ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜಯಂತಿ: ವಾಡಿ ಬಿಜೆಪಿ ಕಛೇರಿಯಲ್ಲಿ ಭಕ್ತಿ ಪೂರ್ಣ ಸಂಭ್ರಮ

ವಾಡಿ ಬಿಜೆಪಿ ಕಛೇರಿಯಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ.
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಯವರ 118ನೇ ಜಯಂತಿ ಅಂಗವಾಗಿ ಮುಖಂಡರು ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಅವರು ಮಾತನಾಡಿ
ಹಿಂದೂ, ಮುಸ್ಲಿಂ, ಕ್ರೈಸ್ತ ಮಕ್ಕಳನ್ನದೇ ಎಲ್ಲರಿಗೂ ತಮ್ಮ ಮಠದಲ್ಲಿ ಅನ್ನ, ಆಶ್ರಯ ನೀಡಿ, ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದರು ಎಂದರು. ಮಾತಿನಲ್ಲಿ ಮಾತ್ರವೇ ಅಲ್ಲದೆ, ಜಗತ್ತಿಗೆ ತಮ್ಮ ಕಾಯಕದ ಮೂಲಕ ವಿಶ್ವಮಾನವ ಸಂದೇಶ ಸಾರಿದರು. ಹಳ್ಳಿಗೆ ಏಕಯಾತ್ರೆ, ಪಟ್ಟಣಕ್ಕೆ ಪಂಚಯಾತ್ರೆ ಎಂಬಂತೆ ಶಿವಶರಣರಿಗೆ ಜೋಳಿಗೆ ಹಿಡಿದು ಸಾಮಾಜಿಕ ಕಾರ್ಯ ಸಿದ್ಧಿಸುವುದು ಮುಖ್ಯ ಎಂದು ಸಾರಿದರು.ಇದನ್ನು ಅಕ್ಷ ರಸಹ ಪಾಲಿಸಿ ಮಠ, ಮಾನ್ಯಗಳಿಗೆ ವಿಶೇಷ ಗೌರವ ತಂದುಕೊಟ್ಟವರು ನಮ್ಮ ಶಿವಕುಮಾರ ಸ್ವಾಮೀಜಿಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್,ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ ಮುಖಂಡರಾದ ಶರಣಗೌಡ ಪಾಟೀಲ ಚಾಮನೂರ,ಮಲ್ಲಿಕಾರ್ಜುನ ಸಾತಖೇಡ, ಬಸವರಾಜ ಕೋಲಿ,ಧೂಳಪ್ಪ ಯರಗಲ್,ರೇವಪ್ಪ ಅಣಕಲ,ಲಾಲು ಚವ್ಹಾಣ ಸೇರಿದಂತೆ ಇತರರು ಇದ್ದರು.