ಅಸ್ಪೃಶ್ಯತೆ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಿದ ಛತ್ರಪತಿ ಶಾಹು ಮಹಾರಾಜ್

ಅಸ್ಪೃಶ್ಯತೆ ನಿರ್ಮೂಲನೆಗೆ ಕಾರ್ಯಕ್ರಮ ರೂಪಿಸಿದ ಛತ್ರಪತಿ ಶಾಹು ಮಹಾರಾಜ್

  ಕಲಬುರಗಿ : ೨೮ನೇ ಜುಲೈ ,

ಸ್ವಾತಂತ್ರ ಪೂರ್ವದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಧೀಮಂತ ನಾಯಕ ಛತ್ರಪತಿ ಶಾಹು ಮಹಾರಾಜರು,

 ಅವರ ಜೀವನ ಇಂದಿನ ಜನರಿಗೆ ದಾರಿದೀಪವಾಗಿದೆ ಎಂದು ಬಹುಜನ ಮತದಾರ ವೇದಿಕೆಯ ರಾಜ್ಯಧ್ಯಕ್ಷರಾದ ಶರಣಬಸಪ್ಪ ಸೂಗೂರ ಹೆಳಿದರು.

ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಬಹುಜನ ಮತದಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛತ್ರಪತಿ ಶಾಹು ಮಹಾರಾಜ ಅವರ 150 ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದರು.

 ಆಳಂದ ತಾಲೂಕಿನ ಖಜೂರಿ ಗ್ರಾಮದ ಜಾನಪದ ವಲಯ ಅಧ್ಯಕ್ಷರಾದ ರಾಜಶೇಖರ್ ಹರಿಹರ್ , ಪ್ರಗತಿಪರ ರೈತ ವಿನೋದ್ ಭದ್ರೆ, ಸಮಾಜ ಸೇವಕ ವೈಜನಾಥ್ ತಡಕಲ್ ಇವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. 

ಎನ್ ಓ ಎಚ್ ಪಿ. ಜಿಲ್ಲಾ ನೋಡಲ್ ಅಧಿಕಾರಿ, ಡಾ. ಸಂಧ್ಯಾ ಕಾನೆಕರ್, ಜೀಮ್ಸ್ ಆಸ್ಪತ್ರೆ ವೈದ್ಯರಾದ ಡಾ. ಮರೆಪ್ಪ ಕಟ್ಟಿಮನಿ, ಬಹುಜನ ಮತದಾರ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಮಹದೇವ್ ಕಾಂಬಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕೇದಾರನಾಥ್ ಅರ್ ಸುರ್ಕರ್ ಸ್ವಾಗತಿಸಿದರು. ಶರಣು ಹಂಗರಗಿ ನಿರೂಪಿಸಿದರು. ಶೇಖ್ ಮುನೀರ್ ವಂದಿಸಿದರು.