ಬೇಸಿಗೆಯ ಮಳೆ ಗಾಳಿಗಿಗೇ, ನೆಲಕ್ಕೊರುಳಿದ 05 ಕೋಟಿ ವೆಚ್ಚದ ರಸ್ತೆಯ ದ್ವೀಪಥ ಕಂಬಗಳು..!!

ಬೇಸಿಗೆಯ ಮಳೆ ಗಾಳಿಗಿಗೇ,
ನೆಲಕ್ಕೊರುಳಿದ 05 ಕೋಟಿ ವೆಚ್ಚದ ರಸ್ತೆಯ ದ್ವೀಪಥ ಕಂಬಗಳು..!!
ವಾಡಿ: ಪಟ್ಟಣದಲ್ಲಿ ಇನ್ನೂ ಮಳೆಗಾಲನೇ ಪ್ರಾರಂಭವಾಗಿಲ್ಲ ಈ ಬೇಸಿಗೆ ಮಳೆಗೇ 05 ಕೋಟಿ ವೆಚ್ಚದಿಂದ ನಿರ್ಮಾಣವಾಗಿರುವ ರಸ್ತೆಯ ದ್ವೀಪಥ ಕಂಬಗಳು ಸಣ್ಣ ಮಳೆ ಬಿರುಗಾಳಿಗೆ ಸಾಲಾಗಿ ನೆಲಕ್ಕೊರುಳಿವೆ.ಅದೃಷ್ಟವಶಾತ ಒಬ್ಬ ಮಹಿಳೆ ಸೇರಿದಂತೆ ಕೆಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರ ಮತ್ತು ಅನುಷ್ಠಾನಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಒತ್ತಾಯಿಸಿದ್ದಾರೆ.
ಸುಮಾರು ಮೂರು ನಾಲ್ಕು ವರ್ಷಗಳಿಂದ ಕುಂಟುತ್ತಾ ಕಳಪೆ ಮಟ್ಟದಿಂದ ಸಾಗುತ್ತಿದ್ದ ಈ ರಸ್ತೆ ಕಾಮಗಾರಿಯಿಂದ ಅನೇಕರು ತೊಂದರೆ ಅನುಭವಿಸುತ್ತಾನೇ ಇದ್ದಾರೆ.ಗುಣಮಟ್ಟದ ಡಾಂಬರ ರಸ್ತೆ ಇದ್ದರೂ ಕೂಡಾ ಅದನ್ನು ಒಡೆದು ಈ ರೀತಿ ಕಳಪೆ ರಸ್ತೆ ನಿರ್ಮಾಣ ಮಾಡುವುದನ್ನು ಬಿಡಿ, ಯಾಕೆ ಸಾರ್ವಜನಿಕರ ಸಂಪತ್ತನ್ನು ಕಾಮಗಾರಿ ನೆಪದಲ್ಲಿ ಕೊಳ್ಳೆ ಹೊಡಿತ್ತಿದ್ದಿರಿ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದರು ಪ್ರಯೋಜನವಾಗಿಲ್ಲ.
ಕಾಮಗಾರಿ ಪೂರ್ಣಗೊಂಡು ಇನ್ನೂ ಒಂದು ವರ್ಷ ಕೂಡಾ ಆಗಿಲ್ಲ,ರಸ್ತೆ ಮೇಲೆ ಜಲ್ಲಿಕಲ್ಲುಗಳು ತೇಲಿವೆ.ರಸ್ತೆ ಮಧ್ಯ ಅಸಮರ್ಪಕವಾಗಿ ವಿದ್ಯುತ್ ದ್ವೀಪದ ಕಂಬಗಳು ನಿರ್ಮಿಸಿ ಇನ್ನೂ ತಿಂಗಳು ಕೂಡಾ ಕಳೆದಿಲ್ಲ ಈ ರೀತಿಯಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬೀಳುತ್ತಿವೆ.ಇದರಿಂದ ಬಹುತೇಕ ಜನರ ಪ್ರಾಣಗಳ ಜೊತೆಗೆ ಈ ರಸ್ತೆಯ ಗುತ್ತಿಗೆದಾರ ಮತ್ತು ಲೋಕೋಪಯೋಗಿ ಇಲಾಖೆಯ ಅನುಷ್ಠಾನಾಧಿಕಾರಿ ಚೆಲ್ಲಾಟವಾಡುತ್ತಿದ್ದಾರೆ.
ಇದರ ಬಗ್ಗೆ ಸಾಕಷ್ಟು ಸಲ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಹಾಗೂ ಕಳೆದ ವಾರ ಪಟ್ಟಣಕ್ಕೆ ಸಾರ್ವಜನಿಕ ಅಹವಾಲು ಸ್ವೀಕರಿಸಲು ಆಗಮಿಸಿದಾಗ ಕೂಡಾ ಖುದ್ದು ಭೇಟಿಯಾಗಿ ಈ ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ವಿವರಿಸಿದ್ದೇನೆ.
ತಕ್ಷಣ ಸಂಭಂದಿಸಿದ ಅಧಿಕಾರಿಗಳು ಈ ಕಳಪೆ ಕಾಮಗಾರಿ ಯಿಂದಾಗುವ ಬಾರೀ ಅನಾಹುತವನ್ನು ತಪ್ಪಿಸಲು ದೌಡಾಯಿಸಬೇಕು.
ಸಾರ್ವಜನಿಕ ಸಂಪತ್ತನ್ನು ಹಾಳು ಮಾಡಿ,ಜನರ ಜೀವಕ್ಕೆ ಹಾನಿಯಾಗುವಂತ ಕಾಮಗಾರಿ ನಿರ್ಮಾಣದಲ್ಲಿ ತೊಡಗಿದ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆ ಅನುಷ್ಠಾನಾಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ಮತ್ತೆ ಜಿಲ್ಲಾಧಿಕಾರಿಗಳಿಗೆ ನಾವು ಒತ್ತಾಯಮಾಡುತ್ತೇವೆ.ಇದಕ್ಕೆ ತಕ್ಷಣ ಸ್ಫಂದಿಸದೇ, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟಾ ಮುಂದುವರೆಸಿದ್ದೇ ಆದರೆ ಕೆಲವೇ ದಿನಗಳಲ್ಲಿ ಪಟ್ಟಣದ ಸಾರ್ವಜನಿಕ ರೊಂದಿಗೆ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.