ಗಾಯಕ ರೇವಣಸಿದ್ದಯ್ಯ ಹಿರೇಮಠ ಅವರ ಗುರುವಿನ ಮೇಲಿನ ಶ್ರದ್ಧೆ ಅನುಕರಣೀಯ- ಜಗನ್ನಾಥ ಶೇರಿಕಾರ

ಗಾಯಕ ರೇವಣಸಿದ್ದಯ್ಯ ಹಿರೇಮಠ ಅವರ ಗುರುವಿನ ಮೇಲಿನ ಶ್ರದ್ಧೆ ಅನುಕರಣೀಯ- ಜಗನ್ನಾಥ ಶೇರಿಕಾರ
ಗಾಯಕ ರೇವಣಸಿದ್ದಯ್ಯ ಹಿರೇಮಠ ಅವರ ಗುರುವಿನ ಮೇಲಿನ ಶ್ರದ್ಧೆ ಅನುಕರಣೀಯ- ಜಗನ್ನಾಥ ಶೇರಿಕಾರ

ಗಾಯಕ ರೇವಣಸಿದ್ದಯ್ಯ ಹಿರೇಮಠ ಅವರ ಗುರುವಿನ ಮೇಲಿನ ಶ್ರದ್ಧೆ ಅನುಕರಣೀಯ- ಜಗನ್ನಾಥ ಶೇರಿಕಾರ

ಚಿಂಚೋಳಿ: ವೃತ್ತಿಯಿಂದ ಸಂಗೀತ ಶಿಕ್ಷಕರಾಗಿರುವ ರೇವಣಸಿದ್ದಯ್ಯ ಹಿರೇಮಠ ಅವರು ತಮಗೆ ಸಂಗೀತ ವಿದ್ಯೆ ಧಾರೆ ಎರೆದ ಗುರು ಪಂ. ಪುಟ್ಟರಾಜ ಕವಿ ಗವಾಯಿಗಳ ಮೇಲೆ ಹೊಂದಿರುವ ಶ್ರದ್ಧೆ ಭಕ್ತಿ ಅನುಕರಣೀಯವಾಗಿದೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ತಿಳಿಸಿದರು.

ಅವರು ತಾಲ್ಲೂಕಿನ ಐನೋಳ್ಳಿ ಗ್ರಾಮದಲ್ಲಿ ಚಂದಾಪುರದ ಗಾನಯೋಗಿ ಪಂ. ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ ಹಮ್ಮಿಕೊಂಡ ಪಂ. ಪಟ್ಟರಾಜ ಕವಿ ಗವಾಯಿಗಳ 11ನೇ ಜಯಂತಿ ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕರಾದ ಗೋರ್ಟಾದ ಸಿದ್ರಾಮಯ್ಯ ಮಠಪತಿ ಅವರಿಗೆ ವಿಶ್ವಗಾನ ಉಭಯ ರತ್ನ ಮತ್ತು ಚಿಮ್ಮನಚೋಡದ ಸಾಹಿತಿ ನಿಜಲಿಂಗ ರಗಟೆ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಂಗಳವಾರ ರಾತ್ರಿ ಮಾತನಾಡಿದರು.

ಪ್ರಶಸ್ತಿ ಪುರಸ್ಕೃತರಿಗೆ ಕೋಡ್ಲಿ ಹಿರೇಮಠದ ಬಸವಲಿಂಗ ಶಿವಾಚಾರ್ಯರು ಮೈಸೂರು ಪೇಟ, ಶಾಲು ಸನ್ಮಾನ ಹಾಗೂ ಪ್ರಶಸ್ತಿ ಫಲಕ ಮತ್ತು ನಗದು ರೂ 5ಸಾವಿರಗಳೊಂದಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಪಂ. ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ರೇವಣಸಿದ್ದಯ್ಯ ಹಿರೇಮಠ ಕಳೆದ 22 ವರ್ಷಗಳಿಂದ ನಿರಂತರ ಪಂ. ಪುಟ್ಟರಾಜ ಕವಿ ಗವಾಯಿಗಳ ಜನ್ಮ ದಿನ ಆಚರಿಸುವುದರ ಜತೆಗೆ ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರಿಗೆ ಪ್ರಶಸ್ತಿ ಪ್ರದಾನ ಮಾಡುತ್ತ ಬಂದಿರುವುದನ್ನು ಶ್ರೀಗಳು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವನ್ಯಜೀವಿ ಧಾಮದ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ ಅವರು ಮಾತನಾಡಿ ಸೋದರ ಮಾವ ಮಲ್ಲಿಕಾರ್ಜುನ ಶಾಸ್ತ್ರಿಗಳಿಂದಾಗಿ ಪುಟ್ಟರಾಜರು ದೊಡ್ಡ ಕಲಾವಿದರಾಗಿ ಬೆಳೆದು ವೀರೇಶ್ವರ ಪುಣ್ಯಾಶ್ರಮದ ಒಡೆಯರಾಗಿ ಅಂಧ ಅನಾಥ ಪಾಲಿಗೆ ಆಶ್ರಯದಾತರಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.

ಪಂ. ಪುಟ್ಟರಾಜರ ಜೀವನ ಸಾಧನೆ ಕುರಿತು ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರು ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಪಾಟೀಲ ಮಾತನಾಡಿದರು.

ಹಿರಿಯರಾದ ಚಂದ್ರಶೆಟ್ಟಿ ಮುರುಡಾ. ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಅಗ್ನಿಶಾಮಕ ಅಧಿಕಾರಿ ಎಸ್.ಕೆ ಹಸನ್, ನಾಗರಾಜ ಮಲಕೂಡ, ವೀರೇಶ ಯಂಪಳ್ಳಿ, ಸಂಗಯ್ಯಸ್ವಾಮಿ, ವಿಜಯಕುಮಾರ ರೊಟ್ಟಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಿವಪ್ರಸಾದ ಪಿಜಿ, , ಶಂಕರ ಇದಲಾಯಿ, ಸುಭಾಷ ಹಿರೇಮನಿ, ಭೀಮಶೆಟ್ಟಿ ಮುರುಡಾ ವಿಶ್ವನಾಥ ತುಮ್ನಂಪಳ್ಳಿ, ಅಶೋಕ ಭಜಂತ್ರಿ, ಈಶ್ವರಯ್ಯ ಕೂಡಾಂಬಲ ಮೊದಲಾದವರು ಇದ್ದರು.

ಗಾನಯೋಗಿ ಪಂ. ಪಂಚಾಕ್ಷರಿ ಕವಿ ಗವಾಯಿಗಳ ಸಂಘದ ಅಧ್ಯಕ್ಷ ರಾಮಯ್ಯಸ್ವಾಮಿ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಚಿತ್ರಕಲಾವಿದ ನಾಗೇಶ ಶೀಲವಂತ ಅವರು ಗಾಯನಕ್ಕೆ ಕುಂಚ ಸ್ಪರ್ಶ ನೀಡಿ ಪುಟ್ಟರಾಜರ ಚಿತ್ರ ಬಿಡಿಸಿದರು. ನಿಡಗುಂದಾದ ನಕ್ಷತ್ರ ರೇವಣಕುಮಾರ ಹಿರೇಮಠ ಅವರಿಂದ ಭರತ ನಾಟ್ಯ ನಡೆಯಿತು.

ರೇವಣಸಿದ್ದಯ್ಯ ಹಿರೇಮಠ ಪ್ರಸ್ತಾವಿಕ ಮಾತನಾಡಿದರು. ಶೇಖ್ ಭಕ್ತಿಯಾರ್ ಜಹಾಗೀರದಾರ ಸ್ವಾಗತಿಸಿದರು. ಚಂದ್ರಶೇಖರ ಲಕಶೆಟ್ಟಿ ನಿರೂಪಿಸಿದರು. ಪುಷ್ಪಲತಾ ಹಿರೇಮಠ ವಂದಿಸಿದರು.

ಕಲಾವಿದೆ ಅಂಜನಾದೇವಿ ಭೋವಿ, ಸಿದ್ರಾಮಯ್ಯ ಮಠಪತಿ, ಶರಣಯ್ಯಸ್ವಾಮಿ ಅಲ್ಲಾಪುರ, ಶಿವರಾಜ ಮುರುಡಾ, ಗುಂಡಪ್ಪ ಶಿವಯೋಗಿ, ದಯಾನಂದ ಹಿರೇಮಠ, ಮಲ್ಲಿಕಾರ್ಜುನ ದೇವಗಿರಿ, ರೇವಣಸಿದ್ದಯ್ಯ ಹಿರೇಮಠ, ಪುಷ್ಪಲತಾ ಹಿರೇಮಠ, ಗುರುಕುಮಾರ, ಸಿದ್ದಣ್ಣ ಕೋಲಕುಂದಾ, ಸಂಗೀತ ಕಾರ್ಯಕ್ರಮ ತಡರಾತ್ರಿ ವರೆಗೂ ನಡೆಯಿತು.