ನಟ್ ಚೇತನಗೆ ಗ್ರಾಪಂ ಅಧ್ಯಕ್ಷ ಶೇಖ ಸನ್ಮಾನ ಸಾಮಾಜಿಕ ಹೋರಾಟದ ಮೂಲಕ ಗ್ರಾಮೀಣ ಸಮಸ್ಯೆ ನಿವಾರಣೆ: ಚೇತನ

ನಟ್ ಚೇತನಗೆ ಗ್ರಾಪಂ ಅಧ್ಯಕ್ಷ ಶೇಖ ಸನ್ಮಾನ ಸಾಮಾಜಿಕ ಹೋರಾಟದ ಮೂಲಕ ಗ್ರಾಮೀಣ ಸಮಸ್ಯೆ ನಿವಾರಣೆ: ಚೇತನ

ನಟ್ ಚೇತನಗೆ ಗ್ರಾಪಂ ಅಧ್ಯಕ್ಷ ಶೇಖ ಸನ್ಮಾನ

ಸಾಮಾಜಿಕ ಹೋರಾಟದ ಮೂಲಕ ಗ್ರಾಮೀಣ ಸಮಸ್ಯೆ ನಿವಾರಣೆ: ಚೇತನ

ಆಳಂದ: "ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಸಾಮಾಜಿಕ ಹೋರಾಟಗಳ ಮೂಲಕ ಸಮಾಜದಲ್ಲಿ ಪರಿವರ್ತನೆ ತರಲು ಎಲ್ಲರ ಸಹಕಾರ ಅಗತ್ಯವಿದೆ. ಗ್ರಾಮೀಣ ಯುವಜನರು ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗಾಗಿ ಮುಂದಾಗಬೇಕು" ಎಂದು ಬೆಂಗಳೂರಿನ ಖ್ಯಾತ ಚಲನ ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಭಿಪ್ರಾಯಪಟ್ಟರು. 

ತಾಲೂಕಿಗೆ ಗುರುವಾರ 2ನೇ ಬಾರಿಗೆ ಆಗಮಿಸಿ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗಮಧ್ಯದ ತೆಲಾಕುಣಿ ಗ್ರಾಮದಲ್ಲಿ ಗ್ರಾಮಸ್ಥರ ಪರ ಗ್ರಾಪಂ ಅಧ್ಯಕ್ಷ ಮಹಿಬೂಬ್‌ಭಾಷಾ ಶೇಖ್ ಅವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಗ್ರಾಮೀಣ ಪರಿಸರ ಸಂರಕ್ಷಣೆಯ ಇಂದಿನ ಅಗತ್ಯವಿದೆ. "ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಪಾತ್ರವೇ ಮುಖ್ಯ, ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಮೀಕ್ಷೆ, ಪರಿಶ್ರಮ ಮತ್ತು ಶ್ರದ್ಧೆ ಅಗತ್ಯವಿದೆ" ಎಂದರು.

ಸಮಾಜದಲ್ಲಿ ಶ್ರೇಣಿಬದ್ಧತೆ, ಅಸಮಾನತೆ ಮತ್ತು ಅನ್ಯಾಯವನ್ನು ತಡೆಹಿಡಿಯುವಲ್ಲಿ ಎಲ್ಲಾ ವರ್ಗದ ಜನರು ಜಾಗೃತರಾಗುವ ಅಗತ್ಯವಿದೆ ಎಂದು ಒತ್ತಿಹೇಳಿದರು. 

"ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಎಲ್ಲರಿಗೂ ನ್ಯಾಯ ದೊರಕುವ ವ್ಯವಸ್ಥೆ ಅತೀ ಅಗತ್ಯ. ಇದಕ್ಕಾಗಿ ನಿರಂತರ ಜನಜಾಗೃತಿ, ಚರ್ಚೆಗಳು ಮತ್ತು ಹೋರಾಟಗಳು ಪ್ರಮುಖವಾಗಿದೆ" ಎಂದು ಅವರು ಹೇಳಿದರು.

ಸಮಾಜದಲ್ಲಿ ಅಸಮಾನತೆ ನಿವಾರಣೆಗೆ ಕಾನೂನು ವ್ಯವಸ್ಥೆ ಅಷ್ಟೇ ಅಲ್ಲ, ಬೋಧನೆ, ಜಾಗೃತಿಯ ಮೂಲಕ ಎಲ್ಲರ ಮನಸ್ಸುಗಳಲ್ಲಿ ಪರಿವರ್ತನೆ ತರಬೇಕು. ಜನರಲ್ಲಿ ಸಮಾನತೆಯ ಅರಿವು ಮೂಡಿಸುವ ಕಾರ್ಯದಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

"ನಾವೆಲ್ಲರೂ ಒಗ್ಗಟ್ಟಾಗಿ ಚರ್ಚೆ ಮೂಲಕ ಉತ್ತಮ ಚಟುವಟಿಕೆಗಳನ್ನು ಯೋಜಿಸಬೇಕು, ಇದು ನಮ್ಮ ಮುಂದಿನ ಪೀಳಿಗೆಯ ಭವಿಷ್ಯವನ್ನು ಸಮೃದ್ಧಿಗೊಳಿಸುವಲ್ಲಿ ಸಹಾಯಕವಾಗುತ್ತದೆ" ಆಗ ಮಾತ್ರ ಅಸಮಾನತೆ ರಹಿತ ಸಮಾನತೆ ಸಮಾಜ ಸಮೃದ್ಧಿ ಗ್ರಾಮೀಣ ಭಾರತ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಹಿಬೂಬ್‌ಭಾಷಾ ಶೇಖ್ ಅವರು ನಟ್ ಚೇತನ ಜೊತೆಗೆ ಆಗಮಿಸಿದ್ದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಸೇರಿ ಇತರರಿಗೂ ಸನ್ಮಾನಿಸಿ ಮಾತನಾಡಿ, ಚುನಾಯಿತ ಪ್ರತಿನಿಗಳು, ಅಧಿಕಾರಿಗಳು ಮತ್ತು ಜನರ ಇಚ್ಛಾಶಕ್ತಿ ಸಹಕಾರದಿಂದಲೇ ಅಭಿವೃದ್ಧಿಯ ಕೆಲಸಗಳು ಸಾಧ್ಯವಿದೆ. ಇದಕ್ಕೆ ಸರ್ವರಲ್ಲಿ ಪ್ರಾಮಾಣಿಕತೆ, ತಾಳ್ಮೆ ತ್ಯಾಗವೊಂದಿದ್ದರೆ ಗ್ರಾಮಾಭಿವೃದ್ಧಿಗೆ ನಾಂದಿಯಾಗುತ್ತದೆ, ಯಾವುದೇ ಆಡಳಿತದಲ್ಲಿ ತಪ್ಪು ನಡೆದಾಗ ತಿದ್ದಿ ಸರಿದಾರಿಗೆ ತರಲು ನಟ್ ಚೇತನರಂತಹ ನಾಯಕರ ಧ್ವನಿ ಮತ್ತು ಸಾಮಾಜಿಕ ಹೋರಾಟಗಳು ಅಗತ್ಯವಾಗಿವೆ ಎಂದರು. 

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಹಾಗೂ ಅಭಿಮಾನಿಗಳು ಚೇತನರಿಗೆ ಮಾಲೆಹಾಕಿ ಸನ್ಮಾನಿಸಿದರು. 

ಆಳಂದ ಪಟ್ಟಣದಲ್ಲಿ ನಟ ಚೇತನ ಅವರಿಗೆ ಭೇಟಿ ಮಾಡಿದ ಬಂಜಾರಾ ಕ್ರಾಂತಿದಳ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ, ನ್ಯಾಯವಾದಿ ಬಿ.ಜಿ.ಬೀಳಗಿ, ಅಕ್ಷಯ ಸಿಎಂ ಮತ್ತಿತರ ಸಾಮಾಜಿಕ ಕಾರ್ಯಕರ್ತರು ಮಾಲೆಹಾಕಿ ಸನ್ಮಾನಿಸಿದರು.