ರೇವಣ್ಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.

ರೇವಣ್ಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ.
ಚಿಟಗುಪ್ಪ: ತಾಲೂಕಿನ ಮುಸ್ತರಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣ್ಣಸಿದ್ದೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹರಗುರು ಚರ ಮೂರ್ತಿ ಶ್ರೀಗಳ ಸನ್ನಿಧಾನದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.
ತಂಗಾ ಕುಟುಂಬದ ಕುಲದೇವರಾದ ಶ್ರೀ ಜಗದ್ಗುರು
ರೇವಣ್ಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪನೆಯನ್ನು ಸ್ವಂತ ಅವರ ಕೃಷಿ ಭೂಮಿಯಲ್ಲಿ ಸುಂದರವಾದ ದೇವಸ್ಥಾನವನ್ನು ನಿರ್ಮಾಣ ಮಾಡಿ, ಶ್ರೀ ಗುರುಲಿಂಗಾ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಪೂಜೆ, ಪುನಸ್ಕಾರ ಮಾಡುವ ಮುಖಾಂತರ ಶ್ರೀ ರೇವಣ್ಣಸಿದ್ದೇಶ್ವರ ಮೂರ್ತಿ
ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು ಎಂದು ಕುಟುಂಬದ ಮುಖ್ಯಸ್ಥ ನಾಗಶೆಟ್ಟಿ ಸಿದ್ರಾಮಪ್ಪ ತಂಗಾ ತಿಳಿಸಿದರು.
ಈ ಸಂದರ್ಭದಲ್ಲಿ ರಸಮಂಜರಿ, ಸಂಗೀತ, ಹಾಸ್ಯ ಸಂಜೆ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.
ಈ ಸಮಯದಲ್ಲಿ ಧಾರ್ಮಿಕ ಮುಖಂಡರು,ಕುಟುಂಬಸ್ಥರು, ಗ್ರಾಮದ ಪ್ರಮುಖರು, ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.