ನು ಇದೇ ಏಪ್ರೀಲ್ 15 ರಂದು ಚಿತ್ತಾಪೂರ ತಾಲೂಕಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ರಾಜ್ಯಾಧ್ಯಕ್ಷ ಗುರುಪಾದ ಕೋಗನೂರು ಹಾಗೂ ತಾಲೂಕಾಧ್ಯಕ್ಷ ಜಯಶ್ರೀ ಬಿರಾದಾರ ತಿಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.