ಅದ್ದೂರಿ 'ರೂಢಿ ಪಾಠ' ಮುಕ್ತಾಯ

ಅದ್ದೂರಿ 'ರೂಢಿ ಪಾಠ' ಮುಕ್ತಾಯ

ಅದ್ದೂರಿ 'ರೂಢಿ ಪಾಠ' ಮುಕ್ತಾಯ 

ಆಳಂದ: ತಾಲ್ಲೂಕಿನ ಪಿ.ಎಸ್.ಆರ್.ಎಂ.ಎಸ್. ಬಿ.ಎಡ್ ಕಾಲೇಜಿನ 2025-26ನೇ ಸಾಲಿನ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳ ಪ್ರಾಯೋಗಿಕ 'ರೂಢಿ ಪಾಠಗಳ' (Practice Teaching) ಮುಕ್ತಾಯ ಸಮಾರಂಭವು ಸೋಮವಾರ ತಾಲ್ಲೂಕಿನ ಸಾವಳೇಶ್ವರ ಗ್ರಾಮದ ವಿಶ್ವ ಸನ್ಮತಿ ಪ್ರೌಢ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮದವನ್ನು ವಿ.ಕೆ.ಜಿ. ಪದವಿ ಕಾಲೇಜಿನ ಪ್ರಾಚಾರ್ಯರಾದ ಕಲ್ಯಾಣಿ ಎಸ್. ಸಾವಳಗಿ ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ.ಮುಂದೆ ಮಹಿಳೆಯ ಕಾರ್ಯವನ್ನು ಪುರುಷ ಮಾಡುವ ಕಾಲ ದೂರವಿಲ್ಲ ಎಂದು ಭವಿಷ್ಯ ನುಡಿದರು. 

ಮುಖ್ಯ ಅತಿಥಿ,ಕಾಲೇಜ್ ಪ್ರಾಂಶುಪಾಲ ಡಾಕ್ಟರ್ ಅಶೋಕ ರೆಡ್ಡಿ ಮಾತನಾಡಿ, "ಶಿಕ್ಷಕ ವೃತ್ತಿಯು ಕೇವಲ ಉದ್ಯೋಗವಲ್ಲ, ಅದು ಸಮಾಜವನ್ನು ತಿದ್ದುವ ಜವಾಬ್ದಾರಿ. ಪ್ರಾಯೋಗಿಕ ಪಾಠಗಳು ವಿದ್ಯಾರ್ಥಿಗಳನ್ನು ಪರಿಪೂರ್ಣ ಶಿಕ್ಷಕರನ್ನಾಗಿ ರೂಪಿಸುತ್ತವೆ" ಎಂದು ಹಾರೈಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾವಳೇಶ್ವರ ವಿ.ಎಸ್.ಎಚ್.ಎಸ್. ಮುಖ್ಯಗುರುಗಳಾದ ಶ್ರೀ ಆನಂದ ಗಾವಡೆ,ಪತ್ರಕರ್ತ ಸೂರಜ್ ಸೇರಿದಂತೆ ಶಾಲೆಯ ಶಿಕ್ಷಕರು ಮಾತನಾಡಿದರು.

ಮಾರ್ಗದರ್ಶಕರಾದ ನಾಗೇಂದ್ರ ಚಿಕ್ಕಳ್ಳಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಬಿ.ಎಡ್ ಕಾಲೇಜಿನ ಉಪನ್ಯಾಸಕರುಗಳಾದ ಡಾಕ್ಟರ್ ರಾಜಕುಮಾರ ಹರಳಯ್ಯ,ಪ್ರದೀಪ್ ಜಿಡ್ಡೆ, ಪತ್ರಕರ್ತ ಮಹೇಶ್ ಸಾಖರೆ ವಿಶ್ವ ಸನ್ಮತಿ ಶಾಲೆಯ ಸಹ ಶಿಕ್ಷಕರು ವಿದ್ಯಾರ್ಥಿಗಳು , ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ಇದೇ ವೇಳೆಯಲ್ಲಿ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದ್ದರು.ಪ್ರಶಿಕ್ಷಣಾರ್ಥಿಗಳು ತೆಗೆದುಕೊಂಡ ಕೀರು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಜ್ಯೋತಿ ಕುಂಬಾರ ಕಾರ್ಯಕ್ರಮ ನಿರೂಪಿದರು.ಮಂಜುನಾಥ್ ತಳವಾರ ಸ್ವಾಗತಿಸಿದರು.ರಾಹುಲ್ ವಂದಿಸಿದರು.

ಪ್ರಾಯೋಗಿಕ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಬಿ.ಎಡ್ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.

ವರದಿ ಡಾ. ಅವಿನಾಶ S. ದೇವನೂರ