ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯಕತೆ - ಬಸನಗೌಡ ಮಾಲಿ ಪಾಟೀಲ್

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯಕತೆ - ಬಸನಗೌಡ ಮಾಲಿ ಪಾಟೀಲ್

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ಅವಶ್ಯಕತೆ - ಬಸನಗೌಡ ಮಾಲಿ ಪಾಟೀಲ್

ಶಹಾಪುರ : ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಮೌಲ್ಯಗಳು ಹಾಗೂ ಒಳ್ಳೆಯ ಸಂಸ್ಕಾರ ನೀಡಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿಪಾಟೀಲ್ ಹೇಳಿದರು.ಸಗರದ ಮೌನೇಶ್ವರ ಕಲ್ಯಾಣ ಮಂಟಪದಲ್ಲಿ ಎಸ್,ಆರ್,ಐ ಶಿಕ್ಷಣ ಸಂಸ್ಥೆಯ ಕಾವೇರಿ ವಿದ್ಯಾ ಮಂದಿರದ 17ನೇ ವರ್ಷದ ವಾರ್ಷಿಕೋತ್ಸವ ಹಾಗೂ ನಾಡಿನ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು,

ಇಂದಿನ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಉಳಿದು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಿರಂತರ ಅಭ್ಯಾಸದ ಜೊತೆಗೆ ತಮ್ಮ ಜೀವನದ ಉತ್ತಮ ಭವಿಷ್ಯದ ಗುರಿಯತ್ತ ಸಾಗಬೇಕೆಂದು ಕಿವಿಮಾತು ಹೇಳಿದರು.ಇನ್ನೋರ್ವ ಮುಖ್ಯ ಅತಿಥಿಗಳು ಹಾಗೂ ಹಿರಿಯ ಸಾಹಿತಿಗಳಾದ ಲಿಂಗಣ್ಣ ಪಡಶೆಟ್ಟಿ ಮಾತನಾಡಿ, ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ಕಾವೇರಿ ವಿದ್ಯಾ ಮಂದಿರ ನಿರಂತರವಾಗಿ ಕಳೆದ 17 ವರ್ಷಗಳಿಂದ ಮಾಡುತ್ತಿದೆ ಇದರ ಕಾರ್ಯವಾದಿದ್ದು ಎಂದು ಬಣ್ಣಿಸಿದರು.ತಾಲೂಕ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಆರ್. ಚನ್ನಬಸು ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಹಿತ್ಯಿಕ,ಸಾಂಸ್ಕೃತಿಕ,ಪೌರಾಣಿಕ, ಬಗ್ಗೆ ಒಲವು ಮೂಡುವಂತೆ ಶಿಕ್ಷಕರು ಪ್ರೇರೇಪಿಸಬೇಕೆಂದು ನುಡಿದರು

ಈ ಸಂದರ್ಭದಲ್ಲಿ ರವಿ ಹಿರೇಮಠ (ಸಂಘಟನೆ) ಜಯರಾವ್ ಕುಲಕರ್ಣಿ ಸಗರ (ಸಂಗೀತ) ಚಂದ್ರಶೇಖರ ಗೋಗಿ (ಸಂಗೀತ) ತಿಪ್ಪಮ್ಮ ಜಾಯಿ (ಆಡಳಿತ) ಶ್ರೀಶೈಲ್ ಬಿರಾದಾರ (ಸಾಹಿತ್ಯ) ಮಲ್ಲಣ್ಣ ಹೊಸಮನಿ (ಸಂಘಟನೆ) ಮಹೇಶ್ ಮಹಾಮನಿ (ಮಾಧ್ಯಮ) ಮೈಲಾರಪ್ಪ ಪೂಜಾರಿ (ಶಿಕ್ಷಣ) ಶ್ರೀಶೈಲ್ ಖೇಡಗಿ (ಶಿಕ್ಷಣ) ನರಸಿಂಹ ನಾಯಕ (ಆಡಳಿತ) ತಿಪ್ಪಣ್ಣ ಖ್ಯಾತನಾಳ (ಶಿಕ್ಷಣ) ಶಾಕೀರಾ ಬೇಗಮ್ (ಶಿಕ್ಷಣ) 12ಕ್ಕೂ ಹೆಚ್ಚು ನಾಡಿನ ಸಾಧಕರಿಗೆ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಒಕ್ಕಲಿಗರ ಹಿರೇಮಠದ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು,ಡಾ.ದೇವೇಂದ್ರಪ್ಪ ಹಡಪದ,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಹಿರಿಯ ಮುಖಂಡರಾದ ಮಹಾಂತಗೌಡ ಸುಬೇದಾರ,ರಾಜಶೇಖರ ನಗನೂರ,ಅಡಿವೆಪ್ಪ ಜಾಕಾ, ಗಿರಿಯಪ್ಪಗೌಡ ಕಟ್ಟಿಮನಿ,ಯೋಗ ಪಟು ರಾಮರಾವ ಕುಲಕರ್ಣಿ, ನಿವೃತ್ತ ಶಿಕ್ಷಕ ಶೆಖರಪ್ಪ ಅರಕೇರಿ, ವಿನೋದ್ ದೇವರಗುಡಿ, ವಾಸುದೇವ ವಠಾರ,ಹೊನ್ನಪ್ಪ ಗಂಗನಾಳ ಯುವ ಪತ್ರಕರ್ತ ಬಸವರಾಜ ಸಿನ್ನೂರ, ಮುಖ್ಯ ಗುರುಗಳಾದ ಜಯಶ್ರೀ ಹಡಪದ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.

ಈ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಮತಿ ಕಾವೇರಿ ದೇವೇಂದ್ರಪ್ಪ ಹಡಪದ, ಶರಬಣ್ಣ ಅಂಗಡಿ, ಅಮರಣ್ಣ ಹೆರುಂಡಿ, ಬೂದೆಪ್ಪ ಉಳ್ಳಿ, ಮಲ್ಲಿಕಾರ್ಜುನ್ ಕಟ್ಟಿಮನಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ನಂತರ ಶಾಲಾ ಮಕ್ಕಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು,ಕು.ಶಾಂತಾ ಹೇರುಂಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಶ್ರದ್ದಾ ಮೇಟಿ ನಿರೂಪಿಸಿದರು,ಶಿವಲೀಲಾ ಗುಂಡನೂರ ಸ್ವಾಗತಿಸಿದರು, ರಾಜೇಶ್ವರಿ ಹಡಪದ ವಂದಿಸಿದರು.