ಹೊಳಸಮುದ್ರ ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ,ಕಲೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಗಳು ಅರಳಿಸಲು ಅವಕಾಶ.

ಹೊಳಸಮುದ್ರ ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ,ಕಲೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಗಳು ಅರಳಿಸಲು ಅವಕಾಶ.

ಹೊಳಸಮುದ್ರ ಕ್ಲಸ್ಟರ್ ಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪ್ರತಿಭಾ ಕಾರಂಜಿ,ಕಲೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆಗಳು ಅರಳಿಸಲು ಅವಕಾಶ.

ಕಮಲನಗರ ತಾಲೂಕಿನ ಹೊಳಸಮುದ್ರ ಸಮೂಹ ಸಂಪನ್ಮೂಲ ಕೇಂದ್ರ ಅಡಿಯಲ್ಲಿ ಬರುವ ಶಾಲೆಗಳ ಮಕ್ಕಳ ದಿನಾಚರಣೆ ಮತ್ತು ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮವನ್ನು ಸದ್ಗುರು ಹರಿನಾಥ ಮಹಾರಾಜ ಮಠ ಹೊಳಸಮುದ್ರನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲಿಗೆ ಮಕ್ಕಳ ದಿನಾಚರಣೆಯನ್ನು ಮಕ್ಕಳಿಂದಲೇ ದೀಪ ಬೆಳಗಿಸುವುದರಿಂದಲೇ ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳೇ ನೆರವೆರಿಸಿದರು.

         ಶಿಕ್ಷಣ ಸಂಯೋಜಕರಾದ ಸಂಜೀವಕುಮಾರ ಮೇತ್ರೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕಮಲನಗರ ಘಟಕದ ಅಧ್ಯಕ್ಷರಾದ ಬಸವರಾಜ ಪಾಟೀಲ, ಹಿರಿಯ ಪತ್ರಕರ್ತರಾದ ಎಸ್.ಎಸ್.ಮೈನಾಳೆ , ಹೊಳಸಮುದ್ರ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಅನಂತ ಕದಮರವರು ಮಾತನಾಡಿದರು.

ಹೊಳಸಮುದ್ರನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮಾದಪ್ಪಾ ಮಡಿವಾಳರವರು ಪ್ರತಿಭಾ ಕಾರಂಜಿ ಕಲೋತ್ಸವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಲಯದಲ್ಲಿನ 15 ಶಾಲೆಗಳ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಿದರು.

  ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

   ಪ್ರಶಸ್ತಿ ಪತ್ರ ವಿತರಣೆ ಹಾಗೂ ಸಮಾರೋಪ ಸಮಾರಂಭದಲ್ಲಿ ನಿರಂತರವಾಗಿ 125 ಗಂಟೆಗಳ ನೃತ್ಯವನ್ನು ಮಾಡಿ ಗಿನ್ನಿಸ್ ದಾಖಲೆ ಮಾಡಿರುವ ಕುಮಾರಿ ಸೃಷ್ಟಿ ಜಗತಾಪ ಅವರು ವಿದ್ಯಾರ್ಥಿಗಳೊಂದಿಗೆ ಸಾಧನೆ ಕುರಿತು ಪ್ರೇರಣಾದಾಯಕ ಮಾತನಾಡುತ್ತಾ ಮಕ್ಕಳಲ್ಲಿ ಸಾಧನೆ ಮಾಡುವ ಬೀಜವನ್ನು ಬಿತ್ತಿದರು.ಹೊಳಸಮುದ್ರ ವಲಯದ ಪರವಾಗಿ,ಹರಿನಾಥ ಮಹಾರಾಜ ಮಠ ಟ್ರಸ್ಟ ಪರವಾಗಿ ಮಾತು ಗ್ರಾಮದ ಪರವಾಗಿ ಸೃಷ್ಟಿ ಜಗತಾಪ ಅವರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಳಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯೋಗಿತಾ ಮಾರುತಿ ಆಳಂದೆರವರು ವಹಿಸಿದರು.ಪ್ರೌಢ ಶಾಲೆಯ SDMC ಅಧ್ಯಕ್ಷರಾದ ರಾಮ ಕದಮ,ರಾಹುಲ ಪಾಟೀಲ, ಮಾರುತಿ ಅಳಂದೆ,ಪ್ರಾಥಮಿಕ ಶಾಲೆಯ SDMC ಪ್ರಶಾಂತ ಬಿರಾದಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಪ್ರತಿಭಾ ಸೂರ್ಯವಂಶಿ, ಸುವರ್ಣಾ ಮಡಿವಾಳ ,ಬಸವರಾಜ ಮಹಾಜನ,ಬಸವರಾಜ ಜಾಗಾವೆ,ಪಂಢರಿ ಆಡೆ,ಸಚಿನ ಸಿಂಧೆ, ರಾಜಕುಮಾರ ವಡಗಾವೆ,ನವನಾಥ ಗಾಯಕವಾಡ, ಬಾಲಾಜಿ ಬಿರಾದಾರ,ಸಂಜೀವ ಮೇತ್ರೆ, CRP ಗಳಾದ ರೋಹಿದಾಸ ಮೇತ್ರೆ,ನವನಾಥ ಬೊರೊಳೆ, ತೀರ್ಪುಗಾರ ಶಿಕ್ಛಕರು ಹಾಗೂ ವಲಯದಲ್ಲಿನ ಶಾಲೆಗಳ ಮುಖ್ಯ ಗುರುಗಳು, ಶಿಕ್ಛಕರು, ಮಕ್ಕಳು ಉಪಸ್ಥಿತರಿದ್ದರು.

ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶದಂತೆ ಪ್ರತಿಭಾ ಕಾರಂಜಿ ಕಲೋತ್ಸವದಲ್ಲಿ ಸಮುದಾಯವನ್ನು , ಜನಪ್ರತಿನಿಧಿಗಳನ್ನು, ಶಿಕ್ಛಕರನ್ನು ಸಮರ್ಪಕವಾಗಿ ಬಳಸಿಕೊಂಡು ಅವರೆಲ್ಲರೂ ಸಹಕಾರದಿಂದ ವಲಯದ ಪ್ರತಿಭಾ ಕಾರಂಜಿ ಕಲೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ ಎಂದು ಸಮೂಹ ಸಂಪನ್ಮೂಲ ಕೇಂದ್ರ ಸಂಪನ್ಮೂಲ ವ್ಯಕ್ತಿ ಮಾದಪ್ಪಾ ಮಡಿವಾಳರವರು ತಿಳಿಸಿದಾರೆ.

ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಶಿಕ್ಷಕರಾದ ವಿಜಯಕುಮಾರ ನೂದನೂರೆ ಮಾಡಿದರು .

ಸ್ವಾಗತ ಗೀತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯದೊಂದಿಗೆ ಮಾಡಿದರು 

ಸ್ವಾಗತ ಭಾಷಣವನ್ನು ಗೋಪಾಳ ತೆಲಂಗೆ ಅವರು ಮಾಡಿದರು.