ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ನಂದಿನಿ ಸುರೇಂದ್ರ ಸನಬಾಳ್ ಆಯ್ಕೆ

ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ  ನಂದಿನಿ ಸುರೇಂದ್ರ ಸನಬಾಳ್ ಆಯ್ಕೆ

ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ನಂದಿನಿ ಸುರೇಂದ್ರ ಸನಬಾಳ್ ಆಯ್ಕೆ

         ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ಶ್ರೀಮತಿ. ನಂದಿನಿ ಸುರೇಂದ್ರ ಸನಬಾಳ್ ಆಯ್ಕೆಯಾಗಿರುವರು.ಮಹಿಳಾ ಕಿರುಕುಳ, ಮಾನಸಿಕ ಹಿಂಸೆ, ಹೆಚ್ಚುತ್ತಿರುವ ಅತ್ಯಾಚಾರ ತಡೆಗಟ್ಟಲು ಹಾಗೂ ಬೌದ್ಧಿಕವಾಗಿ ಮಹಿಳೆಯರು ಮತ್ತು ಪುರುಷರು ಸಮಾನವಾಗಿದ್ದರು ಕೂಡ ಅವರದ್ದೇ ಆದ ಸಮಸ್ಯೆಗಳು ಇರುವ ಕಾರಣ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ನೌಕರರ ಸಂಘ ಆಸ್ತಿತ್ವಕ್ಕೆ ಬಂದಿದೆ.

ಮೂಲತಃ ಬೀದರ ಜಿಲ್ಲೆಯ ಶ್ರೀ. ಪುಟ್ಟರಾಜ ಹಾಗೂ ಶ್ರೀಮತಿ. ರಾಜೇಶ್ವರಿ ಶಂಭುಶಂಕರ್ ಹುಮನಾಬಾದ ಶಿಕ್ಷಕ ದಂಪತಿಯ ಹಿರಿಯ ಮಗಳಾಗಿ ಜನಿಸಿದ ನಂದಿನಿ ಸನಬಾಳ್‌ ಕಲಬುರಗಿ ಜಿಲ್ಲೆಯ ಶ್ರೀ ಸುರೇಂದ್ರ ಸನಬಾಳ್ ಅವರೊಂದಿಗೆ ತನ್ನ ವೈವಾಹಿಕ ಜೀವನ ಪ್ರಾರಂಭಿಸಿದ ಇವರು ವೃತ್ತಿ ಯಲ್ಲಿ ಶಿಕ್ಷಕಿಯಾಗಿದ್ದು, ಪ್ರಸ್ತುತ ಪಾಳಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಮಕ್ಕಳಿಗೆ ಜ್ಞಾನ ಬೋಧನೆ ಮಾಡುತ್ತಿದ್ದಾರೆ. ಸನಬಾಳ್ ಇವರು   ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಇವರಿಗಿರುವ ವಿಶೇಷ ಕಾಳಜಿಯನ್ನು ಗುರುತಿಸಿ ಸನಬಾಳ್ ಇವರನ್ನು ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಶ್ರೀಮತಿ. ರಮಾ ರಾಜ್ಯಾಧ್ಯಕ್ಷರು ಹಾಗೂ ಶ್ರೀಮತಿ. ಶೈಲಜಾ ವಿ ಗೌಡ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಆದೇಶ ಹೊರಡಿಸಿ  ಅಭಿನಂದಿಸಿದ್ದಾರೆ.

ಕಲಬುರಗಿ ವರದಿ:-ನಾಗರಾಜ್ ದಂಡಾವತಿ