ಭಾರತದ ಅತಿ ದೊಡ್ಡ ಉತ್ಸವದಲ್ಲಿ ಪಾಲ್ಗೊಳ್ಳಿ

ಭಾರತದ ಅತಿ ದೊಡ್ಡ ಉತ್ಸವದಲ್ಲಿ ಪಾಲ್ಗೊಳ್ಳಿ

ಭಾರತದ ಅತಿ ದೊಡ್ಡ ಉತ್ಸವದಲ್ಲಿ ಪಾಲ್ಗೊಳ್ಳಿ

ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕ ಬಸವರಾಜ್ ಪಾಟೀಲ್ ಸೇಡಂ ಹೇಳಿಕೆ:

ಕಲಬುರಗಿ : ಕಾಗಿಣಾ ನದಿ ತಟದ ಸೇಡಂ ಸಮೀಪದ ಬೀರನಹಳ್ಳಿ ಕ್ರಾಸ್ ನಲ್ಲಿ ಜನವರಿ 29ರಿಂದ ಪ್ರಾರಂಭವಾಗಿ 9 ದಿನಗಳ ಕಾಲ ನಡೆಯುವ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವವು ಖಾಸಗಿ ರಂಗದ ಅತೀ ದೊಡ್ಡ ಉತ್ಸವವಾಗಿದ್ದು ಭಾರತೀಯ ಸಂಸ್ಕೃತಿಯ ಮಹೋತ್ಸವವಾಗಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಲಿದೆ ಎಂದು ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ ಪಾಟೀಲ್ ಸೇಡಂ ಹೇಳಿದರು. 

   ಕಲಬುರ್ಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜನವರಿ 16ರಂದು ನಡೆದ ವಿಶೇಷ ಸಿದ್ಧತಾ ಸಭೆಯಲ್ಲಿ ಮಾತನಾಡಿ ಸರಕಾರದ ಸಹಾಯವಿಲ್ಲದೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯುವ ಈ ರೀತಿಯ ಉತ್ಸವ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತದ್ದು. ಆಮಂತ್ರಣ ಪತ್ರಿಕೆಯನ್ನು ನೋಡಿದ ಎಲ್ಲರೂ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಶರಣರ ನೆಲ,ಖಾಜಾ ಬಂದೇ ನವಾಝರ ಪುಣ್ಯಭೂಮಿ ಹಾಗೂ ಬುದ್ಧ ವಿಹಾರದ ಪವಿತ್ರ ತಾಣದ ಕಲ್ಬುರ್ಗಿ ಜಿಲ್ಲೆಯ ಹಾಗೂ ಕಲ್ಯಾಣ ನಾಡಿನ ಜನರ ನಡೆ ನುಡಿ ಪಸರಿಸಲು ಮತ್ತು ಇಲ್ಲಿನ ಜನತೆಯ ಉತ್ಕೃಷ್ಟತೆ ಕಾಪಾಡಿ, ಆನಂದವನ್ನು ಎಲ್ಲರಿಗೂ ಹಂಚುವ ಸುವರ್ಣ ಅವಕಾಶ ಈ ಉತ್ಸವದಲ್ಲಿ ಎಲ್ಲರಿಗೂ ಲಭಿಸಲಿದೆ ಎಂದರು.

   ಭಾರತೀಯ ಸಂಸ್ಕೃತಿಯು ಅನಾವರಣಗೊಳ್ಳುವ ಪ್ರಕೃತಿ ನಗರ ದಲ್ಲಿ ನಡೆಯುವ ಉತ್ಸವವು ಕುಂಭಮೇಳದಂತೆ ದೇಶವಿದೇಶದ ಜನತೆಯ ಪಾಲ್ಗೊಳ್ಳುವಿಕೆಯಿಂದ ಅದ್ಭುತ ದಾಖಲೆಯಾಗಲಿದೆ. ಈ ಮೂಲಕ ದೇಶದ 100 ಕೋಟಿ ಜನರಿಗೆ ದೊಡ್ಡ ಸಂದೇಶ ತಲುಪುವುದು ನಿಶ್ಚಿತ. ಪ್ರತಿಯೊಬ್ಬರು ಕನಿಷ್ಠ ಒಂದು ದಿನವಾದರೂ ಉತ್ಸವದಲ್ಲಿ ಪಾಲ್ಗೊಳ್ಳಬೇಕು. ಜೊತೆಗೆ ತಮ್ಮ ಸಂಪರ್ಕದಲ್ಲಿರುವ ನೂರು ಜನರಿಗೆ ಕಾರ್ಯಕ್ರಮದ ಸಂದೇಶ ಕಳಿಸಿ ಪಾಲ್ಗೊಳ್ಳುವಂತೆ ಮಾಡಿ ಧನ್ಯತೆ ಹೊಂದುವ ಸುವರ್ಣ ಅವಕಾಶ ಸಿಗಲಿದೆ. ಉತ್ಸವದಲ್ಲಿ 300ಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಉದ್ಘಾಟನೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುತ್ತಿದ್ದು ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದ ನಾನಾ ಪಾಟೇಕರ್, ಸಚಿನ್ ತೆಂಡೂಲ್ಕರ್, ಅರವಿಂದ ರಮೇಶ್ ಜೀವನ ಮೌಲ್ಯದ ಸಂದೇಶವನ್ನು ಸಾರಲಿದ್ದಾರೆ. ಅಮೆರಿಕದಂತಹ ರಾಷ್ಟ್ರಗಳಿಗೆ ನಮ್ಮ ಮಕ್ಕಳು ತೆರಳಿ ಅಲ್ಲಿ ವಿದ್ಯಾವಂತ ಜೀತದಾಳುಗಳಾಗುವುದನ್ನು ಬಿಟ್ಟು ಇಡೀ ಜಗತ್ತಿಗೆ ನೀಡುವ ಮಕ್ಕಳಾಗಬೇಕಾಗಿದೆ ಅಂತಹ ಸ್ವಾಭಿಮಾನದ ಬದುಕಿಗೆ ಉತ್ಸವ ಪ್ರೇರಣೆಯನ್ನು ನೀಡಲಿದೆ ಎಂದು ಬಸವರಾಜ್ ಪಾಟೀಲ್ ಹೇಳಿದರು. 

ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ಮೇಘಾ ಶಾಸ್ತ್ರಿ ಪ್ರಾರ್ಥನೆ ಗೀತೆ ಹಾಡಿದರು. ಉತ್ಸವದ ಸಹ ಸಂಘಟಕರಾದ ಮಾರ್ತಾಂಡ ಶಾಸ್ತ್ರಿ ಸರ್ವರನ್ನು ಸ್ವಾಗತಿಸಿದರು. ನರಸಪ್ಪ ರಂಗೋಲಿ ನಿರ್ವಹಿಸಿದರು. 

ಉತ್ಸವದ ವೈಶಿಷ್ಟ್ಯತೆಗಳು:

ಉತ್ಸವಕ್ಕೆ ಮುನ್ನುಡಿ ಶೋಭಾ ಯಾತ್ರೆ

{ಉತ್ಸವದ ಪೂರ್ವಭಾವಿಯಾಗಿ ಜನವರಿ 28ರಂದು ಕಲಬುರಗಿ ಮತ್ತು ಸೇಡಂನಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ವೈಭವ ಸಾರುವ ಆಕರ್ಷಕ ಶೋಭಾ ಯಾತ್ರೆ ನಡೆಯಲಿದೆ.}

ಎರಡು ರಥಗಳ ಸಂಗಮ

ಜ.28ರಂದು ನಡೆಯುವ ಶೋಭಾ ಯಾತ್ರೆಯಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಂಚರಿಸಿದ ರಥದ ಸಂಗಮವಾಗಲಿದ್ದು ಶೋಭಾ ಯಾತ್ರೆಗೆ ಮೆರುಗು ನೀಡಲಿದೆ. ನಗರೇಶ್ವರ ಶಾಲೆಯಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುವ ಶೋಭಾ ಯಾತ್ರೆಯಲ್ಲಿ ಜನಪದ ಕಲಾವಿದರು, ಸ್ಥಬ್ಧ ಚಿತ್ರಗಳು ಹಾಗೂ ಸಾಂಸ್ಕೃತಿಕ ತಂಡಗಳು ಪಾಲ್ಗೊಳ್ಳಲಿದ್ದು ಸೂಪರ್ ಮಾರ್ಕೆಟ್ ಜಗತ್ ವೃತ್ತ, ಗೋವಾ ಹೋಟೆಲ್ ದಾರಿಯಾಗಿ ನೂತನ ವಿದ್ಯಾಲಯ ಮೈದಾನದಲ್ಲಿ ಮಧ್ಯಾಹ್ನ 12 ಗಂಟೆಗೆ ಸಂಪನ್ನಗೊಳ್ಳಲಿದೆ.

 ಮೆರವಣಿಗೆ ಯುದ್ದಕ್ಕೂ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಜನ ಜಮಾಯಿಸುವ ನಿರೀಕ್ಷೆ ಇದೆ. ಮೆರವಣಿಗೆಯ ಮೇಲೆ ಪುಷ್ಪ ವೃಷ್ಟಿ ಹಾಕಬೇಕಲ್ಲದೆ ಸಣ್ಣ ಮಕ್ಕಳಿಗೆ ಗೋಪಿ, ರಾಮ - ಕೃಷ್ಣರ ವೇಷವನ್ನು ಹಾಕಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಂಭ್ರಮಿಸಲು ಸಂಘಟಕರು ವ್ಯವಸ್ಥೆ ಕಲ್ಪಿಸಿದ್ದಾರೆ  

ಉತ್ಸವಕ್ಕೆ ಬಸ್ ವ್ಯವಸ್ಥೆ

ಉತ್ಸವಕ್ಕೆ ವಿಶೇಷವಾಗಿ ಕಲಬುರಗಿ ಬಸ್ ನಿಲ್ದಾಣ, ಹಿಂದಿ ಪ್ರಚಾರ ಸಭೆ ಹಾಗೂ ಖರ್ಗೆ ಪೆಟ್ರೋಲ್ ಪಂಪು ಬಳಿಯಿಂದ ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣದ ಸೌಲಭ್ಯ ಸಿಗಲಿದೆ. ಉತ್ಸವ ಸಂದರ್ಭದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ವಾಹನಗಳು ಹೆಚ್ಚಿಗೆ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗುವ ಸಂಭವವಿದ್ದು ಕಲಬುರಗಿಯಿಂದಯಿಂದ ಉತ್ಸವ ಸ್ಥಳಕ್ಕೆ ಆಗಮಿಸಲು ಕನಿಷ್ಠ ಒಂದೂವರೆ ತಾಸು ತಗಲುವುದರಿಂದ ಆಗಮಿಸುವವರು ಬೇಗ ಹೊರಡುವುದು ಉಚಿತ ಎಂಬ ಸೂಚನೆ ನೀಡಲಾಗಿದೆ. 

ಒಂದುವರೆ ಲಕ್ಷ ಮಕ್ಕಳಿಗೆ ಮಾತೆಯರ ಕೈ ತುತ್ತು

ಉತ್ಸವದಲ್ಲಿ ದೇಶದ ಸಂಸ್ಕೃತಿಯ ಭಾಗವಾಗಿ ಮಾತೆಯರ ಕೈ ತುತ್ತು ನೀಡುವ ಕಾರ್ಯಕ್ರಮವಿದ್ದು ಸುಮಾರು ಒಂದುವರೆ ಲಕ್ಷ ಮಕ್ಕಳು ಭಾಗವಹಿಸಲಿದ್ದಾರೆ. 50ರಿಂದ 80ಸಾವಿರ ಮಾತೆಯರು ಪಾಲ್ಗೊಳ್ಳುವರು. ಪ್ರತಿ ಮಾತೆ ಕನಿಷ್ಠ ಐದು ಜನರಿಗೆ ಬೇಕಾಗುವ ಒಂದು ಸಿಹಿ, ಮೊಸರನ್ನ ಚಿತ್ರಾನ್ನ, ಕಾಯಿ ಪಲ್ಯ ಮತ್ತು ಚಪಾತಿಯನ್ನು ತರಬೇಕಾಗುವುದು. ಮಕ್ಕಳ ಜೊತೆಗೆ ದೊಡ್ಡವರಿಗೂ ಊಟ ಸಿಗಲಿದೆ.

ಕನಿಷ್ಠ ಒಂದು ರೂಪಾಯಿ ದೇಣಿಗೆ ನೀಡಿ

ಉತ್ಸವದಲ್ಲಿ ಪಾಲ್ಗೊಳ್ಳುವ ಸಾರ್ಥಕತೆಯನ್ನು ಸಾಕ್ಷಿ ಮಾಡಲು ಕನಿಷ್ಠ ಒಂದು ರೂಪಾಯಿ ಕ್ಯು ಆರ್ ಕೋಡ್ ಮೂಲಕ ಕಳುಹಿಸಿ ಸಾರ್ಥಕತೆ ಹೊಂದಬೇಕು. ಒಂದರಿಂದ ಐದು ರೂಪಾಯಿ 50 ರೂಪಾಯಿ 100 ರೂಪಾಯಿ ನೀಡಿ ಧನ್ಯತೆ ಹೊಂದಬೇಕು 

ಮಕ್ಕಳಿಗೆ ಉಚಿತ ಪಪ್ಪಾಯಿ , ಐಸ್ ಕ್ರೀಮ್

 ಉತ್ಸವದಲ್ಲಿ ಮಕ್ಕಳಿಗೆ ಖುಷಿ ಪಡಿಸಲು ಮಕ್ಕಳ ಲೋಕದಲ್ಲಿ ಉಚಿತವಾಗಿ ಪಪ್ಪಾಯಿ ಹಾಗೂ ಐಸ್ ಕ್ರೀಮ್ ವಿತರಿಸಲು ಸಿದ್ಧತೆ ನಡೆದಿದೆ.

ನಂದಿಕೂರಲ್ಲಿ ಆರಂಭಗೊಳ್ಳುವ ಐಸ್ ಕ್ರೀಮ್ ಫ್ಯಾಕ್ಟರಿ ಉದ್ಯಮಿಯೊಬ್ಬರು ಐಸ್ ಕ್ರೀಮ್ ವಿತರಿಸುವರು.