ಸಿಎಂ ಪರವಾಗಿ ಇಡೀ ಸರ್ಕಾರವೆ ಇದೆ : ಡಾ.ಶರಣಪ್ರಕಾಶ ಪಾಟೀಲ
ಮೂಡಾ ಪ್ರಕರಣ ಕುರಿತ ಹೈಕೋರ್ಟ್ ತೀರ್ಪು ಅಚ್ಚರಿ ಮೂಡಿಸಿದೆ: ಡಾ ಶರಣಪ್ರಕಾಶ್ ಪಾಟೀಲ್
ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದದ ತನಿಖೆಗೆ ತಡೆ ನೀಡದಿರುವ ಹೈಕೋರ್ಟ್ ತೀರ್ಪು ಅಚ್ಚರಿ ಮೂಡಿಸಿದೆ ಎಂದು ಸಚಿವ ಡಾ ಶರಣಪ್ರಕಾಶ್ ಪಾಟೀಲ್
ಯಾವುದೇ ಸತ್ಯಾಸತ್ಯತೆ ಇಲ್ಲದೇ ಕೇಂದ್ರದ ಒತ್ತಡಕ್ಕೆ ಮಣಿದು ರಾಜ್ಯಪಾಲರು ಸಿದ್ದರಾಮಯ್ಯನವರ ವಿರುದ್ಧ ಈ ತನಿಖೆಗೆ ಆದೇಶಿಸಿದ್ದಾರೆಯೆ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.
ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳನ್ನು ಐಟಿ, ಇ.ಡಿ ಸಿಬಿಐ ಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣಗಳ ಮೂಲಕ ಅಸ್ಥಿರಗೊಳಿಸುವುದು ಕೇಂದ್ರದ ಬಿಜೆಪಿ ಸರ್ಕಾರ ನಡೆಸಿಕೊಂಡು ಬಂದಿರುವ ನೀಚ ರಾಜಕಾರಣವಾಗಿದೆ. ಇದಕ್ಕೆಲ್ಲ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಅಭಿಪ್ರಾಯಿಸಿದ್ದಾರೆ.
ಹೈಕೋರ್ಟ್ ತೀರ್ಪಿನ ಅಂಶಗಳನ್ನು ಪರಿಗಣಿಸಿ ಮುಂದಿನ ಕಾನೂನು ಹೋರಾಟ ರೂಪಿಸುತ್ತೇವೆ. ಯಾವುದೇ ತಪ್ಪು ಮಾಡದ, ಭ್ರಷ್ಟಾಚಾರದ ಕಳಂಕವನ್ನು ಹತ್ತಿರಕ್ಕೂ ಸೇರಿಸದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪರವಾಗಿ ಕಾಂಗ್ರೆಸ್ ಪಕ್ಷ, ಶಾಸಕರು ಮತ್ತು ಇಡೀ ಸರ್ಕಾರವೆ ಅವರ ಹಿಂದೆ ಇದೆ.ಅಂತಿಮವಾಗಿ ಸತ್ಯಕ್ಕೆ ಜಯವಾಗಲಿದೆ! ಎಂದರು
17(ಎ) ಅಡಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ ಆದೇಶ ಸರಿ ಇದೆ ಎಂದು ನ್ಯಾ.ನಾಗಪ್ರಸನ್ನ ಪೀಠ ಹೇಳಿದೆ ಆದೇಶ ಪ್ರತಿ ಇದರಲ್ಲಿ ಇದೆ ಅದನ್ನು ಡೌನ್ಲೋಡ್ ಮಾಡಿಕೊಂಡು ನೋಡಬಹುದು.