ಹಿಂದೂ ಮಿತ್ರ ಗಣೇಶ ಮಂಡಳಿ ವತಿಯಿಂದ ವಿಶೇಷವಾಗಿ ಬಾಳೆ ಎಲೆಯ ಮೇಲೆ ಊಟದ ವ್ಯವಸ್ಥೆ

ಹಿಂದೂ ಮಿತ್ರ ಗಣೇಶ ಮಂಡಳಿ ವತಿಯಿಂದ ವಿಶೇಷವಾಗಿ ಬಾಳೆ ಎಲೆಯ ಮೇಲೆ ಊಟದ ವ್ಯವಸ್ಥೆ

ಹಿಂದೂ ಮಿತ್ರ ಗಣೇಶ ಮಂಡಳಿ ವತಿಯಿಂದ ವಿಶೇಷವಾಗಿ ಬಾಳೆ ಎಲೆಯ ಮೇಲೆ ಊಟದ ವ್ಯವಸ್ಥೆ

ಕಲಬುರಗಿ ನಗರದ ವಿರೇಂದ್ರ ಪಾಟೀಲ್ ಲೇಔಟ್‌ನಲ್ಲಿ ಹಿಂದೂ ಮಿತ್ರ ಗಣೇಶ ಮಂಡಳಿ ವತಿಯಿಂದ ಎರಡನೇ ವರ್ಷದ ಪ್ರಯುಕ್ತ ವಿರೇಂದ್ರ ಪಾಟೀಲ್ ಲೇಔಟ್ ನಲ್ಲಿ ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪ್ರತಿ ದಿನ ವಿಶೇಷ ಕಾರ್ಯಕ್ರಮಗಳು ಚಿಕ್ಕ ಮಕ್ಕಳ ಕುರ್ಚಿ ಆಟ ಲಿಂಬೆ ಹಣ್ಣಿನ ಆಟ ಸೇರಿದಂತೆ ಅನೇಕ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿತ್ತು. 

4ನೇ ದಿನದ ಹಿಂದೂ ಮಿತ್ರ ಗಣೇಶ ಮಂಡಳಿಯ ವತಿಯಿಂದ ವಿಶೇಷವಾಗಿ 16 ರೀತಿಯ ಊಟದ ವ್ಯವಸ್ಥೆ ಮಾಡಿದ್ದರು ಅದರಲ್ಲು ಪ್ಲಾಸ್ಟಿಕ್ ಮುಕ್ತ ಸಲುವಾಗಿ ಬಂದAತಹ ಭಕ್ತರಿಗೆ ವಿಶೇಷವಾಗಿ ಬಾಳೆ ಎಲೆಯ ಮೇಲೆ ಊಟದ ವ್ಯವಸ್ಥೆ ಮಾಡಿ ಗಮನ ಸೆಳೆದರು. ಗಣೇಶ ವಿಸರ್ಜನೆಕ್ಕೂ ಮುನ್ನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು ಎಂದು ಹಿಂದೂ ಮಿತ್ರ ಗಣೇಶ ಮಂಡಳಿಯ ಮುಖಂಡರು ತಿಳಿಸಿದ್ದರು.

ಈ ಸಂದರ್ಭದಲ್ಲಿ ಹಿಂದೂ ಮಿತ್ರ ಗಣೇಶ ಮಂಡಳಿ ಸದಸ್ಯರಾದ ನೀಲೇಶ ಚವ್ಹಾಣ್, ಹಣಮಂತರಾಯ್ ವಗದರಿ, ಅಂಬರೀಶ್ ಆಂದೋಲ, ವಿಕ್ಕಿ ಮಡಿವಾಳ, ಮಿಥುನ್ ಚವ್ಹಾಣ್, ಅಮರ್, ಉಮೇಶ್ ಚವ್ಹಾಣ್, ಶೇಖರ್ ಬಿರಾದಾರ, ಮಲ್ಲಿಕಾರ್ಜುನ್, ಮಹಾದೇವಿ ಓಂ ನಗರ ಜಾದವ್, ಮಲ್ಲಮ್ಮ ಶಿವಾನಂದ, ಸೋನಾಬಾಯಿ ಮೋತಿರಾಮ ಚವ್ಹಾಣ್ ಸೇರಿದಂತೆ ಅನೇಕ ಬಡಾವಣೆಯ ಮಹಿಳೆಯರು ಮುಖಂಡರು ಯುವಕರು ಉಪಸ್ಥಿತರಿದ್ದರು.