ಬ್ರಾಹ್ಮಣ ವಿದ್ಯಾರ್ಥಿ ನಿಲಯ ಹಳೆಯ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ
ಬ್ರಾಹ್ಮಣ ವಿದ್ಯಾರ್ಥಿ ನಿಲಯ ಹಳೆಯ ಸಹಪಾಠಿಗಳ ಪುನರ್ಮಿಲನ ಕಾರ್ಯಕ್ರಮ
ಅದೊಂದು ವಸತಿನಿಲಯ ಒಂದರ ಹಳೆಯ ಸಹಪಾಠಿ ಗಳ ಪುನರ್ಮಿಲನ ಕಾರ್ಯಕ್ರಮ . ಭಾಗವಹಿಸಿದ ಎಲ್ಲರೂ 75 ದಾಟಿದವರು, ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರು. ತಾವಿದ್ದ ಕೊಠಡಿಗಳನ್ನು ನೋಡಿ ಸಂಭ್ರಮಿಸಿದರು.
ಅರವತ್ತು ವರ್ಷಗಳ ಹಿಂದಿನ ತಮ್ಮ ಗೆಳೆಯರನ್ನು ನೋಡಿ ಗುರುತಿಸಿ ಏಕವಚನ ಪ್ರಯೋಗಕ್ಕೆ ಇಳಿದವರು. ಎರಡೂ ದಿನ ಅಲ್ಲಿಯೇ ವಾಸ್ತವ್ಯ ಮಾಡಿದರು . ನೆನಪುಗಳನ್ನು, ಬದುಕು ತಂದ ತಿರುವುಗಳನ್ನು ಹಂಚಿಕೊಂಡರು. ಕೆಲವರು ಸಪತ್ನೀಕರಾಗಿ ಆಗಮಿಸಿದ್ದರು.
ಇದೆಲ್ಲ ನಡೆದದ್ದು ಶಿವಮೊಗ್ಗ ದ 106 ವರ್ಷ ಹಳೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯ ದಲ್ಲಿ ಇದೇ 1 ಮತ್ತು 2 ರಂದು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಜಿಲ್ಲಾ ಅಧ್ಯಕ್ಷ ನಟರಾಜ ಭಾಗವತ್ ಅತಿಥಿ ಗಳನ್ನು ಕುರಿತು ಸಮುದಾಯದ ಹೊಣೆಗಾರಿಕೆ ಕುರಿತು ಮಾತನಾಡಿದರು
ಹೆಚ್.ಎನ್. ಶ್ಯಾಮ ಸುಂದರ ಮತ್ತು ಮಂಜುನಾಥ ಶಾಸ್ತ್ರಿ
ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.