ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲ್ಬುರ್ಗಿಯಲ್ಲಿ ಒಂದು ದಿನದ ವಿಶೇಷ ಕಾರ್ಯಗಾರ.
ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲ್ಬುರ್ಗಿಯಲ್ಲಿ ಒಂದು ದಿನದ ವಿಶೇಷ ಕಾರ್ಯಗಾರ.
ಕಲ್ಬುರ್ಗಿ : ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯಲ್ಲಿ ಐ ಕ್ಯೂ ಎಸಿ ವತಿಯಿಂದ ಪ್ರಾಧ್ಯಾಪಕರಿಗಾಗಿ ಒಂದು ದಿನದ ವಿಶೇಷ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ನ್ಯಾಕ್ ಮತ್ತು ಯು ಜಿ ಸಿ ದೆಹಲಿಯ ಸದಸ್ಯರಾದ ಡಾ. ಎನ್ಎಸ್ ಧರ್ಮಾಧಿಕಾರಿಯವರು ಆಗಮಿಸಿ ಸಶಿಗೆ ನೀರೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮತ್ತು ನಮ್ಮ ಮಹಾವಿದ್ಯಾಲಯದ ಪ್ರಾಧ್ಯಾಪಕರಗಾಗಿ ಹೊಸ ನ್ಯಾ ಕ್ ಪ್ರಕ್ರಿಯೆ ಮತ್ತು ವಿವಿಧ ಅವಳಿ ಮಾನ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ನ್ಯಾಕ್ ವಿಷಯಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳ ಕುರಿತು ಹಾಗೂ ಗ್ರೇಡ್ ಬದಲಾಗಿ ಲೇವಲಸ್ ಅದಲ್ಲದೆ ಏಳು ಕ್ರೆಟೇರಿಯ ಬದಲಾಗಿ 10 ಅಟ್ರಿ ಬೂಟ್ಸ್ ವಿಷಯಗಳ ಕುರಿತು ವಿಶ್ಲೇಷಣೆ ಮಾಡುವ ಮುಖಾಂತರ ಪ್ರಸ್ತುತವಾಗಿ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗಾಗಿ ಹೊಸ-ಹೊಸ ಆಧುನಿಕ ಶಿಕ್ಷಣ ಪಾಠ ಪ್ರವಚನದಲ್ಲಿನದಲ್ಲಿ ಮುಂದುವರಿಯಬೇಕೆಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಅವರು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಡಾ. ಮಲ್ಲೇಶಪ್ಪ ಕುಂಬಾರ,ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ್ ಸಲಗರ್,. ಡಾ. ದೌಲಪ್ಪ ಬಿ ಹೆಚ್, ಡಾ. ರಾಜಶೇಖರ ಮಡಿವಾಳ, ಡಾ. ಅರುಣ್ ಕುಮಾರ್ ಸಲಗರ, ಡಾ. ಬಲಭೀಮ ಸಾಂಗ್ಲಿ ,. ಡಾ. ಸುರೇಶ್ ಮಾಳೆಗಾವ್, ಡಾ.ವಿಜಯ್ ಕುಮಾರ್ ಗೋಪಾಳೆ, ಶ್ರೀ ಅಜಯ್ ಸಿಂಗ ತಿವಾರಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು . ಡಾ. ಅನುಸೂಯಾ ಗಾಯಕವಾಡ ಪ್ರಾರ್ಥಿಸಿದರು. ಐ ಕ್ಯೂ ಎಸಿ ಸಂಯೋಜಕರಾದ ಡಾ. ರಾಜಶೇಖರ್ ಮಡಿವಾಳ ಅವರು ಸ್ವಾಗತಿಸಿದರು. ಡಾ. ರಾಬಿಯಾ ಇಫತ್ ಅವರು ಅತಿಥಿ ಪರಿಚಯ ಮಾಡಿದರು. ಡಾ.ಮಲ್ಲೇಶಪ್ಪ ಕುಂಬಾರ ಅವರು ವಂದಿಸಿದರು. ಡಾ. ಬಲಭೀಮ ಸಾಂಗ್ಲಿಯವರು ನಿರೂಪಿಸಿದರು. ಕಾಲೇಜಿನ ಈ ಕಾರ್ಯಕ್ರಮದಲ್ಲಿ ಎಲ್ಲಾ ಪ್ರಾಧ್ಯಾಪಕರು. ಅತಿಥಿ ಉಪನ್ಯಾಸಕರು. ಹಾಗೂ ಸಿಬ್ಬಂದಿತರ ವರ್ಗದವರು. ಭಾಗವಹಿಸಿದ್ದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು ಎಂದು ಡಾ.ನಾಗಪ್ಪ ಗೋಗಿ ಯವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.