25 ರಂದು ಅ.ವೀ.ಲಿಂ.ಮಹಾ ಸಭಾ ಚುನಾವಣೆ : ಮೋದಿ

25 ರಂದು ಅ.ವೀ.ಲಿಂ.ಮಹಾ ಸಭಾ ಚುನಾವಣೆ : ಮೋದಿ

25 ರಂದು ಅ.ವೀ.ಲಿಂ.ಮಹಾ ಸಭಾ ಚುನಾವಣೆ : ಮೋದಿ 

ಕಲಬುರಗಿ: ಇದೇ ತಿಂಗಳು 25 ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ 27 ಸ್ಥಾನಗಳಿಗೆ (ಪುರುಷರು) ಕಾರ್ಯನಿರ್ವಾಹಕ ಸಮಿತಿಯ ಚುನಾವಣೆಗೆ ಒಟ್ಟು 57 ಜನ ಕಣದಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ರಾಜಶೇಖರ ಸೀರಿ, ಶಶಿಕಾಂತ ಪಾಟೀಲ ಹಾಗೂ ಸಂತೋಷ ಪಾಟೀಲ್ ಸರಡಗಿ ಇವರು ಚುನಾವಣಾ ಕಣದಲ್ಲಿದ್ದಾರೆ. ಎಂದು ಶರಣ ಕುಮಾರ ಮೋದಿ ತಿಳಿಸಿದರು 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಶ್ರೀ ಶಂಕರ ಬಿದರಿ ಅವಿರೋಧವಾಗಿ ಆಯ್ಕೆಯಾಗಿದ್ದರು,ರಾಷ್ಟ್ರೀಯ ಘಟಕದ ಕಾರ್ಯಕಾರಿ ಸಮಿತಿಗೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ , ಚಂದು ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

 ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಪೂಜ್ಯ ಹಾನಗಲ್ ಕುಮಾರಸ್ವಾಮಿಯವರು 1904ರಲ್ಲಿ ಸ್ಥಾಪಿಸಿದರು. ಮಾನ್ಯ ಶ್ರೀ ಭೀಮಣ್ಣ ಖಂಡ್ರೆ ಹಾಗೂ ಸಮಾಜದ ಹಿರಿಯ ಮುಖಂಡರಾದ ಶ್ರೀ ಶಾಮನೂರು ಶಿವಶಂಕರಪ್ಪ, ಶ್ರೀ ಈಶ್ವರ ಖಂಡ್ರೆ ಜೊತೆಗೆ ಅನೇಕರು ಸಮಾಜದ ಎಲ್ಲಾ ಒಳ ಪಂಗಡದವರನ್ನು ಹಾಗೂ ಪೂಜ್ಯರ ಆಶೀರ್ವಾದ, ಗಣ್ಯರ ಸಹಕಾರದಿಂದ ತೆಗೆದುಕೊಂಡು ಮುನ್ನಡೆಸುತ್ತಿದ್ದಾರೆ. ಎಂದರು 

 ಮಹಾಸಭಾದಿಂದ ಇಂದು ಅನೇಕ ಜಿಲ್ಲೆಗಳಲ್ಲಿ ಬಾಲಕ/ಬಾಲಕಿಯರ ವಸತಿ ನಿಲಯಗಳನ್ನು ನಿರ್ಮಿಸಿದೆ. ಅದರಲ್ಲಿ ಕಲಬುರಗಿ ಜಿಲ್ಲಾ ಘಟಕವು ಕಲಬುರಗಿಯಲ್ಲಿ ಎಲ್ಲರ ಸಹಕಾರದಿಂದ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ನಿರ್ಮಿಸಲಾಗಿದೆ ಎಂದರು.

ಮಹಾಸಭಾದ ರಾಜ್ಯ ಘಟಕದ ಚುನಾವಣೆಗೆ ರಾಜ್ಯದಲ್ಲಿ ಸುಮಾರು ಮೂವತ್ತೊಂದು ಸಾವಿರ ಮತದಾರಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 1933 ಮತದಾರರು ಇದ್ದಾರೆ .ಮತದಾನವು 25 ರಂದು ಬೆಳಿಗ್ಗೆ 8.00ಗಂಟೆಯಿಂದ ಸಂಜೆ 5.00ಗಂಟೆಯವರೆಗೆ ನಗರದ ಉದ್ಯಾನವನದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು ಸಮಾಜದ ಎಲ್ಲಾ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕಾಗಿ ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಶಶಿಕಾಂತ್ ಪಾಟೀಲ್, ಶರಣು ಪಪ್ಪಾ, ಸೋಮಶೇಖರ್ ಹಿರೇಮಠ, ಡಾ.ಸುಧಾ ಹಾಲಕಾಯಿ, ರಾಜಶೇಖರ್ ಸೀರಿ ಉಪಸ್ಥಿತರಿದ್ದರು.