ಬೀರನಕಲ್ ಜಾತ್ರೆಯಲ್ಲಿ ನಡೆದ ಅಹಿತಕರ ಘಟನೆ ನಡೆಸಿದ ಯುವಕರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ಬೀರನಕಲ್ ಜಾತ್ರೆಯಲ್ಲಿ ನಡೆದ ಅಹಿತಕರ ಘಟನೆ ನಡೆಸಿದ ಯುವಕರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ಬೀರನಕಲ್ ಜಾತ್ರೆಯಲ್ಲಿ ನಡೆದ ಅಹಿತಕರ ಘಟನೆ ನಡೆಸಿದ ಯುವಕರ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ 

ಕಲಬುರಗಿ: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಲ್ಲಿ ಬರುವ ಬೀರನಕಲ್ ಗ್ರಾಮದಲ್ಲಿ ಗ್ರಾಮದೇವತೆ ದ್ಯಾವಮ್ಮ ದೇವಿಯ (ಅಂಬಾ ಮಹೇಶ್ವರಿ) ಜಾತ್ರಾ ಮಹೋತ್ಸವ ಅಂಗವಾಗಿ ದಿನಾಂಕ:18/02/2025 ರಂದು ನಮ್ಮ ಮಾದಿಗ ಸಮಾಜದ ಯುವಕರು ಬ್ಯಾನರ್ ಹಾಕಿದ್ದು, ಸದರಿ ಬ್ಯಾನರ್ ಹರಿದು ಗ್ರಾಮದ ಮಾದಿಗರ ಓಣಿಗೆ ನುಗ್ಗಿ ಬಡಿಗೆ, ಕೊಡಲಿ, ಕೂರುಪಿ ಹಾಗೂ ಇನ್ನಿತರ ಆಯುಧಗಳಿಂದ ಮಾರಾಣಾಂತಿಕ ಹಲ್ಲೆ ಮಾಡಿರುವ ಬ್ಯಾಡರ ಸಮಾಜಕ್ಕೆ ಸೇರಿದ 31 ಜನರನ್ನು ಕೂಡಲೇ ಬಂದಿಸಿ, ಸೂಕ್ತವಾದ ಕಾನೂನು ಕ್ರಮಕೈಗೊಂಡು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಸರ್ಕಾರಕ್ಕೆ ಪಡೆದುಕೊಳ್ಳಬೇಕು ಮತ್ತು ಮಾದಿಗ ಸಮಾಜದ ಓಣಿಗೆ ಸೂಕ್ತ ಪೋಲೀಸ್ ಬಂದೋಬಸ್ತ ಒದಗಿಸಬೆಕೇಂದು ಕರ್ನಾಟಕ ರಾಜ್ಯ ಮಾದಿಗ ಸಮಾಜದ ವತಿಯಿಂದ ಪೋಲಿಸ್ ಮಹಾ ನಿರೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟಿಕಾರ, ಜಿಲ್ಲಾಧ್ಯಕ್ಷ ಸಿದ್ಧಲಿಂಗ ಸಿ. ವಚ್ಚಾ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಾನಪ್ಪ ಎನ್. ಶಿವನೂರಕರ, ಸಂ. ಕಾರ್ಯದರ್ಶಿ ನಾಗರಾಜ ಮುನ್ನಾಳ, ಎಮ್.ಎಸ್.ಎಸ್ ಸಂಸ್ಥಾಪಕ ಅಧ್ಯಕ್ಷ ಮಲ್ಲಪ್ಪ ಮಾದರ, ಸಮಾಜದ ಮುಖಂಡರಾದ ರಾಜು ಕಟ್ಟಿಮನಿ, ಅಂಬಾರಾಯ ಚಲಗೇರಿ, ಶ್ರೀನಿವಾಸ ರಾಮನಾಳಕರ್, ಬಸವರಾಜ ನಾಟೀಕಾರ, ಸಚೀನ ಕಟ್ಟಿಮನಿ, ಅರ್ಜುನ ಮೇತ್ರೆ, ಮಹೇಶ ಸೇರಿದಂತೆ ಇತರರು ಇದ್ದರು.