ಒಂದು ದಿನದ ಪ್ರಥಮ ಪ್ರತಿಕ್ರಿಯೆ (ಎಫ್‌ಆರ್‌ಟಿ) ತರಬೇತಿ ಕಾರ್ಯಗಾರ ಉದ್ಘಾಟನೆ

ಒಂದು ದಿನದ ಪ್ರಥಮ ಪ್ರತಿಕ್ರಿಯೆ (ಎಫ್‌ಆರ್‌ಟಿ) ತರಬೇತಿ ಕಾರ್ಯಗಾರ ಉದ್ಘಾಟನೆ
ಕಲಬುರಗಿ: ನಗರದ ಸಿದ್ಧಾರ್ಥ ಕಾನೂನು ಸಭಾಂಗಣದಲ್ಲಿ ಕರ್ನಾಟಕ ಪೀಪಲ್ಸ ಎಜ್ಯುಕೇಶನ ಸೊಸೈಟಿಯ, ಸಿದ್ದಾರ್ಥ ಕಾನೂನು ಮಹಾವಿದ್ಯಾಲಯ ಕಲಬುರಗಿ ಅಂತರೀಕ ಗುಣಮಟ್ಟ ಕೋಶ (ಐಕ್ಯೊಎಸಿ) ರೆಡ್ ಕ್ರಾಸ್ ಯುವ ಘಟಕ, ಮಾನವ ಹಕ್ಕಗಳು ಮತ್ತು ಪರಿಸರ ಸಂರಕ್ಷಣ ಘಟಕ ಹಾಗೂ ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಪ್ರಥಮ ಪ್ರತಿಕ್ರಿಯೆ (ಎಫ್‌ಆರ್‌ಟಿ) ತರಬೇತಿ ಕಾರ್ಯಗಾರವನ್ನು ಪ್ರಾದೇಶಿಕ ಆರೋಗ್ಯ ಮತ್ತು ಕು.ಕ.ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ. ರವಿಕಾಂತೀ ಎಸ್.ಕ್ಯಾತ್ನಾಳ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಿದ್ಧಾರ್ಥ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಎಸ್.ಚಂದ್ರಶೇಖರ್, ತರಬೇತಿದಾರರಾದ ಮಹೆಬುಬ್ ಸಾಹೇಬ ಗಂಜಾಲ್, ಡಾ.ಸುಮಯ್ಯಾ, ಚಿಂತನ ಮುಕ್ಕಾ, ಪ್ರೀಯದರ್ಶಿನಿ, ಯುವ ರೆಡ್ ಕ್ರಾಸ್ ಘಟಕ ಅಧಿಕಾರಿ ಕೆ.ಜಿ.ಜವಳಿ, ಮಾನವ ಹಕ್ಕುಗಳು ಹಾಗೂ ಪರಿಸರ ಸಂರಕ್ಷಣ ಘಟಕದ ಸಂಯೋಜಕಿ ಕವಿತಾ ಎನ್. ಜಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.