ಶ್ರೀ ಸದ್ಗುರು ಘನ ಪಂಡಿತ ವಿಶ್ವಾರಾಧ್ಯರ ಶ್ರಾವಣ ಮಾಸದ ಪಲ್ಲಕ್ಕಿ ಉತ್ಸವ

ಶ್ರೀ ಸದ್ಗುರು ಘನ ಪಂಡಿತ ವಿಶ್ವಾರಾಧ್ಯರ ಶ್ರಾವಣ ಮಾಸದ ಪಲ್ಲಕ್ಕಿ ಉತ್ಸವ
ಶ್ರಾವಣ ಮಾಸದ 2.ನೇ ಗುರುವಾರ, ಶ್ರೀ ಜಯಕುಮಾರ್ ಸ್ವಾಮಿಜಿಗಳ ನೇತೃತ್ವದಲ್ಲಿ, ಶ್ರೀ ಸದ್ಗುರು ಘನ ಪಂಡಿತ ವಿಶ್ವಾರಾಧ್ಯರ ಪಲ್ಲಕ್ಕಿ ಉತ್ಸವವು ಶ್ರೀ ಶರಣ್ ಶ್ರೀ ಕಲ್ಲಪ್ಪ ಗೌಡರ ತೋಟ ಹಳೇ ಶಹಾಬಾದನಲ್ಲಿ ವೈಭವವಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವೈದಿಕ ಪರಂಪರೆಯ ಪ್ರಕಾರ, ಪ್ರಮುಖ ಗಣ್ಯರು ಮತ್ತು ಸಾರ್ವಜನಿಕರು ಪಾಲ್ಗೊಂಡು ದೇವರ ಆಶೀರ್ವಾದ ಪಡೆದುಕೊಂಡರು. ಉತ್ಸವದಲ್ಲಿ ಭಾಗವಹಿಸಿದ ಪ್ರಮುಖ ಗಣ್ಯರಲ್ಲಿ ಶ್ರೀ ವಿಜಯಕುಮಾರ್ ಸ್ವಾಮಿಜಿ, ವೆಂಕಟೇಶ ಬಿ. ಕುಸಾಳೆ, ಧೂಳಪ್ಪ ಹಡಪದ, ರಾಜಶೇಖರ ಇಟ್ಟಗಿ, ಸದಾಶಿವ ಪೋತನಕರ, ಶರಣಪ್ಪ ಸೂರಾ, ರಾಕೇಶ ಜಾಯಿ, ವಿಜಯಕುಮಾರ ಮೀಸ್ರ್ತಿ, ಮನೋಜ್ ಮೀಸ್ತ್ರಿ, ಹಣಮಂತ ಯಾಳ್ಗಿ, ಹುಲೆಪ್ಪ ಹೂನ್ನಗುಂಟಿ, ಶರಣ್ ಗೌಡ ಪಾಟೀಲ ಹಾಗೂ ಹಲವಾರು ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡು ಶ್ರೀ ದೇವರ ಆಶೀರ್ವಾದ ಪಡೆದರು.
ಉತ್ಸವವು ಭಕ್ತಿ, ಶಾಂತಿ ಮತ್ತು ಹಾರ್ಮೋನಿಯಲ್ಲಿರುವ ಅದ್ಭುತ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲಾ ದಾನಿಗಳು ಮತ್ತು ದೇವರ ನಾಮಕೀರ್ತನೆ ಮೂಲಕ ತಮ್ಮ ಮಾನಸಿಕ ಶಾಂತಿ ಹೆಚ್ಚಿಸಿಕೊಂಡರು.
ಈ ಸಂದರ್ಭದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ ಯಶಸ್ವಿ ಕಾರ್ಯಕ್ರಮದಲ್ಲಿ ವಿಶ್ವಾರಾಧ್ಯರ ದೇವರ ಅನುಗ್ರಹಕ್ಕೆ ಪಾತ್ರರಾದವರ ಪರವಾಗಿ, ಶ್ರೀ ವಿಜಯಕುಮಾರ್ ಸ್ವಾಮಿಜಿ ಹಾರೈಕೆ ಸಲ್ಲಿಸಿದರು.