ಲಿಂ.ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಮಹಾಶಿವ ಜೀವನಾಧಾರಿತ ನಾಟಕ: ಭಕ್ತರ ಮನದಲ್ಲಿ ಪೂಜ್ಯರು ಚಿರಸ್ಥಾಯಿ

ಲಿಂ.ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಮಹಾಶಿವ ಜೀವನಾಧಾರಿತ ನಾಟಕ: ಭಕ್ತರ ಮನದಲ್ಲಿ ಪೂಜ್ಯರು ಚಿರಸ್ಥಾಯಿ

ಲಿಂ.ಪೂಜ್ಯ ಡಾ ಶರಣಬಸವಪ್ಪ ಅಪ್ಪಾಜಿ ಮಹಾಶಿವ ಜೀವನಾಧಾರಿತ ನಾಟಕ: ಭಕ್ತರ ಮನದಲ್ಲಿ ಪೂಜ್ಯರು ಚಿರಸ್ಥಾಯಿ

ಕಲಬುರಗಿ, ಮಾ. 4: ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಸಂಸ್ಥಾನದ ೮ನೇ ಪೀಠಾಧಿಪತಿಗಳಾದ ಲಿಂಗೈಕ್ಯ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಮಹಾಶಿವ ಜೀವನಾಧಾರಿತ ನಾಟಕ ಪ್ರದರ್ಶನವು ಶರಣ ಸಂಸ್ಥಾನದಲ್ಲಿ ಭಕ್ತಿಭಾವ ಪೂರ್ಣತೆ ಯೊಂದಿಗೆ ಜರುಗಿತು.

ಕಾರ್ಯಕ್ರಮವು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಣಿ ಅವ್ವಾಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ಇದೇ ವೇಳೆ ೯ನೇ ಮಹಾದಾಸೋಹಿ ಪೀಠಾಧಿಪತಿಗಳಾದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪಾಜಿ ಅವರ ಆಶೀರ್ವಾದವೂ ಕಾರ್ಯಕ್ರಮಕ್ಕೆ ಲಭಿಸಿತು.

ನಾಟಕದಲ್ಲಿ ಡಾ. ಶರಣಬಸವಪ್ಪ ಅಪ್ಪಾಜಿ ಅವರ ಜನನದ ತೋಟ್ಟಿಲಲ್ಲಿ ಮುದ್ದಾದ ಮಗುವನ್ನು ಮಲಗಿಸಿ ಜೋಗುಳ ಪದ ಹಾಡು ಜನಮನ ಸೂರೆಗೊಂಡಿತು. ಪೂಜ್ಯ ಅಪ್ಪಾಜಿ ಅವರಿಗೆ ಪೂಜ್ಯ ಗುರುಗಳಿಂದ ಲಿಂಗ ದೀಕ್ಷೆ ನೀಡಿದ್ದು, ಸಾಕ್ಷಾತ್ ಶರಣಬಸವಪ್ಪ ಅಪ್ಪಾಜಿ ಅವರ ಹಾಗೆಯೇ ಇರುವ ಮಗುವಿನ ಪಾತ್ರ ಪ್ರೇಕ್ಷಕರ ಮನ ಸೆಳೆಯಿತು.

ಪೂಜ್ಯ ಅಪ್ಪಾಜಿ ಅವರ ಆದರ್ಶಮಯ ಜೀವನ, ಶಿಕ್ಷಣ, ದಾಸೋಹ ಪರಂಪರೆ, ಸಮಾಜಮುಖಿ ಚಿಂತನೆಗಳು ಮತ್ತು ಶರಣ ತತ್ವ ಪ್ರಸಾರದಲ್ಲಿ ಅವರ ಅಪಾರವಾದ ಕೊಡುಗೆಗಳನ್ನು ನಾಟಕದ ಮೂಲಕ ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಲಾಯಿತು. ನಾಟಕವು ಭಕ್ತರಲ್ಲಿ ಭಾವೈಕ್ಯತೆ ಮೂಡಿಸಿ, ಶರಣ ಸಂಸ್ಕೃತಿಯ ಮಹತ್ವವನ್ನು ಮತ್ತೊಮ್ಮೆ ನೆನಪಿಸಿತು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿಳಾದ ಡಾ ಅಲ್ಲಮಪ್ರಭು ದೇಶಮುಖ, ಶರಣ ಸಂಸ್ಥಾನದ ಭವಾನಿ ಎಸ್. ಅಪ್ಪ, ಶಿವಾನಿ ಎಸ್. ಅಪ್ಪ, ಮಹೇಶ್ವರಿ ಎಸ್. ಅಪ್ಪ, ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ್, ಡಾ ಲಕ್ಷ್ಮಿ ಪಾಟೀಲ್ ಮಾಕಾ, ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ, ಡಾ ಆನಂದ ಸಿದ್ದಾಮಣಿ, ಲೇಖಕ ಪ್ರೊ ಯಶವಂತರಾಯ ಅಷ್ಠಗಿ, ಡಾ ಸುಮಂಗಲಾ ನಂದೀಶ್ ರೆಡ್ಡಿ, ಡಾ ಸಾರಿಕಾದೇವಿ ಕಾಳಗಿ , ಸಾಹಿತಿ ವಿಶ್ವನಾಥ ಭಕರೆ, ಹಣಮಂತರಾಯ ಮಂಗಾಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಈ ನಾಟಕ ರಚನೆ ಡಾ ಶಿವರಾಜ ಶಾಸ್ತ್ರಿ ಹೇರೂರ ಮಾಡಿದ್ದರು .ಮಾರ್ಗದರ್ಶನ ಡಾ ಸುರೇಶ್ ನಂದಗಾಂವ ನಡೆಸಿ ಕೊಟ್ಟರು, ಪ್ರಾಧ್ಯಾಪಕರಾದ ಚೆನ್ನಬಸವ ಬಮ್ಮಣಿ ಸಂಗೀತ ಸೇವೆ ಸಲ್ಲಿಸಿರು. ಸಾವಿರಾರು ಭಕ್ತವೃಂದದವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಾರ್ಯಕ್ರಮವು ಭಕ್ತರ ಭಾವಪೂರ್ಣ ಸ್ಪಂದನೆಯ ನಡುವೆ ಯಶಸ್ವಿಯಾಗಿ ಸಂಪನ್ನಗೊಂಡಿತು.