ಕೋಲಿ ಸಮಾಜದ ಯುವ ಪದಾಧಿಕಾರಿ ಆಯ್ಕ

ಕೋಲಿ ಸಮಾಜದ ಯುವ ಪದಾಧಿಕಾರಿ ಆಯ್ಕ

ಕೋಲಿ ಸಮಾಜದ ಯುವ ಪದಾಧಿಕಾರಿ ಆಯ್ಕ

ಚಿತ್ತಾಪುರ: ಪಟ್ಟಣದಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕೋಲಿ ಸಮಾಜದ ಸಭೆಯಲ್ಲಿ ಸಮಾಜದ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಪಟ್ಟಣದ ರಾಜೇಶ ನರಸಪ್ಪ ಹೋಳಿಕಟ್ಟಿ, ನಗರ ಯುವ ಘಟಕದ ಅಧ್ಯಕ್ಷರಾಗಿ ಬಸವರಾಜ ಹುಣಿಚೆಪ್ಪ ಮೈನಾಳಕರ್ ಅವರು ಆಯ್ಕೆಯಾಗಿದ್ದಾರೆ.

ಮುಖಂಡ ಮಲ್ಲಿಕಾರ್ಜುನ ಎಮ್ಮೆನೋರ್ ಅವರು ಅಧ್ಯಕ್ಷರ ಹೆಸರು ಘೋಷಿಸಿದರು. ಮುಖಂಡ ಭೀಮಣ್ಣಾ ಸಾಲಿ ಅವರು ಅನುಮೋದಿಸಿದರು. ಶೇಖಪ್ಪ ಶರಣಪ್ಪ ಬಡಿಗೇರ ಆಲೂರು (ಉಪಾಧ್ಯಕ್ಷ), ಹಣಮಂತ ವೆಂಕಟರಮಣ ಬೇವಿನಗಿಡ ಭಂಕಲಗಾ (ಪ್ರಧಾನ ಕಾರ್ಯದರ್ಶಿ), ರಮೇಶ ಭೀಮಶಾ ವಾಡಿ (ಸಹ ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಗಿದೆ.

ಯುವ ಘಟಕದ ಅಧ್ಯಕ್ಷ ಹುದ್ದೆಗೆ ಆಯ್ಕೆ ಬಯಸಿ ಸಂಗಣ್ಣಾ ನಾಟಿಕಾರ, ರಾಜಶೇಖರ ಮೂಲಿಮನಿ, ಮಲ್ಲಿಕಾರ್ಜುನ ಡೋಣಗಾಂವ, ಬಸವರಾಜ ತಳವಾರ ರಾಜೋಳಾ, ತಿಮ್ಮಯ್ಯ ಚಿತ್ತಾಪುರ, ನಾಗರಾಜ ಹುಣಿಚೆಪ್ಪ, ಭೀಮಾಶಂಕರ ಹೋಳಿಕಟ್ಟಿ ಹೀಗೆ ಒಟ್ಟು (ಆಯ್ಕೆಯಾದವರ ಸಹಿತ) ಹನ್ನೊಂದು ಜನರು ಆಕಾಂಕ್ಷಿಗಳಾಗಿದ್ದರು ಎಂದು ಭೀಮಣ್ಣಾ ಸಾಲಿ ಅವರು ತಿಳಿಸಿದರು.

ಮುಖಂಡ ಭೀಮಣ್ಣಾ ಸಾಲಿ ಅವರು ಮಾತನಾಡಿ, ಸಮಾಜದ ಸಂಘಟನೆಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ಎಲ್ಲಾ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಯುವ ಸಂಘಟನೆ ಬಲಪಡಿಸಬೇಕು. ಒಗ್ಗಟ್ಟಿನ ಹೋರಾಟದಿಂದ ಮಾತ್ರ ಸಮಾಜಕ್ಕೆ ನ್ಯಾಯ ಕೊಡಿಸಲು ಸಾಧ್ಯ. ಸಮಾಜದ ಪರವಾಗಿ ಹೋರಾಟದ ಮನೋಭಾವ ಯುವಕರು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ನೂತನ ಪದಾಧಿಕಾರಿಗಳಿಗೆ ಸಮಾಜದಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣಾ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ, ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ, ಮುಖಂಡರಾದ ಬಸವರಾಜ ಚಿನ್ನಮಳ್ಳಿ, ಮಲ್ಲಿಕಾರ್ಜುನ ಎಮ್ಮೆನೋರ, ಸುರೇಶ ಬೆನಕನಳ್ಳಿ, ಹಣಮಂತ ಸಂಕನೂರು, ಮಹಿಪಾಲ್ ಮೂಲಿಮನಿ, ದೇವೀಂದ್ರ ಅರಣಕಲ್, ಮಲ್ಲಿಕಾರ್ಜುನ ಸಂಗಾವಿ, ಕರಣಕುಮಾರ ಅಲ್ಲೂರು, ಹಣಮಂತ ಕಟ್ಟಿ, ಶಿವಶರಣ ಸಾಲಹಳ್ಳಿ ಸೇರಿದಂತೆ ಅನೇಕರು ಇದ್ದರು.