ಬಸವೇಶ್ವರ ಆಸ್ಪತ್ರೆಯಿಂದ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ
ಬಸವೇಶ್ವರ ಆಸ್ಪತ್ರೆಯಿಂದ ಮಕ್ಕಳಿಗೆ ಉಚಿತ ಚಿಕಿತ್ಸಾ ಶಿಬಿರ
ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ ಜಿ ನಮೋಶಿ ಮತ್ತು ಆಡಳಿತ ಮಂಡಳಿಯ ಸಲಹೆ ಮೇರೆಗೆ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗದಿಂದ
ನಗರದ ಚನ್ನಬಸವೇಶ್ವರ ಶಾಲೆಯ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ ರೂಪಾ ಮಂಗಶೆಟ್ಟಿ ಅವರು ಈ ಶಿಬಿರದ ನೇತೃತ್ವ ವಹಿಸಿದ್ದರು. ಚಿಕ್ಕ ಮಕ್ಕಳ ತಜ್ಞರಾದ ಡಾ ಶರಣಕುಮಾರ, ಡಾ ಅಪೂರ್ವ ಎ ಬಿ, ನೇತ್ರ ತಜ್ಞರಾದ ಡಾ ಸ್ಮೀತಾ ಪಾಟೀಲ್ ಅವರು ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಸಲಹೆ ನೀಡಿದರು. ಸಂಸ್ಥೆಯ ವತಿಯಿಂದಲೇ ಮಕ್ಕಳಿಗೆ ಅವಶ್ಯಕತೆ ಇರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಶಿಬಿರದಲ್ಲಿ ಒಟ್ಟು 98 ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಂಡರು. ಈ ಶಿಬಿರದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಸವೇಶ್ವರ ಆಸ್ಪತ್ರೆಯ ಸಂವಹನಾಧಿಕಾರಿ ಡಾ ಕಿರಣ್ ದೇಶಮುಖ್,ಸದಸ್ಯರಾದ ಡಾ ಎಸ್ ಆರ್ ಹರವಾಳ, ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್, ವೈದ್ಯಕೀಯ ಅಧೀಕ್ಷಕರಾದ ಡಾ ಎಸ್ ಎಂ ಅವಂತಿ ಹಾಗೂ ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ಪ್ರೀಯ ದರ್ಶನಿ ಟೆಂಗಳಿ ಉಪಸ್ಥಿತರಿದ್ದರು