ಮೌಢ್ಯತೆ ವಿರುದ್ಧ ಹೋರಾಡಿದ ಅಂಬಿಗರ ಚೌಡಯ್ಯ

ಮೌಢ್ಯತೆ ವಿರುದ್ಧ ಹೋರಾಡಿದ  ಅಂಬಿಗರ ಚೌಡಯ್ಯ

ಮೌಢ್ಯತೆ ವಿರುದ್ಧ ಹೋರಾಡಿದ ಅಂಬಿಗರ ಚೌಡಯ್ಯ

ಕಲಬುರಗಿ: ನಗರದ ಚೌಡೇಶ್ವರ ಕಾಲೋನಿಯ ಶ್ರೀ ಚೌಡೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 905ನೇ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪ್ರಸೂತಿ ಹಾಗೂ ಸ್ತ್ರೀ ರೋಗತಜ್ಞೆ ಡಾ. ಗಂಗಾಂಬಿಕಾ ನಿಷ್ಠಿ ಮಾತನಾಡಿ, ಬಸವಾದಿ ಶರಣ ಶರಣೆಯರಲ್ಲಿ ಅಂಬಿಗರ ಚೌಡಯ್ಯನವರು ನಿಜಶರಣ ಎಂದೆನಿಸಿಕೊಂಡವರು. ಮೌಢ್ಯತೆ, ಅಂದಶ್ರದ್ದೆ, ಲಿಂಗಪೂಜೆ ಹಾಗೂ ಮೂರ್ತಿ ಪೂಜೆ ವಿರುದ್ಧ ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮೂಡಿಸಿದ್ದಾರೆ. ವೈಚಾರಿಕ ಮತ್ತು ವೈಜ್ಞಾನಿಕ ವಚನಗಳ ಸಂದೇಶದಿಂದ ಸಮಾಜ ಸುಧಾರಣೆ ಮಾಡಿದ ಪ್ರಥಮ ಬಂಡಾಯ ವಚನಕಾರರಾಗಿದ್ದಾರೆ. ಅಲ್ಲದೆ ಅಕ್ಕಮಹಾದೇವಿ ವಚನಗಳಲ್ಲಿ ವೈಜ್ಞಾನಿಕ ಮನೋಭಾವ ಕಾಣಬಹುದು ಎಂದರು.

ಸAಸ್ಥೆಯ ಅಧ್ಯಕ್ಷೆ, ಖ್ಯಾತ ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ. ಇಂದಿರಾ ಶಕ್ತಿ ಅವರು, ಶ್ರೀ ನಿಜಶರಣ ಅಂಬಿಗರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಜೊತೆಗೆ ಅನುಭವ ಮಂಟದಲ್ಲಿ ಬಸವಣ್ಣನವರ ಜೊತೆಗೆ ತಮ್ಮ ವಿಶಷ್ಟ ವಚನ ಸಾಹಿತ್ಯದಿಂದ ಸಮಾಜದ ಜನರನ್ನು ಜಾಗೃತಿಗೊಳಿಸುವ ಶ್ರೇಯಸ್ಸು ಅಂಬಿಗರ ಚೌಡಯ್ಯ ನವರಿಗೆ ಸಲ್ಲುತ್ತದೆ ಎಂದರು. ವಿಶೇಷವಾಗಿ ಹೆಣ್ಣು ಮಕ್ಕಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಭದ್ರತೆಗಾಗಿ ಶ್ರಮ ಪಟ್ಟವರು. ಅವರ ವಚನ ಮತ್ತು ಅವರ ಮಾರ್ಗದರ್ಶನ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ತಿಳಿಹೇಳಿದರು.

ಶಾಲೆಯ ವಿದ್ಯಾರ್ಥಿಗಳು ಅಂಬಿಗರ ಚೌಡಯ್ಯನವರ ವಚನಗಳನ್ನು ಹೇಳಿದರು. ಸಮಾಜದ ಮುಖಂಡರಾದ ವಿಜಯಕುಮಾರ, ಸಾಯಬಣ್ಣ ಬೆಳಗುಂಪಿ, ಬಸವ ಪಟ್ಟಣ, ಅಯ್ಯಪ್ಪ ಮಿಣಜಗಿ, ಸುಖದೇವ ಕೋಗನೂರ, ಶಿವರಾಜ ಕಿರಸಾವಳಗಿ, ಅಶೋಕ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.