ಸಾಧನೆಗೆ ಭಾಷೆ ಬಡತನ ಅಡ್ಡಿಯಲ್ಲ: ಡಾ .ವಿಕ್ರಮ ವಿಸಾಜಿ

ಸಾಧನೆಗೆ ಭಾಷೆ ಬಡತನ ಅಡ್ಡಿಯಲ್ಲ: ಡಾ .ವಿಕ್ರಮ ವಿಸಾಜಿ

ಸಾಧನೆಗೆ ಭಾಷೆ ಬಡತನ ಅಡ್ಡಿಯಲ್ಲ: ಡಾ .ವಿಕ್ರಮ ವಿಸಾಜಿ

ಆಳಂದ:ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ  ಎ. ವಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಕ್ರಮ ವಿಸಾಜಿಯವರು ಸಾಧನೆಗೆ ಭಾಷೆ ಬಡತನ ಅಡ್ಡಿಯಲ್ಲ ಹಿಡಿದ ಕೆಲಸ ಬಿಡದೆ ಛಲದಿಂದ ಧೈರ್ಯದಿಂದ ಮಾಡಿದರೆ ಯಶಸ್ಸು ಸಿಗುತ್ತದೆ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿಯಾಗಲು ಒಳ್ಳೆಯ ಮಾರ್ಗದರ್ಶನ ಬೇಕು ವಿದ್ಯಾರ್ಥಿಗಲ್ಲಿ ಬೆಳೆಯಬೇಕೆಂಬ ಮನೋಭಾವನೆ ಬೇಕು ಎಂದು ನುಡಿದರು.ಅಧ್ಯಕ್ಷ ಸ್ಥಾನವನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್.ಎಸ್. ಹೊಸಮನಿ ಮಾತನಾಡಿ ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿ ಕಾಲೇಜಿನ ಮತ್ತು ತಂದೆ ತಾಯಿಯ ಮತ್ತು ಸಮಾಜದ ಕೀರ್ತಿಯನ್ನು ತರಬೇಕು ಜೀವನದಲ್ಲಿ ಶಿಸ್ತನ್ನು ಪಾಲಿಸಬೇಕು ಎಂದು ನುಡಿದರು. ವಾರ್ಷಿಕ ವರದಿಯನ್ನುಉಪನ್ಯಾಸಕರಾದ ಪ್ರಮೋದ ಡಿ ಸಿ.ರವರು ಓದಿದರು.ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ಮತ್ತು ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.ಮತ್ತು ಅತಿ ಹೆಚ್ಚು ಅಂಕಗಳನ್ನ ಗಳಿಸಿ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪ್ರಾಧ್ಯಾಪಕರಾದ ಡಾ.ರಾಜಶೇಖರ್ ಬಾಬನೂರ್ ಡಾ .ರಮೇಶ.ಮಶರಬು, ಡಾ ಟೀಕಪ್ಪಾ. ಡಾ.ಜಯಪ್ರಕಾಶ್ ಭಾವಿಮನಿ, ಶರಣಬಸಪ್ಪ ಕಮ್ಮಾರ ಡಾ .ಸುಖದೇವಿ ಘಂಟೆ. ಬಸವರಾಜ ಶೃಂಗೇರಿ, ಸಂಗಮೇಶ ಸ್ವಾಮಿ,ಅಂಬರೀಶ್ ಎಂ . ಬಿ. ಜಿ.ಬನಸೋಡೆ,ವಿಜಯಕುಮಾರ ಸ .ನಿಜಾಮುದ್ದೀನ್.ಬಸವರಾಜ್ ಪಾಟೀಲ್,ದಿನೇಶ್ ಪಾಟೀಲ್,ಸತೀಶ್ ಪಾಟೀಲ್,ವರುಣ್ ನಂದಿ ಕೊಲೆ,ಮಲ್ಲಿಕಾರ್ಜುನ್ ಚಿತ್ಕೋಟಿ ಹಾಗೂ ಭೋದಕ-ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶ್ರೀಮತಿ ಸಂಗೀತಾ ಅಷ್ಟಗಿ,ಬಸಮ್ಮ ಪಾಟೀಲ್ ಪ್ರಾರ್ಥನಾ ಗೀತೆ ಹಾಡಿದರು. ಡಾ.ವೆಂಕಟೇಶ ಪೂಜಾರ ನಿರೂಪಿಸಿದರು. ಡಾ ಬಬ್ರುವಾಹನ ಸ್ವಾಗತಿಸಿದರು. ಡಾ. ಜಯಪ್ರಕಾಶ ಭಾವಿಮನಿ ವಂದಿಸಿದರು.

ವರದಿ ಡಾ. ಅವಿನಾಶ S ದೇವನೂರ ಆಳಂದ