ಚುನಾವಣಾಧಿಕಾರಿ ಗೈರು ರೈತರ ಆಕ್ರೋಶ
ಚುನಾವಣಾಧಿಕಾರಿ ಗೈರು ರೈತರ ಆಕ್ರೋಶ
ಕಮಲನಗರ: ತಾಲ್ಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಹೊಳಸಮುದ್ರ ಜ.11 ರಂದು ನಡೆಯಲಿರುವ ಚುನಾವಣೆಗೆ ಚುನಾವಣಾಧಿಕಾರಿ ಗೈರು ಆಗಿದ್ದು ಅಗತ್ಯ ಮಾಹಿತಿ ನೀಡುತ್ತೀಲ್ಲ ಎಂದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪ್ರಗತಿಪರ ರೈತ ಮಹಾದೇವ ಬೆಣ್ಣೆ ಆರೋಪಿಸಿದ್ದಾರೆ.
ಹೊಳಸಮುದ್ರ ಸಿಇಒ ಗೋವಿಂದ್ ಮಚಕುರಿ ಯವರು ಅವರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಬಂದ ರೈತರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಬೇರೆಡೆ 100 ರೂ ಪಡೆದು ನಾಮಿನೇಶನ್ ಫಾರ್ಮ ನೀಡುತ್ತಿದ್ದಾರೆ. ಆದರೆ, ಇವರುಗಳು 500 ರೂ ಪಡೆದುಕೊಂಡು ಪಾವತಿ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ ರೈತರು.
ಈ ಕುರಿತು ಚುನಾವನಾಧಿಕಾರಿ ಎಲ್ಲಿ ಎಂದು ಕೆಳಿದ್ದರೇ ಸೂಕ್ತ ಮಾಹಿತಿ ನೀಡುತ್ತಿಲ್ಲ. ಅಧಿಕಾರಿ ಬೀದರನಲ್ಲೆ ಕುಳಿತು ಪೋನಿನ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ ಎಂದು ಮಹಾದೇವ ದೂರಿದ್ದಾರೆ.
ಈ ಕುರಿತು ಸಂಬಮಧ ಪಟ್ಟ ಮೇಲಾಧಿಕಾರಿಗಳು ರೈತರ ಮೇಲೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.