ವನ ಸಂಪತ್ತು ನಾಶವಾದ್ರೆ ಮನುಕೂಲದ ಸರ್ವ ನಾಶವಾಗೋದು ಖಚಿತ. ಸಾಯಬಣ್ಣ ಪೂಜಾರಿ ಅಭಿಮತ

ವನ ಸಂಪತ್ತು ನಾಶವಾದ್ರೆ ಮನುಕೂಲದ ಸರ್ವ ನಾಶವಾಗೋದು ಖಚಿತ. ಸಾಯಬಣ್ಣ ಪೂಜಾರಿ ಅಭಿಮತ

ವನ ಸಂಪತ್ತು ನಾಶವಾದ್ರೆ ಮನುಕೂಲದ ಸರ್ವ ನಾಶವಾಗೋದು ಖಚಿತ. ಸಾಯಬಣ್ಣ ಪೂಜಾರಿ ಅಭಿಮತ

ಮಾನವನ ದುರಾಸೆಗೆ ಮಿತಿಯಿಲ್ಲದಂತಾಗಿದೆ 

ಹಣ ಗಳಿಸುವ ಹುನ್ನಾರದಲ್ಲಿ ಇಂದಿನ ಕರಿ ತಲೆಯ ಹುಂಬ ಮಾನವ ಪರಿಸರದ ಪ್ರಜ್ಞೆಯೇ ಇಲ್ಲದೆ ಕೋಟ್ಯಂತರ ವನ ಸಂಪತ್ತನ್ನು ಬರಿದು ಮಾಡಿ ವನ್ಯ ಜೀವ ಸಂಕುಲಗಳನ್ನು ತನ್ನ ಬಾಯಿ ತೀಟೆಗೆ ಬೇಟೆಯಾಡಿ ಭೂತಯಿ ಮಡಿಲು ಬರಿದು ಮಾಡಿದ್ದು ಅಲ್ಲದೆ ವನ ಸಂಪತ್ತನ್ನು ಸೋರೆ ಮಾಡಿ ಭೂತಾಯಿಯ ಮಡಿಲನ್ನು ಬರೆದಾಗಿಸಿ ಮಳೆಗೋಸ್ಕರ ಹೋಮ ಹವನ ಪೂಜೆ ಪುನಸ್ಕಾರ ಮಾಡುತ್ತಿದ್ದಾನೆ. ಹಲವಾರು ವರ್ಷಗಳಿಂದ ಮಳೆ ಇಲ್ದೆ ಪ್ರತಿಯೊಂದು ಜೀವ ಸಂಕುಲವನ್ನು ತತ್ತರಿಸುವಂತೆ ಮಾಡಿದ್ದು ಇದೆ ವಿಕೃತ ಮನುಷ್ಯನ ಹಣ ಗಳಿಸುವ ದುರಾಸೆಯೇ ಮೂಲ ಕಾರಣ.ಹೀಗಾಗಿ ಭೂತಾಯಿಯ ಮಡಿಲಿನಲ್ಲಿ %80ರಷ್ಟು ಮರಗಳ ಮಾರಣ ಹೋಮ ನಡಿದು ಹೋಗಿದೆ ಅಷ್ಟೇ ಅಲ್ದೆ ವನ್ಯ ಜೀವ ಸಂಕುಲ ಕೋಟಿ ಲೆಕ್ಕದಲ್ಲಿ ನರ ಮಾನವ ಬೇಟೆಯಾಡಿ ತಿಂದಿದಾನೆ ಮುಂದೆ ಬರುವ ಯುವ ಪಿಳಿಗೆಯು ವನ್ಯ ಜೀವ ಸಂಕುಲಗಳನ್ನು ಕಾಂಕ್ರಿಟ್ ಗೋಡೆಗಳ ಮೇಲೆ ನೋಡುವ ದಿನಗಳು ಬಹಳ ದೂರವಿಲ್ಲ ಏನಿಸುತ್ತಿದೆ ಕೂಡಲೇ ಅರಣ್ಯ ಇಲಾಖೆಯವರು ಇಂತಹ ಕಾನೂನು ಬಾಹಿರ ಕೃತ್ಯ ನಡೆಸುವ ವ್ಯಕ್ತಿಗಳನ್ನು ಹೆಡೆ ಮುರಿ ಕಟ್ಟಿ ಸೆರಮನಿಗೆ ಕಳಿಸಬೇಕು ಎಂದು ಕರ್ನಾಟಕ ರೈತ ಸಂಘದ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ಸಾಯಬಣ್ಣ ಪೂಜಾರಿ ಅವರು ಮಾಧ್ಯಮದ ಮುಖಂತರ ಮನವಿ ಮಾಡಿದ್ದಾರೆ 

ಕೂಡಲೆ ಸಂಬಂಧಪಟ್ಟ ಪ್ರಜ್ಞಾವಂತ ನಾಗರಿಕರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಪ್ರತಿಯೊಬ್ಬ ರೈತರು ತಮ್ಮ ಜಮೀನಿನ ಬದುಗಳ ಮೇಲೆ ಮರಗಳನ್ನು ನೆಟ್ಟು ಬದುಗಳ ಸಂರಕ್ಷಣೆ ಮಾಡಬೇಕು.ಹಾಗೂ ವನ್ಯ ಜೀವಿಗಳನು ಮಾರಣ ಹೋಮ ಮಾಡುವ ವ್ಯಕ್ತಿಗಳಿಗೆ ಅರಣ್ಯ ಇಲಾಖೆಯವ್ರು ಅಥವಾ ಪೊಲೀಸ್ ಇಲಾಖೆಯವರಿಗೆ ಪ್ರತಿಯೊಬ್ಬ ಸಾರ್ವಜನಿಕರು ಮಾಹಿತಿ ನೀಡಿ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ 

ವರದಿ ಜೇಟ್ಟೆಪ್ಪ ಎಸ್ ಪೂಜಾರಿ