ಶಾಸಕರ ಅಮಾನತ್ತು ಖಂಡನೀಯ : ಕಲ್ಲೂರ

ಶಾಸಕರ ಅಮಾನತ್ತು ಖಂಡನೀಯ : ಕಲ್ಲೂರ

ಶಾಸಕರ ಅಮಾನತ್ತು ಖಂಡನೀಯ : ಕಲ್ಲೂರ

ಕಲಬುರಗಿ: ಶುಕ್ರವಾರ 18 ಬಿಜೆಪಿ ಶಾಸಕರನ್ನು ವಿಧಾನ ಸಭೆಯಿಂದ 6 ತಿಂಗಳುಗಳ ಕಾಲ ಅಮಾನತ್ತು ಮಾಡಿರುವ ಕಾಂಗ್ರೆಸ್‌ ಸ್ಪೀಕ‌ರ್ ಕ್ರಮ ಕಾನೂನು ಬಾಹಿರವಾಗಿದೆ ಎಂದು ಕಲಬುರಗಿ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾದ ನಗರ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸದನದ ಪ್ರತಿಷ್ಠಿತ ಸ್ಥಾನದಲ್ಲಿರುವ ಸಭಾಪತಿಗಳಾದ ಯು.ಟಿ. ಖಾದರ ಅವರು ವಿಪಕ್ಷಗಳ ಹಕ್ಕು ಮೊಟಕುಗೊಳಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನು ಕಸಿದಿದ್ದಾರೆಂದು ಆರೋಪಿಸಿದ ಅವರು ಗಂಭೀರ ವಿಷಯದ ಕುರಿತು ನ್ಯಾಯ ಕೇಳುವುದು ತಪ್ಪಾ ಎಂದು ಪ್ರಶ್ನಿಸಿದ ಅವರು ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಬೇಕು ಇಲ್ಲದಿದ್ದರೆ ಸರಕಾರ ಮತ್ತು ಸಭಾಪತಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಭಾರತೀಯ ಜನತಾ ಪಕ್ಷದ ಓಬಿಸಿ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.