ಡಾ. ಶರಣಬಸವಪ್ಪ ಅಪ್ಪ ಭೇಟಿಯಾದ ಡಾ.ಪ್ರಣವಾನಂದ ಶ್ರೀ

ಡಾ. ಶರಣಬಸವಪ್ಪ ಅಪ್ಪ ಭೇಟಿಯಾದ  ಡಾ.ಪ್ರಣವಾನಂದ ಶ್ರೀ

ಡಾ. ಶರಣಬಸವಪ್ಪ ಅಪ್ಪ ಭೇಟಿಯಾದ ಡಾ.ಪ್ರಣವಾನಂದ ಶ್ರೀ

ಕಲಬುರಗಿ : ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿಗಳಾದ ಮಹಾದಾಸೋಹಿ ಡಾ. ಶರಣಬಸವಪ್ಪ ಅಪ್ಪಾಜಿಯವರು ವಯೋ ಸಹಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಅವರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕರದಾಳು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯಶ್ರೀ ಹಾಗೂ ರಾಣೆಬೆನ್ನೂರು ಅರೆ ಮಲ್ಲಾಪುರ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯರಾದ ಡಾ. ಪ್ರಣವಾನಂದ ಶ್ರೀಗಳು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

     ನಗರದ ಆಸ್ಪತ್ರೆಯಲ್ಲಿ ದಾಖಲಾದ ಅಪ್ಪಾಜಿಯವರನ್ನು ಆಗಸ್ಟ್ ಎರಡರಂದು ಡಾ. ಪ್ರಣವಾನಂದ ಸ್ವಾಮೀಜಿ ಭೇಟಿಯಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ಶೀಘ್ರ ಆರೋಗ್ಯ ಸುಧಾರಣೆಗೊಂಡು ಭಕ್ತರಿಗೆ ದರ್ಶನ, ಆಶೀರ್ವಾದ ನೀಡುವಂತಾಗಲಿ ಮತ್ತು ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ಶ್ರೀ ಶರಣಬಸವೇಶ್ವರರು ಒದಗಿಸಲಿ ಎಂದು ಪ್ರಾರ್ಥನೆ ಮಾಡಿದರು. ನಂತರ ಸಂಸ್ಥಾನ ಮಠದಲ್ಲಿ ಮಾತೃಶ್ರೀ ದಾಕ್ಷಾಯಿಣಿ ಅವ್ವಾಜಿ ಹಾಗೂ ಬಸವರಾಜ್ ದೇಶಮುಖ್ ಅವರನ್ನು ಭೇಟಿಯಾಗಿ ಅಪ್ಪಾಜಿಯವರ ಯೋಗಕ್ಷೇಮದ ಕುರಿತು ಚರ್ಚಿಸಿದರು.

  ಈ ಸಂದರ್ಭದಲ್ಲಿ ಡಾ. ಅಲ್ಲಮಪ್ರಭು ದೇಶಮುಖ್ ನಾರಾಯಣ ಗುರು ಶಕ್ತಿ ಪೀಠದ ಟ್ರಸ್ಟಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಕಡೇಚೂರ್, ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಕಲಬುರಗಿ ತಾಲೂಕು ಈಡಿಗ ಸಮಾಜದ ಅಧ್ಯಕ್ಷರಾದ ಮಹೇಶ್ ಗುತ್ತೇದಾರ್, ಮಲ್ಲಿಕಾರ್ಜುನ್ ಮತ್ತಿತರರು ಜೊತೆಗಿದ್ದರು.