ಅಂಬಿಗರ ಚೌಡಯ್ಯ ಜಯಂತಿ ಬರದ ಸಿದ್ಧತೆ ಶಿವಕುಮಾರ್ ಯಾಗಾಪೂರ
ಅಂಬಿಗರ ಚೌಡಯ್ಯ ಜಯಂತಿ ಬರದ ಸಿದ್ಧತೆ ಶಿವಕುಮಾರ್ ಯಾಗಾಪೂರ
ಚಿತ್ತಾಪುರ: ಜನೆವರಿ 21 ರಂದು ನಡೆಯುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಬರದ ಸಿದ್ಧತೆ ನಡೆದಿದೆ ಎಂದು ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಾಪೂರ ತಿಳಿಸಿದರು.
ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಮ್ಮಿಕೊಂಡ ಸಿದ್ಧತೆ ಕಾರ್ಯವನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಯಂತಿ ಸಮಿತಿ ಅಧ್ಯಕ್ಷರಾದ ಭೀಮಣ್ಣ ಸೀಬಾ ಅವರ ಮಾರ್ಗದರ್ಶನದಲ್ಲಿ ಸಿದ್ಧತೆ ಕಾರ್ಯ ಆರಂಭಗೊಂಡಿದೆ. ನಾಳೆ ವೃತ್ತಕ್ಕೆ ಸುಣ್ಣ ಬಣ್ಣ ಮಾಡಿಸಲಾಗುತ್ತದೆ. ಅಂಬಿಗರ ಚೌಡಯ್ಯ ವೃತ್ತದ ಮುಂದೆ ಇರುವ ವಿದ್ಯುತ್ ಟಿಸಿ ಕಂಬವನ್ನು ಸ್ಥಳಾಂತರಗೊಳಿಸಲಾಗಿದೆ. ನಾನು ಅಧ್ಯಕ್ಷನಾಗಿ ಎರಡನೇ ದಿನವೇ ಅಂಬಿಗರ ಚೌಡಯ್ಯನವರ ವೃತ್ತದ ಮುಂದೆ ಇರುವ ಟಿಸಿಯನ್ನು ಕೂಡಲೆ ಸ್ಥಳಾಂತರಿಸಬೇಕು ಎಂದು ಅರ್ಜಿ ನೀಡಲಾಗಿತ್ತು. ಅದರಂತೆ ಇಂದು ಆ ಕಾರ್ಯ ಪೂರ್ಣಗೊಂಡಿದೆ. ವೃತ್ತದ ಸುತ್ತಲೂ ದೀಪಾಲಂಕಾರ ಮಾಡಲಾಗುವುದು ಮತ್ತು ಈಗಾಗಲೇ ಅಂಬಿಗರ ಚೌಡಯ್ಯ ವೃತ್ತದ ಆವರಣದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಯಂತಿ ಸಮಿತಿ ಅಧ್ಯಕ್ಷರಾದ ಭೀಮಣ್ಣ ಸೀಬಾ ಅವರು ಮಾತನಾಡಿ 21 ರಂದು ನಡೆಯುವ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯ ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ ಅಲ್ಲಿಗೆ ಡೊಳ್ಳು ಕುಂಭಮೇಳದ ವ್ಯವಸ್ಥೆ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 2000 ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ಜಯಂತಿಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮದ ಮುಖಂಡರು ಯುವಕರು ತಪ್ಪದೆ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ತಮ್ಮಣ್ಣ ಡಿಗ್ಗಿ, ಸಾಬಣ್ಣ ಭರಾಟೆ, ದಶರಥ ದೊಡ್ಡಮನಿ, ಮಾಹಾದೇವ ಮುಗಟಿ ಇಟಗಾ, ಮಾಹಾದೇವ ಹೊನಗೇರಿ, ಶರಣು ಭಾಗೋಡಿ, ಮಹೇಶ ಸಾತನೂರ್, ನಾಗರಾಜ ಆಸಬಾ ಸೇರಿದಂತೆ ಇತರರು ಇದ್ದರು.