ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವ: ಟೌನ್ ಹಾಲ್ ಆವರಣದಲ್ಲಿ ಬಿ ಆರ್ ಪಾಟೀಲ್ ಗೌರವ ನಮನ ಸಲ್ಲಿಸಿದರು

ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವ: ಟೌನ್ ಹಾಲ್ ಆವರಣದಲ್ಲಿ ಬಿ ಆರ್ ಪಾಟೀಲ್ ಗೌರವ ನಮನ ಸಲ್ಲಿಸಿದರು

ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವ: ಟೌನ್ ಹಾಲ್ ಆವರಣದಲ್ಲಿ ಗೌರವ ನಮನ

ಕಲಬುರಗಿ, ಏಪ್ರಿಲ್ 5:ಡಾ. ಬಾಬು ಜಗಜೀವನರಾಮ ಅವರ 118ನೇ ಜಯಂತ್ಯುತ್ಸವ ಅಂಗವಾಗಿ, ನಗರದ ಟೌನ್ ಹಾಲ್ ಆವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರು ಡಾ. ಬಾಬು ಜಗಜೀವನರಾಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ದಕ್ಷಿಣನಗರದ ಅಧ್ಯಕ್ಷ ಲಿಂಗರಾಜ್ ತಾರಪೈಲ್, ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಜವಳಿ, ಜಿಲ್ಲಾ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ರಂಜಿತ್ ಮೂಲಿಮನಿ, ಮುಖಂಡ ರಾಹುಲ್ ಮೇತ್ರೆ, ಆಳಂದ ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಜವಳಿ, ಮಂಜುನಾಥ ಲೆಂಗಟಿ, ರಮೇಶ್ ಕುಮಾರ್ ಹನಕುಣಿ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಡಾ. ಬಾಬು ಜಗಜೀವನರಾಮರ ಸಾಮಾಜಿಕ ನ್ಯಾಯದ ಧೋರಣೆಯನ್ನು ಮೆಚ್ಚಿಕೊಂಡು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.  

— KKP ವಾರ್ತೆ, ಕಲಬುರಗಿ