ಸ್ವಾಮಿ ರಾಮಾನಂದ ತೀರ್ಥರ ಹೆಸರು ಮರೆತ ಮುಖ್ಯಮಂತ್ರಿ. ಪ್ರೊ ಪಾಟೀಲ್ ವಿಷಾದ
ಸ್ವಾಮಿ ರಾಮಾನಂದ ತೀರ್ಥರ ಹೆಸರು ಮರೆತ ಮುಖ್ಯಮಂತ್ರಿ- ಪ್ರೊ ಪಾಟೀಲ್ ವಿಷಾದ
ಕಲ್ಯಾಣ ಕರ್ನಾಟಕ ಉತ್ಸವ ಸಂದರ್ಭದಲ್ಲಿ ಕಲ್ಬುರ್ಗಿಯ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಧ್ವಜಾರೋಹಣ ಸಂದರ್ಭದಲ್ಲಿ ಮುಖ್ಯಮಂತ್ರಿ ಎಸ್ ಸಿದ್ದರಾಮಯ್ಯನವರು ಸಿದ್ಧಪಡಿಸಿದ ಭಾಷಣವನ್ನು ಓದುವ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ವಿಮೋಚನೆಗಾಗಿ ಶ್ರಮಿಸಿದ ಮತ್ತು ಸರ್ದಾರ್ ವಲ್ಲಬಾಯ್ ಪಟೇಲರಷ್ಟೇ ಪ್ರಮುಖವಾಗಿರುವ ಈ ಭಾಗದ ನೇತಾರ ಕಲ್ಬುರ್ಗಿ ಜಿಲ್ಲೆಯ ಮೊದಲ ಲೋಕಸಭಾ ಸದಸ್ಯರಾಗಿರುವ ಹೈದರಾಬಾದ್ ಸಂಸ್ಥಾನದ ವಿಮೋಚನಾ ಚಳುವಳಿಯ ನಾಯಕ ಸ್ವಾಮಿ ರಾಮಾನಂದ ತೀರ್ಥರ ಹೆಸರು ಉಲ್ಲೇಖಿಸುವುದನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಡಿದ ಎಲ್ಲರ ಹೆಸರನ್ನು ಉಲ್ಲೇಖಿಸಿ ಮಾತನಾಡಿದ ಮುಖ್ಯಮಂತ್ರಿಗಳು ಸ್ವಾಮಿ ರಮಾನಂದ ತೀರ್ಥರನ್ನು ಮರೆತಿದ್ದು ಅತ್ಯಂತ ವಿಷಾದದ ಸಂಗತಿಯಾಗಿದೆ ಕಲ್ಯಾಣ ಕರ್ನಾಟಕದ ಬಹುದೊಡ್ಡ ಹೋರಾಟಗಾರರಾಗಿದ್ದ ಸ್ವಾಮಿ ರಮಾನಂದ್ ತೀರ್ಥರು ಹೈದರಾಬಾದ್ ಸಂಸ್ಥಾನದ ವಿಮೋಚನೆಗಾಗಿ ಮತ್ತು ಭಾರತದ ಒಕ್ಕೂಟದಲ್ಲಿ ಹೈದರಾಬಾದ್ ಸಂಸ್ಥಾನವನ್ನು ವಿಲೀನಗೊಳಿಸುವುದಕ್ಕಾಗಿ ಹೋರಾಟ ಮಾಡಿ ಅಪಾರ ಸಂಖ್ಯೆಯ ಸಂಘಟನೆಗಳನ್ನು ಹುಟ್ಟು ಹಾಕೀ ಶಿಬಿರಗಳನ್ನು ಸ್ಥಾಪಿಸಿ ಜೈಲುವಾಸವನ್ನು ಅನುಭವಿಸಿದ ಸ್ವಾಮಿ ರಮಾನಂದ್ ತೀರ್ಥರು ಈ ಭಾಗದ ಸರ್ದಾರ್ ವಲ್ಲಭಾಯಿ ಪಟೇಲ ರಂದೆ ಕರೆಸಿಕೊಂಡರು ರಜಾಕಾರರ ವಿರುದ್ಧ ಈ ಭಾಗದಲ್ಲಿ ಹೋರಾಟ ಮಾಡಿ ಅವರ ಸದ್ದಲಿಗಿಸಿದ್ದು ಮತ್ತು ನಿಜಾಂ ಶಾಹಿ ಸರ್ಕಾರವನ್ನು ವಜಾಗೊಳಿಸಿ ಅಖಂಡ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯ ಮೊದಲ ನಾಯಕರಾಗಿದ್ದಾರೆ ಅವರ ಹೆಸರನ್ನೇ ಮರೆತು ಅವರನ್ನು ಸ್ಮರಿಸದೆ ಇರುವುದು ಅವರಿಗೆ ಮಾಡಿದ ಅವಮಾನವಾಗಿದೆ ಮುಖ್ಯಮಂತ್ರಿಗಳು ಸಿದ್ಧಪಡಿಸಿದ ಭಾಷಣವನ್ನು ಓದುವಾಗ ಈ ಅನಾಹುತ ನಡೆದಿದೆ ಈ ಭಾಷಣವನ್ನು ಸಿದ್ಧಪಡಿಸಿದವರು ಇದರ ನೈತಿಕ ಹೊಣೆಯನ್ನು ಹೊರಬೇಕು ಮುಖ್ಯಮಂತ್ರಿಗಳಿಗೆ ಇತಿಹಾಸದ ತಪ್ಪು ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸುವ ದಿಲ್ಲ ಎಂಬುದನ್ನು ನೆನಪಿಡಬೇಕು ಎಂದು ಈ ಮೂಲಕ ಎಚ್ಚರಿಸುತ್ತೇನೆ ಪ್ರೊ ಶಿವರಾಜ ಪಾಟೀಲ್ ಚಿಂತಕರು ಕಲ್ಬುರ್ಗಿ
