ಪುಸ್ತಕ ಓದುವ ಸಂಸ್ಕೃತಿಗೆ ಪ್ರೋತ್ಸಾಹ ನೀಡಲು ಪ್ರೊ ಶಿವರಾಜ್ ಪಾಟೀಲ್ ಕರೆ.
ಪುಸ್ತಕ ಓದುವ ಸಂಸ್ಕೃತಿಗೆ ಪ್ರೋತ್ಸಾಹ ನೀಡಲು ಪ್ರೊ ಶಿವರಾಜ್ ಪಾಟೀಲ್ ಕರೆ.
ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಸಂಸ್ಕೃತಿ ನಶಿಸಿ ಹೋಗುತ್ತಿದೆ ಮೊಬೈಲ್ ಮತ್ತು ಟಿವಿ ಮಾಧ್ಯಮಗಳ ನಡುವೆ ಓದುವ ಸಂಸ್ಕೃತಿ ಜೀರ್ಣವಾಗುತ್ತಿದೆ ಅದನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಹೊಣೆ ಅದಕ್ಕಾಗಿ ಪುಸ್ತಕ ಓದುವ ಸಂಸ್ಕೃತಿಗೆ ಪ್ರೋತ್ಸಾಹ ನೀಡಬೇಕು ಅದಕ್ಕೆ ಎಲ್ಲ ಪ್ರಕಾಶಕರು ಪುಸ್ತಕ ಪ್ರಾಧಿಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಕರಿಸಬೇಕು ಎಂದು ಪ್ರೊ ಪಾಟೀಲ್ ಕರೆ ನೀಡಿದ್ದಾರೆ ಕಲ್ಯಾಣ ಕರ್ನಾಟಕದ ಸಾಹಿತ್ಯಾ ಸಕ್ತರು ಪುಸ್ತಕ ಓದುವವರು ಗ್ರಂಥಾಲಯ ಮತ್ತು ಗ್ರಂಥ ಸಂಸ್ಕೃತಿಯನ್ನು ತಮ್ಮ ಮನೆಗಳಲ್ಲಿ ಬೆಳೆಸಲು ಇಚ್ಚಿಸಿದಲ್ಲಿ ಅಂತಹ ವರಿಗೆ ಕರ್ನಾಟಕದ ಎಲ್ಲ ಪ್ರಕಾಶಕರು ತಾವು ಪ್ರಕಾಶನ ಪಡಿಸಿದ ಸಾಹಿತ್ಯ ಸಂಸ್ಕೃತಿ ಕಲೆ ಶಿಕ್ಷಣ ಸಮಾಜ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ಇತಿಹಾಸವನ್ನು ಒಳಗೊಂಡಂತಹ ಸ್ಪರ್ಧಾತ್ಮಕ ಪುಸ್ತಕಗಳನ್ನು ರೀಯಾಯಿತಿ ದರದಲ್ಲಿ ನೀಡಿದಾಗ ಈ ಸಂಸ್ಕೃತಿ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು ಅವರು ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಏರ್ಪಡಿಸಿದ ಪುಸ್ತಕ ಓದುವ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ಕುರಿತು ಮಾತನಾಡುತ್ತ ಈ ಸಲಹೆಗಳನ್ನು ನೀಡಿದರು ಕಲ್ಯಾಣ ಕರ್ನಾಟಕದ ಹಿರಿಯ ಪುಸ್ತಕ ಉದ್ಯಮಿ ಮತ್ತು ಪ್ರಕಾಶಕರಾದ ಬಸವರಾಜ ಕೊನೇಕ್ ವರು ಇದುವರೆಗೆ ಮೂರುವರೆ ಸಾವಿರ ತಲೆಬರಹಗಳ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ ಈ ಪುಸ್ತಕಗಳನ್ನು ಓದಗರಿಗೆ ಮತ್ತು ಗ್ರಂಥ ಸಂಸ್ಕೃತಿ ಬೆಳೆಸುವವರಿಗೆ 75 ಪ್ರತಿಶತ ಭಾರಿ ರೀ ಯಾಯಿತಿ ಪ್ರಮಾಣದಲ್ಲಿ ಪುಸ್ತಕಗಳನ್ನು ಮರಾಠ ಮಾಡಬೇಕೆಂದು ಪ್ರೊಫೆಸರ್ ಪಾಟೀಲ್ ಅವರು ಮನವಿ ಮಾಡಿಕೊಂಡರು ಇವರ ಮನವಿಗೆ ಸ್ಪಂದಿಸಿದ ಪುಸ್ತಕ ಯುವ ಉದ್ಯಮಿಗಳಾದ ಸಿದ್ಧಲಿಂಗ ಕೊನೆಕ್ ಮತ್ತು ಶರಣು ಕೊನೇಕ್ ಸಮ್ಮತಿಸಿ ತಮ್ಮ ಪ್ರಕಾಶನದ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಎಲ್ಲ ಪ್ರಕಾರದ ಸಾಹಿತ್ಯ ಪುಸ್ತಕಗಳನ್ನು 75 ಪ್ರತಿಶತ ಭಾರಿ ರೀಯಾಯಿತಿ ಪ್ರಮಾಣದಲ್ಲಿ ನೀಡುವದಾಗಿ ಭರವಸೆ ನೀಡಿದರು ತಮ್ಮ ಮನೆ ಮತ್ತು ಶಾಲೆ ಕಾಲೇಜುಗಳಲ್ಲಿ ಗ್ರಂಥ ಸಂಸ್ಕೃತಿಯನ್ನು ಬೆಳೆಸುವ ಆಸಕ್ತಿ ಹೊಂದಿದವರು ಈ ಪುಸ್ತಕಗಳನ್ನು ಖರೀದಿಸಿ ತಮ್ಮ ಮನೆಗಳಲ್ಲಿ ಗ್ರಂಥಾಲಯ ಸಂಸ್ಕೃತಿಯನ್ನು ಬೆಳೆಸಬೇಕೆಂದು ಪ್ರೊಫೆಸರ್ ಪಾಟೀಲ್ ಹೇಳಿದರು ಈ ಸಂದರ್ಭದಲ್ಲಿ ಬಸವರಾಜ್ ಕೊನೆಕ ಅವರು ಮಾತನಾಡಿ ಇಂಥ ಪುಸ್ತಕ ಸಂಸ್ಕೃತಿಯ ಅವಶ್ಯಕತೆ ಈಗ ಇದೆ ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸುವದಕ್ಕಾಗಿ ನಮ್ಮ ಪ್ರಕಾಶನ ಸಂಸ್ಥೆ ಯಾವ ತ್ಯಾಗಕ್ಕಾದರೂ ಸಿದ್ಧವೆಂದು ಹೇಳಿ ನಮ್ಮ ಹಾಗೆ ಕನ್ನಡ ಪುಸ್ತಕ ಪ್ರಾಧಿಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪ್ರಸಾರಂಗಗಳು ನಾಡಿನ ಶ್ರೇಷ್ಠ ಪ್ರಕಾಶಕರು 75 ಪ್ರತಿಶತ ಭಾರಿ ರೀ ಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಿದಲ್ಲಿ ಈ ಸಂಸ್ಕೃತಿ ಬೆಳೆಯಲು ಸಾಧ್ಯ ಇದಕ್ಕೆ ನಮ್ಮ ಸಮ್ಮತಿ ಇದೆ ಎಂದು ಪುಸ್ತಕ ಉದ್ಯಮಿ ಬಸವರಾಜ ಕೊನೆಕ್ ಹೇಳಿದ್ದಾರೆ ಇದೇ ರೀತಿ ಕೆಕೆಆರ್ಡಿಬಿ ಕೂಡ ಈ ಪುಸ್ತಕ ಸಂಸ್ಕೃತಿಯನ್ನು ಬೆಳೆಸಲು ಭಾರಿ ಪ್ರಮಾಣದಲ್ಲಿ ಪುಸ್ತಕಗಳನ್ನು ಖರೀದಿಸಿ ಪ್ರತಿಯೊಂದು ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಉಚಿತವಾಗಿ ಪುಸ್ತಕಗಳನ್ನು ಸರ್ಬರಾಜು ಮಾಡಿದಲ್ಲಿ ಈ ಗ್ರಂಥ ಸಂಸ್ಕೃತಿ ಬೆಳೆಯಲು ಸಾಧ್ಯವೆಂದು ಕೆಕೆಆರ್ಡಿಬಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯರುಗಳಾದ ಡಾ ಸ್ವಾಮಿ ರಾವ್ ಕುಲಕರ್ಣಿ ಡಾ. ಗವಿಸಿದ್ದಪ್ಪ ಪಾಟೀಲ್ ಡಾ ಮೀನಾಕ್ಷಿ ಬಾಳಿ ಡಾಕ್ಟರ್ ಚಿ ಸಿ ನಿಂಗಣ್ಣ ಡಾ ಶರಣಬಸಪ್ಪ ವಡ್ಡನಕೇರಿ ಕಾವ್ಯಶ್ರೀ. ಮಹಾಗಾಂಕರ್ ಮುಂತಾದವರು ಉಪಸ್ಥಿತರಿದ್ದರು