ಸಂಸ್ಕಾರದ ಮನೋಭಾವವಿರುವ ಮನುಷ್ಯ ಎಂದು ಭ್ರಷ್ಟರಾಗಲು ಸಾಧ್ಯವಿಲ್ಲ.ಡಾ. ಮಹಾಲಿಂಗಪ್ಪ ಧನೋಜಿ

ಸಂಸ್ಕಾರದ ಮನೋಭಾವವಿರುವ ಮನುಷ್ಯ ಎಂದು ಭ್ರಷ್ಟರಾಗಲು ಸಾಧ್ಯವಿಲ್ಲ.ಡಾ. ಮಹಾಲಿಂಗಪ್ಪ ಧನೋಜಿ
ಆಳಂದ. ತಾಲೂಕಿನ ಸುಂಟನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾಹಸ ಸಿಂಹ, ಅಭಿನವ ಭಾರ್ಗವ, ಮೈಸೂರು ರತ್ನ, ಹೃದಯವಂತ ಡಾ. ವಿಷ್ಣುವರ್ಧನ ಅವರ 74ನೇ ವರ್ಷದ ಜನ್ಮದಿನದ ಸವಿನೆನಪಿಗಾಗಿ ಡಾ. ವಿಷ್ಣು ಸೇನಾ ಸಮಿತಿ, ಜಿಲ್ಲಾ ಅಧ್ಯಕ್ಷರಾದ ಶ್ರೀ ಮಹೇಶ ವಿಶ್ವಕರ್ಮ ಅವರ ಮಾರ್ಗದರ್ಶನ ಹಾಗೂ ಡಾ. ವಿಷ್ಣು ಸೇನಾ ಸಮಿತಿ, ತಾಲೂಕ ಘಟಕ ಆಳಂದ ಅಧ್ಯಕ್ಷರಾದ ನಾಗರಾಜ್ ಶೀಲವಂತ ನೇತೃತ್ವದಲ್ಲಿ ಹಮ್ಮಿಕೊಂಡ 8 ನೇ ಡಾ. ವಿಷ್ಣು ಉತ್ಸವ ಕಾರ್ಯಕ್ರಮ ನಿಮಿತ್ಯ ಡಾ. ವಿಷ್ಣುವರ್ಧನ ಸೇವಾ ಪ್ರಶಸ್ತಿ 2024 ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮಾತನಾಡಿ ಒಬ್ಬ ಮನುಷ್ಯ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಸಂಸ್ಕಾರದ ಮನೋಭಾವವಿರುವ ಮನುಷ್ಯ ಎಂದೂ ಕೂಡ ಭ್ರಷ್ಟರಾಗಲು ಸಾಧ್ಯವಿಲ್ಲ, ಮತ್ತು ದಾರಿ ತೋರಿಸಿ ಕೊಟ್ಟ ಗುರುವಿನ ಮಾತನ್ನು ಕೇಳದೆ ಯಾವುದೋ ಒಂದು ಆಡಳಿತಕ್ಕೆ ಒಳಪಟ್ಟು ಗುಲಾಮರಾಗಿ ನಮ್ಮತನವನ್ನು ನಾವೇ ಹಾಳು ಮಾಡಿಕೊಂಡಿದ್ದೇವೆ. ನಮ್ಮ ದೇಶದ ಮುಂದಿನ ಪೀಳಿಗೆಗಳಿಗಾಗಿ ಏನು ಮಾಡಬೇಕು ಏನು ಮಾಡಬಾರದು ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಅದಲ್ಲದೆ ಜಗತ್ತಿನ ಅತಿ ದೊಡ್ಡ ಶಕ್ತಿ ಎಂದರೆ ಅದು ತಾಯಿ ಮಕ್ಕಳಲ್ಲಿ ಸುಸಂಸ್ಕೃತಿಯನ್ನು ಬೆಳೆಸುವಂತಹ ಗುಣಗಳುಳ್ಳ ತಾಯಿಯ ಪಾತ್ರ ಬಹಳ ಪ್ರಮುಖವಾದದ್ದು ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಮಹೇಶ್ ವಿಶ್ವಕರ್ಮ ಮಾತನಾಡಿದರು ಡಾ ವಿಷ್ಣುವರ್ಧನ್ ಅವರು ಸೃಜನಶೀಲತೆಯ ವ್ಯಕ್ತಿತ್ವವುಳ್ಳ ನಟರಾಗಿದ್ದರು. ಅವರ ಸಿನಿಮಾಗಳು ಇಂದಿಗೂ ಮುಂದೆ ಎಂದೆಂದಿಗೂ ಸ್ಪೂರ್ತಿದಾಯಕವಾಗಿರ ತಕ್ಕಂಥ ಸಿನಿಮಾಗಳಾಗಿದ್ದು. ನಾಡಿನ ಹಲವಾರು ಜನರಿಗೆ ಡಾ. ವಿಷ್ಣುವರ್ಧನ್ ಅವ್ರು ಆದರ್ಶ ಪುರುಷರಾಗಿದ್ದಾರೆ. ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ವಿಶೇಷವಾಗಿ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.
ಡಾ. ರಾಜು ಜಿ. ತೆಗ್ಗಳ್ಳಿ ಹಿರಿಯ ಮುಖ್ಯಸ್ಥರು, ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಉದ್ಘಾಟಕರಾಗಿ.ಶ್ರೀಮತಿ ಸ್ಮಿತಾ ಪಿ. ಜೈನ್ ಮುಖ್ಯ ಗುರುಗಳು, ಸರಕಾರಿ ಪ್ರೌಢ ಶಾಲೆ, ಸುಂಟನೂರಅಧ್ಯಕ್ಷತೆ ವಹಿಸಿಕೊಂಡಿದ್ದರು
ಮುಖ್ಯ ಅತಿಥಿಗಳುಡಾ. ಮಹಾಲಿಂಗಪ್ಪ ಧನೋಜಿ ಡೀನ್, ಕೃಷಿ ಮಹಾವಿದ್ಯಾಲಯ ಕಲಬುರಗಿ.ಶ್ರೀ ಮಹೇಶ ವಿಶ್ವಕರ್ಮ
ಜಿಲ್ಲಾ ಅಧ್ಯಕ್ಷರು, ಡಾ. ವಿಷ್ಣು ಸೇನಾ ಸಮಿತಿ, ಕಲಬುರಗಿಶ್ರೀ ಪ್ರವೀಣ್ ಕುಮಾರ್ ಮಲ್ಲಿನಾಥ ಉಡಗಿ PDO, ಗ್ರಾಮ ಪಂಚಾಯತ್ ಸುಂಟನೂರ
ಸರಕಾರಿ ಪ್ರೌಢ ಶಾಲೆ, ಸುಂಟನೂರ ಹಾಗೂ S R ಪಾಟೀಲ್ ಗ್ರಾಮೀಣ ಪ್ರೌಢ ಶಾಲೆ ಆಲೂರ ಬಿ ಶಿಕ್ಷಕರು ಶ್ರೀ ಅಣ್ಣಾರಾವ್ ಪಾಟೀಲ್ .ಡಾ.ವಿಷ್ಣುವರ್ಧನ್ ಅವರ ಹಿರಿಯ ಅಭಿಮಾನಿಗಳು.ಶ್ರೀ ಮಲ್ಲಿಕಾರ್ಜುನ ದಣ್ಣೂರ ಸದಸ್ಯರು, ಗ್ರಾಮ ಪಂಚಾಯತ್ ಸುಂಟನೂರ ಶ್ರೀ ಮಾರುತಿ ಗುಂಡದಸದಸ್ಯರು, ಡಾ. ವಿಷ್ಣು ಸೇನಾ ಸಮಿತಿ, ಆಳಂದಶ್ರೀ ದಯಾನಂದ ಭಾಲ್ಕಿ ಹಾಲಕ್ಕಿ ಚಿತ್ರ ತಂಡದ ನಿರ್ಮಾಪಕರು, ನಿರ್ದೇಶಕರು.ಮಲ್ಲಿಕಾರ್ಜುನಜೋಳದ .ಜನಾರ್ಧನ ಹುಲಿಮನಿ .ಪ್ರವೀಣ ಕುಂಬಾರ.ಜಗನ್ನಾಥ ಮಡಿವಾಳ . ರಾಜಶೇಖರ ಪಿ.ಮಾಲಿಪಾಟೀಲ್ಮಾರುತಿ ಗುಂಡದ.ಸಿದ್ದಯ್ಯ ಸ್ಥಾವರಮಠ. ಚನ್ನಬಸವೇಶ್ವರ ಮಠಪತಿ. ಸತೀಶ ಗುಡದ.ಅರವಿಂದ ಖಂಬದ.ಜಗದೀಶ ಮೂಲಗೆ.ಮದನ ಮಾಳಾ. ಕಲ್ಯಾಣಿ ಗವಿ .ಶ್ರೀ ಸಂತೋಷ
ಹೌಗುಂಡ . ಪ್ರದೀಪ ಟೀಂಗಳಿ ಗುರುರಾಜ ಖಂಬದ.ಈರಣ್ಣಾ ಸುತಾರ.ಮಂಜುನಾಥ ಗುಂಡದ. ಬಾಬು ಖಾನಾಪೂರ. ಶಿವರಾಜ್ ಶೀಲವಂತ.ನಿರ್ದೇಶಕರು.ಡಾ. ವಿಷ್ಣು ಸೇನಾ ಸಮಿತಿ ಜಿಲ್ಲಾ ಘಟಕ, ಕಲಬುರ್ಗಿಯ ಹಾಗು ತಾಲೂಕ ಘಟಕದ ಎಲ್ಲಾ ಪದಾಧಿಕಾರಿಗಳು, ಹಾಗೂ ಸಮಸ್ತ ದಾದಾ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ಜಟ್ಟಪ ಎಸ್ ಪೂಜಾರಿ