ಬ್ರಹ್ಮಪೂರ ಬಡಾವಣೆಯ ಶಿವಾಜಿ ಪಾರ್ಕ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ

ಬ್ರಹ್ಮಪೂರ ಬಡಾವಣೆಯ ಶಿವಾಜಿ ಪಾರ್ಕ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ
ಕಲಬುರಗಿಯ ಬ್ರಹ್ಮಪೂರ ಬಡಾವಣೆಯ ಶಿವಾಜಿ ಪಾರ್ಕ್ ನ ಅಧ್ಯಕ್ಷರಾಗಿ ವಿಜಯಕುಮಾರ್ ವಿಠ್ಠಲರಾವ ಮೊರೆ ಹಾಗೂ ಉಪಾಧ್ಯಕ್ಷರಾಗಿ ಜ್ಯೋತಿಬಾ ಕೇಶವರಾವ್ ಜಾಧವ್ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಯಿತು.
ಕರ್ನಾಟಕ ಛತ್ರಿಯ ಮರಾಠಾ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷ ಆರ್ ಬಿ ಜಗದಳ್ಳೆ, ಹಿರಿಯ ಮುಖಂಡರಾದ ವೆಂಕಟರಾವ್ ಮಾನೆ, ಕಿಶೋರ್ ಮಾನೆ, ಅರ್ಜುನ್ ಮಾನೆ, ಸುರೇಶ್ ಜಾಧವ್, ದಿನಕರ್ ಬಿ ಮೂಲಗೆ. ನಾರಾಯಣರಾವ್ ನವಲೆ. ರಾಜು ಸಿಂಧೆ ಇವರ ನೇತೃತ್ವದಲ್ಲಿ ಬ್ರಹ್ಮಪೂರ ನಗರದ ಶಿವಾಜಿ ಪಾರ್ಕ್ ನ ಅಧ್ಯಕ್ಷರಾಗಿ ವಿಜಯಕುಮಾರ್ ವಿಠ್ಠಲರಾವ ಮೊರೆ. ಶಿವಾಜಿ ಪಾರ್ಕ್ನ ಉಪಾಧ್ಯಕ್ಷರಾಗಿ ಜ್ಯೋತಿಭಾ ಕೇಶವರಾವ್ ಜಾಧವ್ ಇವರನ್ನು ಆಯ್ಕೆ ಮಾಡಿದ ಬಳಿಕ ಅವರನ್ನು ಸಮಾಜದ ಹಿರಿಯ ಮುಖಂಡರಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಛತ್ರಪತಿ ಮರಾಠಾ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನೇಮಕ ಮಾಡಿ ಅವರಿಗೆ ಜವಾಬ್ದಾರಿ ನೀಡಿದ್ದರು.
ಈ ಸಂದರ್ಭದಲ್ಲಿ ಕಿಶೋರ್ ಮಾನೆ, ದತ್ತಾ ಕಾಳೆ, ನಾರಾಯಣರಾವ್ ಸೂರ್ಯವಂಶಿ, ಅಂಬಾದಾಸ ಪಾಟೀಲ್, ರಮೇಶ್ ಚಿಚಕೋಟಿ, ವಿಠ್ಠಲ ಭೋಂಸ್ಲೆ ಸೇರಿದಂತೆ ಅನೇಕ ಹಿರಿಯ ಮುಖಂಡರು ಯುವಕರು ಉಪಸ್ಥಿತರಿದ್ದರು.