ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ ಸುಮ್ಮನೆ ಇರಲ್ಲ. ಡಾ ಮಹೇಶ್ ತೆಲಗಿ ಎಚ್ಚರಿಕೆ

ಪ್ರಿಯಾಂಕ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ ಸುಮ್ಮನೆ ಇರಲ್ಲ. ಡಾ ಮಹೇಶ್ ತೆಲಗಿ ಎಚ್ಚರಿಕೆ
ಕಲಬುರಗಿ: ಫೆ-20.ಪಂಚಾಯತ ರಾಜ ಮತ್ತು ಐಟಿಬಿಟಿ ಸಚಿವ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆ ಸುಮ್ಮನ್ನೆ ಇರುವುದಿಲ್ಲ ಎಂದು ದಲಿತ ಯುವ ಹೋರಾಟಗಾರ ಡಾ. ಮಹೇಶ ಎಚ್. ತೆಲಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಶ್ನಿಸುವುದನ್ನು ಬಿಜೆಪಿ, ಆರ್‌ಎಸ್‌ಎಸ್ ನವರಾಗಲಿ ಎಂದಿಗೂ ಸಹಿಸುವುದಿಲ್ಲ. ಅದರಲ್ಲೂ ತಳಸಮುದಾಯದವರು ಪ್ರಶ್ನಿಸಿದರಂತೂ ಅವರನ್ನು ಮುಗಿಸಲು ಎಲ್ಲಾ ರೀತಿಯ ಸಂಚು
ಮಾಡುತ್ತಾರೆ. ಅಂತಹದೇ ಸಂಚು ಈಗ ಪ್ರಿಯಾಂಕ್ ಖರ್ಗೆ ಯವರ ವಿರುದ್ಧರೂಪುಗೊಂಡಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಮನುಸ್ಮೃತಿ, ಜಾತಿಯ ಅಸಮಾನತೆಗಳ ವಿರುದ್ಧದ ಜನಧ್ವನಿ ಆಗಿರುವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಆರ್.ಎಸ್ ಎಸ್ ಪಾಲಿಗೆ ಸಿಂಹಸ್ವಪ್ನ ಆಗಿರುವುದೆ ಇದಕ್ಕೆಲ್ಲ ಕಾರಣ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಗುಡುಗಿನಂತೆ ಸಿಡಿಯುತಾ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಾಗುತ್ತಿರುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಏನೇ ಸಂಚು ನಡೆಸಿದರೂ ಕರ್ನಾಟಕದ ಜನತೆ ಮತ್ತು ಕಾಂಗ್ರೆಸ್ ಪಕ್ಷ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜೊತೆಗೆ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.