ಹೊಳೆ ಸಮುದ್ರ ಗ್ರಾಮದಲ್ಲಿ ೩೦ನೇ ಬಸವ ಜ್ಯೋತಿ ಕಾರ್ಯಕ್ರಮ
ಹೊಳೆ ಸಮುದ್ರ ಗ್ರಾಮದಲ್ಲಿ ೩೦ನೇ ಬಸವ ಜ್ಯೋತಿ
ಕಾರ್ಯಕ್ರಮನಮ್ಮ ಬದುಕು ಸುಂದರವಾಗಬೇಕಾದರೆ ಒಳ್ಳೆಯ ವಿಚಾರವನ್ನು ಇಟ್ಟುಕೊಂಡು ಮಹಾತ್ಮರ ಶರಣರ ಜೀವನ ಚರಿತ್ರೆಯನ್ನು ಓದಬೇಕು ಎಂದು ಡಾ! ಪೂಜ್ಯ ಮಹಾದೇವಮ್ಮಾ ತಾಯಿ ನುಡಿದರು.
ಕಮಲನಗರ ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಪ್ರತಿ ತಿಂಗಳಲ್ಲಿ ನಡೆಯಲಿರುವ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಬಸವಣ್ಣವರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಡಾ ಚನ್ನಬಸವ ಪಟ್ಟದ್ದೇವರು ಬದುಕಿನ ಉದ್ದಕ್ಕೂ ಬಸವಣ್ಣರು ನಡೆದಂತೆ, ನಡೆದು ಜಾತಿ ಮತ ಪಂಥ ಎಲ್ಲವನ್ನು ತೊರೆದು ಎಲ್ಲರೊಂದಿಗೆ ಒಂದಾಗಿ ಬದುಕಿ, ಹಂಚಿ ಹೋಗಿದ ಮಠಗಳ ಆಸ್ತಿಯನ್ನು ಒಂದುಗೂಡಿಸಿ ಕರ್ನಾಟಕ ಏಕೀಕರಣದಲ್ಲಿ ಹೋರಾಡಿದ ಮಹಾಪುರುಷರು. ಕನ್ನಡದ ಪಟ್ಟದ್ದೇವರೆಂದೇ ಹೆಸರುವಾಸಿಯಾಗಿದ್ದರು. ಈ ಭಾಗದಲ್ಲಿ ನೆಲೆದಾಡಿ ಶಿಕ್ಷಣ ಸಂಸ್ಥೆಯನ್ನು ತೆರೆದು ಹೊರಗೆ ಉರ್ದು ಬೋರ್ಡ್ ಹಾಕಿ ಕನ್ನಡ ಕಲಿಸುವಿಕೆ ಕೆಲಸವನ್ನು ಮಾಡಿದರೂ ಮಕ್ಕಳಿಗಾಗಿ ಮುಷ್ಟಿ ಫಂಡ್ ಜಾರಿಗೊಳಿಸಿ ದಾಸೋಹ ಮಾಡಿದರು. ಅಪ್ಪಗಳು ನಿಷ್ಠಾವಂತರಾಗಿ ಬದುಕಿದರು. ಡಾಕ್ಟರ್ ಚನ್ನಬಸವ ಪಟ್ಟದ್ದೇವರ ಬದುಕಿನ ಚರಿತ್ರೆ ಬಗ್ಗೆ ಕುರಿತು ತಿಳಿದುಕೊಳ್ಳುವುದು ಜರೋರಿಯಾಗಿದೆ ಎಂದು ಖೇಡ ಸಂಗಮ ನೀಲಾಂಬಿಕಾ ಆಶ್ರಮದ ಪೂಜ್ಯ ಡಾ! ಮಹಾದೇವಮ್ಮ ತಾಯಿಯವರು ಮಾತನಾಡಿದರು.
ಬಸವ ಜ್ಯೋತಿ ಮನೆಗೊಂದು ಅನುಭವ ಮಂಟಪ ಮಾಸಿಕ ಕಾರ್ಯಕ್ರಮವು ಸಂಗೀತಾ ಸೂರ್ಯಕಾಂತ ಸಿದ್ದೇಶ್ವರೆ ಇವರ ಮನೆಯಲ್ಲಿ ನೆರವೆರಿತು.
ಷಟಸ್ಥಲ ಧ್ವಜಾರೋಹಣ ನೇರವೇರಿಸುವ ಮೂಲಕ ಸಣ್ಣ ಪುಟ್ಟ ಮಕ್ಕಳಿಂದ ವಚನ ಗಾಯನ ಮಾಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಅಕ್ಕನ ಬಳಗದವರು ಮತ್ತು ಬಸವ ಭಕ್ತರು ಬಹಳ ಉಲ್ಲಾಸದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿಸಿ ಉಪಸ್ಥಿತರಿದ್ದರು.
ಪೂಜ್ಯ ಶರಣಾಂಬಿಕಾ, ನೀಲಾಂಬಿಕಾ, ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.ಶರಣೆ ಶಿವಗಂಗಾ ಹಳಕಾಯೆ ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.