ಕಲಿಕಾ ಪ್ರಾರಂಭ ಉದ್ಘಾಟಿಸಿದ ಹಾರಕೂಡ ಶ್ರೀಗಳು

ಕಲಿಕಾ ಪ್ರಾರಂಭ ಉದ್ಘಾಟಿಸಿದ ಹಾರಕೂಡ ಶ್ರೀಗಳು
ಕಲಬುರಗಿ: ನಗರದ ಶಾಹಬಜಾರಲ್ಲಿರುವ ಶುಕ್ಲಾ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕೆಯ ಪ್ರಾರಂಭ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಷ. ಬ್ರ. ಡಾ. ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವಿನಯ್ ಶುಕ್ಲಾ, ಕಾರ್ಯದರ್ಶಿ ವರ್ಷಾ ಶುಕ್ಲಾ, ಶಾಲೆಯ ಮುಖ್ಯೋಪಾಧ್ಯಾಯ ವಸಂತರಾವ್ ಕದಂ ಖಾನೆ ಸೇರಿದಂತೆ ಶಿಕ್ಷಕಿಯರು, ನರ್ಸರಿ, ಎಲ್‌ಕೆಜಿ, ಯುಕೆಜಿ ಮಕ್ಕಳು, ಪಾಲಕರು ಇದ್ದರು.