ಲಕ್ಷಾಂತರ ಹೆಕ್ಟೇರ್ ನೆಟೆರೋಗದಿಂದ ಬೆಳೆ ಹಾನಿ ಪರಿಹಾರಕ್ಕೆ ನಿತಿನ್ ಗುತ್ತೇದಾರ ಒತ್ತಾಯ
ಲಕ್ಷಾಂತರ ಹೆಕ್ಟೇರ್ ನೆಟೆರೋಗದಿಂದ ಬೆಳೆ ಹಾನಿ ಪರಿಹಾರಕ್ಕೆ ನಿತಿನ್ ಗುತ್ತೇದಾರ ಒತ್ತಾಯ
ಅಫಜಲಪುರ: ತಾಲೂಕಿನಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಗೆ ನೆಟೆರೋಗದಿಂದ ಬೆಳೆ ಹಾನಿ ಸಂಭವಿಸಿದೆ. ರೈತರು ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ಸೃಷ್ಟಿ ಯಾಗಿದೆ. ಜಿಲ್ಲಾಡಳಿತ, ಕೃಷಿ ಇಲಾಖೆ ಕೂಡಲೇ ನೆಟೆರೋಗಕ್ಕೆ ತುತ್ತಾಗಿರುವ ರೈತರ ಜಮೀನುಗಳ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಆಗ್ರಹಿಸಿದರು.
ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಫಜಲಪುರ ಮತಕ್ಷೇತ್ರದಲ್ಲಿ ನೆಟೆರೋಗದಿಂದ ತೊಗರಿ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ಕ್ಷೇತ್ರದ ಶಾಸಕರು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚಳಿಗಾಲದ ಅಧಿವೇಶನಕ್ಕೂಷ ಮೋದಲೆ ವರದಿ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ತೋಗರಿ ಬೆಳೆ ಪ್ರಸ್ತುತ ಹೂವಾಡುವ ಹಂತದಲಿದ್ದು, ಸರ್ಕಾರವೇ ವಿತರಿಸಿದ ಜಿಆರ್‌ಜಿ 811 ಮತ್ತು 152 ತಳಿ ಗಳಿಗೆ ಒಂದು ವಾರದಲ್ಲಿ ಶೇ. 50ಕ್ಕಿಂತ ಹೆಚ್ಚು ಹೂ ಉದುರುತ್ತಿವೆ. ಕಂದು ಬಣ್ಣದ ಎಲೆಚುಕ್ಕೆ ರೋಗ ಬಾಧೆ ಕಾಡುತ್ತಿದೆ. ಜೇಡ ಬಲೆ ಕಟ್ಟುತ್ತವೆ, ಕಾಯಿ ಕೋರಕ ಕೀಟದ ಮೊಟ್ಟೆ, ಮರಿ ಹುಳುಗಳ ಬಾಧೆಯೂ ಕಂಡು ಬಂದಿವೆ.
ಹಾನಿಯಾದ ರೈತರಿಗೆ ಸರ್ಕಾರದಿಂದ ತಕ್ಷಣ ಪರಿಹಾರ ಒದಗಿಸಬೇಕು. ಗ್ರಾಮ ಆಡಳಿತ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಸಮೀಕ್ಷೆಗೆ ಮುನ್ನ ಗ್ರಾಮಗಳಲ್ಲಿ ಡಂಗುರ ಸಾರಬೇಕು ಪುನಃಸಮೀಕ್ಷೆಮಾಡಬೇಕು. . ರೈತರಿಂದ ನಿಖರ ಮಾಹಿತಿ ಪಡೆದು, ವರದಿ ಸಲ್ಲಿಸಬೇಕು, ರೈತರಿಗೆ ತಾರತಮ್ಯ ಆಗಲಾರದಂತೆ ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಒದಗಿಸಬೇಕು ಎಂದರು.