ತುಲಾಭಾರ ಭಕ್ತಿಯ ದ್ಯೋತಕ :ಮುನೀಂದ್ರ ಸ್ವಾಮೀಜಿ

ತುಲಾಭಾರ ಭಕ್ತಿಯ ದ್ಯೋತಕ :ಮುನೀಂದ್ರ ಸ್ವಾಮೀಜಿ

ತುಲಾಭಾರ ಭಕ್ತಿಯ ದ್ಯೋತಕ :ಮುನೀಂದ್ರ ಸ್ವಾಮೀಜಿ 

ಚಿತ್ತಾಪುರ;ಭಕ್ತರು ತಮ್ಮ ಭಕ್ತಿಯನ್ನು ವಿವಿಧ ರೂಪಗಳಲ್ಲಿ ಅರ್ಪಿಸಿ ಧನ್ಯತೆ ಪಡೆಯುತ್ತಾರೆ. ಅದರಲ್ಲಿ ತುಲಾಭಾರವೂ ಒಂದು. ತುಲಾಭಾರವು ಭಕ್ತಿಯ ದ್ಯೋತಕ ಮತ್ತು ಭಕ್ತಿಯ ಪರಕಾಷ್ಠೆಯಾಗಿದೆ ಎಂದು ಹಲಕರಟಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಮಹಾಸ್ವಾಮಿಗಳವರು ಹೇಳಿದರು.

ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಭಕ್ತರು ಹಮ್ಮಿಕೊಂಡಿದ್ದ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡುತ್ತಾ ತಮ್ಮ ಎಲ್ಲಾ ಅಭೀಪ್ಸೆಗಳನ್ನು ವೀರಭದ್ರನು ಪೂರೈಸಿ ದುಷ್ಟ ಶಕ್ತಿಗಳಿಂದ ತಮ್ಮನ್ನು ರಕ್ಷಿಸಲಿ ಎಂದು ಪ್ರಾರ್ಥಿಸುವೆ. ಸಾತ್ವಿಕ ಮನೋಭಾವನೆಯಿಂದ ಇತರರಿಗೆ ಒಳಿತನ್ನೇ ಬಯಸುತ್ತಾ ಭಕ್ತಿ ಮಾರ್ಗದಲ್ಲಿ ಬದುಕು ಮಂಗಳಕರವಾಗಿ ಸಾಗಲಿ ಎಂದು ಹೇಳಿದರು.

ತುಲಾಭಾರ ಕಾರ್ಯಕ್ರಮದಲ್ಲಿ ವಿಶ್ವನಾಥ, ಚಂದ್ರಶೇಖರ ತೆಂಗಳಿ, ನಾಗಣ್ಣ ಮುಕ್ತೇದಾರ, ಮಲ್ಲೇಶಪ್ಪ ಸಾತನೂರ, ಮಲ್ಲಿಕಾರ್ಜುನ, ಸಚಿನ,ವಿಶ್ವನಾಥ ಗಾಂಧಿ, ವೀರೇಶ ,ಈರಣ್ಣ ಮಲಕಂಡಿ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ, ವಸಂತ,ದೊಡ್ಡಪ್ಪಗೌಡ ಪೊಲೀಸ್ ಪಾಟೀಲ , ಡಾ: ರವಿಕುಮಾರ ಕಮರಡಗಿ, ಪೊಮು ರಾಠೋಡ, , ಹೊನ್ನಪ್ಪ ಬಮ್ಮನಳ್ಳಿ, ರೇವಣಸಿದಪ್ಪ ಸರಡಗಿ, ಬಸವರಾಜಗೌಡ ದಂಡಗುಂಡ,ಇಂಗಳಗಿ ಸೇರಿದಂತೆ ಲಾಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ತಾಂಡಾ ನಿವಾಸಿಗಳು ಸೇರಿದಂತೆ ಅನೇಕರು ಇದ್ದರು.

ಗ್ರಾಮದ ಪ್ರಮುಖರಾದ ಬಸವರಾಜ ಸಾಹು ,ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶರಣಬಸ್ಸಪ್ಪ ಬಮ್ಮನಳ್ಳಿ ಸಾತನೂರ ನಿರೂಪಣೆ ಮಾಡಿದರು.ಸೋಮಶೇಖರ ವಂದಿಸಿದರು.