ಕ ಕ ಸರ್ಕಾರಿ ನೌಕರರ ಸಂಘಕ್ಕೆ ರಾಚಯ್ಯ ಸ್ವಾಮಿ ಅಧ್ಯಕ್ಷ

ಕ ಕ ಸರ್ಕಾರಿ ನೌಕರರ ಸಂಘಕ್ಕೆ ರಾಚಯ್ಯ ಸ್ವಾಮಿ ಅಧ್ಯಕ್ಷ

ಕ ಕ ಸರ್ಕಾರಿ ನೌಕರರ ಸಂಘಕ್ಕೆ ರಾಚಯ್ಯ ಸ್ವಾಮಿ ಅಧ್ಯಕ್ಷ 

ಚಿತ್ತಾಪುರ: ಕಲ್ಯಾಣ ಕರ್ನಾಟಕ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಲಾಡ್ಲಾಪುರ ಗ್ರಾಮ ಪಂಚಾಯತಿ ಗ್ರೇಡ್-೨ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ರಾಚಯ್ಯ ಸ್ಥಾವರಮಠ ಅವರನ್ನು ಚಿತ್ತಾಪುರ ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಮಹೇಶಕುಮಾರ ಹೆಬ್ಬಾಳೆ ತಿಳಿಸಿದ್ದಾರೆ.

    ತಮಗೆ ನೀಡಿರುವ ಜವಾಬ್ದಾರಿಯನ್ನು ಸಂಘದ ನಿಯಮಾನುಸಾರ ನಿರ್ವಹಿಸುತ್ತಾ ಸಂಘದ ತತ್ವ ಸಿದ್ಧಾಂತ ಮತ್ತು ಚಟುವಟಿಕೆಗಳ ಮೂಲಕ ಅನುಷ್ಠಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಲಬುರಗಿ ಜಿಲ್ಲಾ ಸಂಘದ ಮಾರ್ಗದರ್ಶನದಲ್ಲಿ ಚಿತ್ತಾಪುರ ತಾಲೂಕಿನಲ್ಲಿ ಸಂಘಟನೆ ಬಕ ಪಡಿಸಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಹಿತಕ್ಕಾಗಿ ಕಾರ್ಯಪ್ರವತ್ತರಾಗಬೇಕು ಎಂದು ನೇಮಕಾತಿ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ.