ಮಾತೃ ಹೃದಯಿ ಸಾರಿಕಾ ಗಂಗಾ

ಮಾತೃ  ಹೃದಯಿ ಸಾರಿಕಾ ಗಂಗಾ

ಮಾತೃ ಹೃದಯಿ ಸಾರಿಕಾ ಗಂಗಾ 

ಬೀದರ ಜಿಲ್ಲೆಯ ಮಹಿಳಾ ಸಾಧಾಕಿಯರಲ್ಲಿಅಪರೂಪದ ಸರಳತೆಯ ವ್ಯಕ್ತಿತ್ವವುಳ್ಳ ಸಾಧಕಿ ಶ್ರೀಮತಿ ಸಾರಿಕ ಗಂಗಾರವರು.ಇವರು ವೃತ್ತಿಯಲ್ಲಿ ಶಿಕ್ಷಕಿ, ಪ್ರವೃತ್ತಿಯಲ್ಲಿ ಹವ್ಯಾಸಿ 

 ಬರಹಗಾರರು, ಸಾರಿಕಾ ಗಂಗಾರವರು. ಜನಸಿದ್ದು 1981ರಲ್ಲಿ, ಮದರಗಾಂವ ಗ್ರಾಮದವರಾದ ತಂದೆ ಹಣಮಂತರಾವ, ತಾಯಿ ಸರಸ್ವತಿಯವರ ಹಿರಿಯ ಮಗಳು ಇಬ್ಬರು ತಮ್ಮoದಿರು ಒಬ್ಬಳೆ ನಾಗೇಶ್ವರಿ ತಂಗಿ ಇದ್ದಾಳೆ.

ಸಾರಿಕಾರವರು ಪ್ರಾಥಮಿಕ , ಪ್ರೌಢ ಶಿಕ್ಷಣ, ಪಿ.ಯು. ಸಿ. ಮುಂದೆ ಟಿ. ಸಿ. ಎಚ್. ಪೂರ್ಣಗೊಳಿಸಿ ನಂತರ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ . ಶ್ರೀ ಸುಧೀರ ಇವರ ಜೋತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸಾರಿಕಾರವರು ಉತ್ತಮ ಬರಹಗಾರರು ಇವರು ಶರಣರ ಸಾಹಿತ್ಯದಲ್ಲಿ ಅಭಿರುಚಿ ಹೊಂದಿದ್ದಾರೆ ಹಾಗು ಬಸವ ತತ್ವವನ್ನು ಮೈಗೂಡಿಸಿಕೊಂಡವರು. 

ಇನ್ನೂರಕ್ಕಿಂತ ಹೆಚ್ಚು ಆದುನಿಕ ವಚನಗಳು ಬರೆದಿದ್ದಾರೆ .

ಇವರು ಬರೆದ ಲೇಖನ, ಕಥೆ ಕವನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ.

  ಸಾರಿಕಾರವರು ಬರೆದ ನೆನಪಿನ ಕಾರಂಜಿ ಕವನ ಸಂಕಲನ ಪ್ರಕಟಿಸಿ ಓದುಗರ ಕೈಗೆ ನೀಡಿದ್ದಾರೆ.ಸ್ವಾತಂತ್ರ ಹೋರಾಟಗಾರರಾದ ಭಾಯಿ ಭನ್ಸಿಲಾಲ್ ಭಾಯಿ ಶ್ಯಾಮಲಾಲ ರವರ ಕುರಿತು ಲೇಖನಗಳು ಇವರ ಪ್ರಕಟಣೆ ಹಂತದಲ್ಲಿವೆ.

ಸಾರಿಕಾರವರು ಸಾವಿತ್ರಬಾಯಿ ಫುಲೇ ಸಂಘದ ಜಿಲ್ಲಾಧ್ಯಕ್ಷರಾಗಿ, ಪ್ರಸ್ತುತ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ತಮ್ಮ ಸಂಸ್ಥೆಯ ಮೂಲಕ ಯೋಗ, ಆರೋಗ್ಯ ಶಿಭೀರಗಳನ್ನು ಏರ್ಪಡಿಸಿದ್ದಾರೆ.

 ಕರೋನಾ ಸಂಕಷ್ಟ ಸಮಯದಲ್ಲಿ ಮಕ್ಕಳಿಗೆ ಆನ್ ಲೈನ್ ಮೂಲಕ ಶಿಕ್ಷಣವನ್ನು ನೀಡಿದರು. 

ಇವರ ಸಾಹಿತ್ಯಿಕ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆ ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳು ನೀಡಿ ಗೌರವಿಸಿವೆ.

ಇವರು ಯೂಟ್ಯೂಬ್ ಮೂಲಕ ಮಕ್ಕಳಿಗೆ ಶೈಕ್ಷಣ ಬಿಡುತ್ತಿದ್ದಾರೆ. ಅನೇಕ ಸಾಹಿತಿಗೆ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಹಿಂದುಳಿದ ಮತ್ತು ನಿರ್ಗತಿಕ ಮಕ್ಕಳಿಗೆ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ನಿಂತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ.

ಪ್ರಶಸ್ತಿ ಪುರಸ್ಕಾರಗಳು

1)ಧರಿನಾಡು ಪ್ರಶಸ್ತಿ :-ಕರ್ನಾಟಕ ಬರಹಗಾರರ ಸಂಘದಿಂದ.

2)ಗುರು ಪ್ರತಿಭಾ ಪುರಸ್ಕಾರ :-ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ ಮೈಸೂರು

3)ಕನ್ನಡ ಕಾಯಕ ರತ್ನ ಪ್ರಶಸ್ತಿ :-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೀದರ

4)ಕನ್ನಡಾಂಬೆ ಸಂಘಟನ ಪ್ರಶಸ್ತಿ :-ಕನ್ನಡಾಂಬೆ ಶಿಕ್ಷಣ ಸಂಸ್ಥೆ ಕಬಿರಾಬಾದ

5)ಮಹಿಳಾ ಚೇತನ ಪ್ರಶಸ್ತಿ

6)ಕನ್ನಡ ವಿ ಶಾರದೆ ಪ್ರಶಸ್ತಿ

7)ಸಾವಿತ್ರ ಬಾಯಿ ಫುಲೇ ಪ್ರಶಸ್ತಿ

8)ಉತ್ತಮ ಶಿಕ್ಷಕಿ ಪ್ರಶಸ್ತಿ

9)ಕ್ರಿಯಾಶೀಲ ವಿಜ್ಞಾನ ಶಿಕ್ಷಕಿ ಪ್ರಶಸ್ತಿ

10)ಕಾವ್ಯಶ್ರೀ ರಾಜ್ಯ ಪ್ರಶಸ್ತಿ

11)ಕೌಶಲ್ಯ ಕುಟೀರ ಗೌರವ ಪ್ರಶಸ್ತಿ

12)ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಪುರಸ್ಕಾರ

13)ಕ್ಲಾಸಿಕಲ್ಲ್ ಸಂಗೀತದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳು ಲಭಿಸಿವೆ.

ಓಂಕಾರ ಪಾಟೀಲ

(ಕಾರ್ಯದರ್ಶಿ:-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ )