ಸಮಾರೋಪ ಸಮಾರಂಭ ನಾಳೆ

ಸಮಾರೋಪ ಸಮಾರಂಭ ನಾಳೆ

ಸಮಾರೋಪ ಸಮಾರಂಭ ನಾಳೆ

ವಾಡಿ: ಹಲಕರ್ಟಿ ಗ್ರಾಮದ ಕಟ್ಟಿಮನಿ ಹಿರೇಮಠದ ಲಿಂಗೈಕ್ಯ ಮುನಿಂದ್ರ ಶಿವಯೋಗಿಗಳ 42ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಪ್ರಯುಕ್ತ ಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಕಡಕೋಳ ಮಡಿವಾಳೇಶ್ವರ ಜೀವನ ಆಧಾರಿತ ಮಹಾಪುರಾಣ ಕಾರ್ಯಕ್ರಮ ನಡೆಯುತ್ತಿದೆ.

ಪೀಠಾಧಿಪತಿ ಅಭಿನವ ಶ್ರೀ ಮುನೀಂದ್ರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ 21 ದಿನಗಳ ಕಾಲ ಮಹಾಪುರಾಣ ಕಾರ್ಯಕ್ರಮ ನಡೆಯುತ್ತಿದೆ. ಶನಿವಾರ ಬೆಳಗ್ಗೆ ನಡೆಯಲಿರುವ ಸಮಾರೋಪದ ಧಾರ್ಮಿಕ ಸಮಾರಂಭದಲ್ಲಿ ಹಲವು ಸ್ವಾಮೀಜಿಗಳು ಹಾಗೂ ನೂರಾರು ಭಕ್ತರು ಭಾಗವಹಿಸಲಿದ್ದಾರೆ. ಸಕಲ ವಾದ್ಯಗಳೊಂದಿಗೆ ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಲಿಂಗೈಕ್ಯ ಮುನೀಂದ್ರ ಶಿವಯೋಗಿಗಳ ಕತೃಗದ್ದುಗೆಗೆ ರುದ್ರಭಿಷೇಕ ಪೂಜೆ, ಸಹಸ್ರಾರು ಬಿಲ್ವಾರ್ಚನೆ, ಜಂಗಮ ವಟುಗಳಿಗೆ ಅಯ್ಯಚಾರ ಹಾಗೂ ಭಕ್ತರಿಗೆ ಶಿವಾ ದಿಕ್ಷೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಮುಗಳನಾಗಾವಿ ಕಟ್ಟಿಮನಿ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ, ಪಾಳ ಕಟ್ಟಿಮನಿ ಹಿರೇಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ, ಕಲಕೇರಿ ಮರುಳರಾಧ್ಯ ಸಂಸ್ಥಾನ ಮಠದ ಸಿದ್ಧರಾಮ ಶಿವಾಚಾರ್ಯ, ಹತ್ತಿಕಣಬಸ ವಿರಕ್ತಮಠದ ಶ್ರೀ ಪ್ರಭುಶಾಂತ ಮಹಾಸ್ವಾಮಿ, ಕೋರವಾರ ಸಾರಂಗಮಠದ ಪ್ರಶಾಂತ ದೇವರು, ಅಳೋಳ್ಳಿ ಸಾವಿರ ದೇವರಮಠದ ಶ್ರೀ ಸಂಗಮೇಶ್ವರ ದೇವರು ಸಮಾರೋಪ ಸಭೆಯ ಸಾನಿಧ್ಯ ವಹಿಸಲಿದ್ದಾರೆ ಎಂದು ಮಠದ ವಕ್ತಾರ ರಾಚಯ್ಯ ಶಾಸ್ತ್ರಿ ತಿಳಿಸಿದ್ದಾರೆ.

ವಾಡಿ ಸುದ್ದಿ ನಾಗರಾಜ್ ದಂಡಾವತಿ