53ನೇ ಸೀನಿಯರ್ ಪುರುಷರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕಲಬುರಗಿ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆ

53ನೇ ಸೀನಿಯರ್ ಪುರುಷರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕಲಬುರಗಿ ಜಿಲ್ಲೆಯ  ಕ್ರೀಡಾಪಟುಗಳು ಆಯ್ಕೆ

53ನೇ ಸೀನಿಯರ್ ಪುರುಷರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಕಲಬುರಗಿ ಜಿಲ್ಲೆಯ ಕ್ರೀಡಾಪಟುಗಳು ಆಯ್ಕೆ

ಕಲಬುರಗಿ: ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಡಿಯಲ್ಲಿ ತರಬೇತಿ ನಿರತ ಕ್ರೀಡಾಪಟುಗಳಾದ ದಿನೇಶ್ ಪವಾರ್, ಮಯೂರ್ ಯು, ಶಶಾಂಕ್ ಪಾಟೀಲ್, ಶಿವರಾಜ್ ಪಾಟೀಲ್, ದೀಪಕ್, ಜೋಶಿ ಮತ್ತು ದರ್ಶನ್ ಅವರು ಹ್ಯಾಂಡ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ಅವರು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ದಿನಾಂಕ 22.02.2025 ರಿಂದ 26.2.2025 ರ ವರೆಗೆ ಆಯೋಜಿಸಿರುವ 53ನೇ ಹಿರಿಯ ಪುರುಷರ ರಾಷ್ಟ್ರಮಟ್ಟದ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ನಗರದ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. 

ಈ ಆಯ್ಕೆಯಾದ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಅಮೃತ ಅಷ್ಟಗಿ, ಗುಲ್ಬರ್ಗ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಪಾಟೀಲ್ ಜಳಕಿ, ಗುಲ್ಬರ್ಗ ಜಿಲ್ಲಾ ಹ್ಯಾಂಡಲ್ ಅಸೋಸಿಯೇಷನ್ ಕಾರ್ಯದರ್ಶಿ ದತ್ತಾತ್ರೆ ಕೆ ಜೇವರ್ಗಿ, ಬಾಸ್ಕೆಟ್ ಬಾಲ್ ತರಬೇತಿದಾರ ಪ್ರವೀಣ್ ಪುಣೆ, ಉಮೇಶ್ ಶರ್ಮಾ, ಸಂತೋಷ್ ಬಾವಿಮನಿ ಇವರು ಶುಭ ಹಾರೈಸಿದ್ದಾರೆ. ಎಂದು ಗುಲ್ಬರ್ಗ ಜಿಲ್ಲಾ ಹ್ಯಾಂಡಲ್ ಅಸೋಸಿಯೇಷನ್ ಕಾರ್ಯದರ್ಶಿ ದತ್ತಾತ್ರೇಯ ಜೇವರ್ಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.