ಬಿಜೆಪಿ ಯಿಂದ ಸಾವಿನ ಮನೆಯಲ್ಲಿ ರಾಜಕೀಯ| ಸುಳ್ಳಿನಿಂದ ಖರ್ಗೆ ಯವರನ್ನು ಕುಗ್ಗಿಸುವ ಪ್ರಯತ್ನ :..
ಬಿಜೆಪಿ ಯಿಂದ ಸಾವಿನ ಮನೆಯಲ್ಲಿ ರಾಜಕೀಯ|
ಸುಳ್ಳಿನಿಂದ ಖರ್ಗೆ ಯವರನ್ನು ಕುಗ್ಗಿಸುವ ಪ್ರಯತ್ನ :..
ಶಹಾಬಾದ : - ಸಚಿವ ಪ್ರಿಯಾಂಕ್ ಖರ್ಗೆ ಅವರ ಏಳಿಗೆ ಸಹಿಸಿಕೊಳ್ಳಕ್ಕಾಗದೆ, ಬಿಜೆಪಿ ಯ ಜಿಲ್ಲಾ ಹಾಗೂ ರಾಜ್ಯದ ನಾಯಕರು ಖರ್ಗೆ ಯವರ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ ಹೇಳಿದ್ದಾರೆ.
ಅವರು ಮಾದ್ಯಮ ದವರ ಜೊತೆ ಮಾತನಾಡಿ, ಡೆತ್ ನೋಟ್ ಮತ್ತು ಆಪ್ತರು ಇದ್ದಾರೆ ಎಂಬ ಇಂತ ಕುತಂತ್ರ ವಿಷಯದಲ್ಲಿ ತಳಕು ಹಾಕುವ ಪ್ರಯತ್ನ ಬಿಜೆಪಿ ಪಕ್ಷದವರು ನಿರಂತರ ಮಾಡುತ್ತಿದ್ದಾರೆ, ಅವರ ಪ್ರಯತ್ನ ಎಂದಿಗೂ ಫಲಿಸುವುದಿಲ್ಲ, ಯಾಕೆಂದರೆ, ಜನಪರವಾದ ಕೆಲಸ ಮಾಡುತ್ತಿರುವ ನಾಯಕರಿಗೆ ಯಾವ ಕುತಂತ್ರದಿಂದ ಕುಗ್ಗಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರೇ, ಖುದ್ಧಾಗಿ ರಾಜ್ಯದ ಗೃಹ ಸಚಿವರಿಗೆ ಸಚಿನ ಪಾಂಚಾಳ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ಇಲಾಖೆಗೆ ವಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮನವಿ ಮಾಡಿದ್ದಾರೆ, ಸಂಪೂರ್ಣ ತನಿಖೆ ಮುಗಿಯುವವರೆಗೂ ಸಹನೆ ತೋರದೆ, ಬಿಜೆಪಿಯವರು ಸಚಿವ ಪ್ರಿಯಾಂಕ್ ಖರ್ಗೆ ಯವರ ರಾಜೀನಾಮೆ ಕೇಳುವ ಮುಖಾಂತರ ಗುತ್ತಿಗೆದಾರ ಸಚಿನ ಸಾವಿನಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲ್ಲು ಮುಂದಾಗಿದ್ದಾರೆ ಎಂದು ರಾಜೇಶ್ ಯನಗುಂಟಿಕರ ಪತ್ರಿಕಾ ಪ್ರಕಟಣೆಗಾಗಿ ಹೇಳಿಕೆ ನೀಡಿದ್ದಾರೆ.
ಶಹಾಬಾದ:-ಸುದ್ದಿ ನಾಗರಾಜ್ ದಂಡಾವತಿ