ಮಕ್ಕಳಲ್ಲಿ ಸೂಕ್ಷ್ಮ ಪ್ರಪಂಚದ ಯಾತ್ರೆ ಆವಶ್ಯಕ: ಡಾ. ಪಾಟೀಲ
ಮಕ್ಕಳಲ್ಲಿ ಸೂಕ್ಷ್ಮ ಪ್ರಪಂಚದ ಯಾತ್ರೆ ಆವಶ್ಯಕ: ಡಾ. ಪಾಟೀಲ
ಕಲಬುರಗಿ: ಇಂದು ಎಲ್ಲ ಮಕ್ಕಳ ಕೈಯಲ್ಲಿ ಕೇವಲ ಮೊಬೈಲ್ ಕಾಣುತ್ತದೆ, ಆದರೆ ಕಾಲೇಜಿನ ವಿದ್ಯಾರ್ಥಿನಿಯರು ಹುದುಗುವಿಕೆ ಉತ್ಸವ ಆಯೋಜಿಸಿರುವುದು ಮಕ್ಕಳಲ್ಲಿ ಸೂಕ್ಷ್ಮ ಪ್ರಪಂಚದ ಜ್ಞಾನ ಅವಶ್ಯಕ ಎಂದು ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಸಿ. ಸಿ. ಪಾಟೀಲ ಅವರು ನುಡಿದರು.
ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡ ಒಂದು ದಿನದ ಹುದುಗುವಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಇಂದು ಸೂಕ್ಷ್ಮ ಜೀವಶಾಸ್ತ್ರದ ಅಧ್ಯಯನ ಅತಿ ಅವಶ್ಯಕ, ಈ ಅಧ್ಯಯನ ದಿಂದ ಪ್ರಪಂಚದಲ್ಲಿ ಹುಟ್ಟುವ ಅನೇಕ ವೈರಸ್ಗಳ ಪತ್ತೆ ಹಚ್ಚಬಹುದು ಎಂದು ಹೇಳಿದರು. ಕರೋನಾ ಅಂತಹ ವೈಶ್ವಿಕ ರೋಗ ಪತ್ತೆ ಹಚ್ಚಿಲ್ಲು ಸಹಕಾರಿ ಎಂದು ನುಡಿದರು.
ಹುದುಗುವಿಕ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ವಹಿಸಿಕೊಂಡು ಸೂಕ್ಷ್ಮ ಜೀವಶಾಸ್ತ್ರ ವಿಭಾಗದವರು ಹಮ್ಮಿಕೊಂಡ ಈ ಉತ್ಸವ ಬೇರೆ ವಿಭಾಗಗಳಿಗೆ ಪ್ರೋತ್ಸಾಹ ನೀಡುವ ಕೊಂಡಿ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಪ್ರೊ ವೀಣಾ ಎಚ್ ಮತ್ತು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ ಮೋಹನರಾಜ ಪತ್ತಾರ ಅವರು ಉಪಸ್ಥಿತರಿದ್ದರು.
ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿಲ್ಪಾ ಬಂದ್ರವಾಡ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಉಪನ್ಯಾಸಕಿಯಾದ ಸ್ಮಿತಾ ಪಾಟೀಲ್ ಅವರು ವಂದಿಸಿದರು.
ಕಾರ್ಯಕ್ರಮದ ತರುವಾಯ ಮಹಾವಿದ್ಯಾಲಯದ ಮತ್ತು ಪದವಿ ಪೂರ್ವ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಉತ್ಸವದ ಲಾಭ ಪಡೆದುಕೊಂಡರು ಎಂದು ಕಾಲೇಜಿನ ಮಾಧ್ಯಮ ಸಮಿತಿಯ ಸದಸ್ಯರಾದ ಡಾ. ಮಹೇಶ ಗಂವ್ಹಾರ ಅವರು ತಿಳಿಸಿದರು.