ರೈತರಿಗೆ ಅನ್ಯಾಯ ಮಾಡಿದ ಸಿದ್ದಸಿರಿ ಎಥನಾಲ್ ಘಟಕ? ಯತ್ನಾಳ್ ವಿರುದ್ಧ ಜಮಾದಾರ ಗುಡುಗು
ಚಿಂಚೋಳಿ ಸಿದ್ದಸಿರಿ ಎಥಿನಾಲ್ ಕಾರ್ಖಾನೆಯಿಂದ ರೈತರಿಗೆ ಅನ್ಯಾಯ : ಆರೋಪ
ರೈತರಿಗೆ ಕೊಟ್ಟಮಾತಿನಂತೆ ನಡೆದುಕೊಳ್ಳದ ಬಸವನಗೌಡ ಪಾಟೀಲ್ ಯತ್ನಾಳ್: ಗುಡುಗಿದ ಜಮಾದಾರ
ಚಿಂಚೋಳಿ :ರಾಜ್ಯ ಸರಕಾರ ಪ್ರತಿ ಟನ್ ಕಬ್ಬಿಗೆ 3300 ರು ಬೆಲೆ ನಿಗದಿಗೊಳಿಸಿದೆ. ಆದರೆ ಚಿಂಚೋಳಿ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ರೈತರಿಗೆ ಪ್ರತಿ ಟನ್ ಕಬ್ಬಿಗೆ 2550 ರು ಹಣ ನಿಗದಿಪಡಿಸಿ ರೈತರ ಖಾತೆಗೆ ಜಮಾ ಮಾಡುವ ಮೂಲಕ
ಚಿಂಚೋಳಿ ರೈತರಿಗೆ ಕೊಟ್ಟಮಾತಿನಂತೆ ನಡೆದುಕೊಳ್ಳದ ಬಸವನಗೌಡ ಪಾಟೀಲ್ ಯತ್ನಾಳ್ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬೆಂಗಳೂರು ರಾಜ್ಯ ಬಾಲ ಭವನ ಸೂಸೈಟಿಯ ಉಪಾಧ್ಯಕ್ಷ ಅನೀಲಕುಮಾರ ಜಮದಾದಾ ಹಲಚೇರಿ ಅವರು ಗುಡುಗಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚಿಂಚೋಳಿ ಭಾಗದ ರೈತರು ಹೆಚ್ಚಿನ ಸಂಖ್ಯೆಲ್ಲಿ ಕಬ್ಬು ಬೆಳೆಯಿರಿ ರಾಜ್ಯದಲ್ಲಿ ಯಾವುದೇ ಕಾರ್ಖಾನೆ ನೀಡಿರುವುದರಕ್ಕಿಂತ ಮತ್ತು ಸರಕಾರ ನಿಗದಿ ಮಾಡಿರುವ ದರಕ್ಕಿಂತ ನೂರು ರೂಪಾಯಿ ಜಾಸ್ತಿ ಬೆಲೆ ಕೊಟ್ಟು ರೈತರಿಂದ ಕಬ್ಬು ಖರೀದಿಸುತ್ತೇನೆ ಎಂದು ಯತ್ನಾಳ ಅವರು ಚಿಂಚೋಳಿ ಸಿದ್ಧಸಿರಿ ಕಾರ್ಖಾನೆ ಪ್ರಾರಂಭ ಮಾಡುವ ಸಂದರ್ಭದಲ್ಲಿ ರೈತರಿಗೆ ಮಾತು ಕೊಟ್ಟಿದರು. ಆ ಮಾತು ಉಳಿಸಿಕೊಳದೇ ರೈತರಿಗೆ ಟನ್ ಗೆ 2550 ರು ಕೊಟ್ಟು ದುಡಿದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಯತ್ನಾಳ ಅವರು ಎಂದು ಆರೋಪಿಸಿದರು. ಕ್ಷೇತ್ರದ ಶಾಸಕರು, ಮಾಜಿ ಸಂಸದರು, ಬಿಜೆಪಿ ಪಕ್ಷದ ನಾಯಕರು ಎಲ್ಲಿದ್ದೀರಿ? ಎಥೆನಾಲ್ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ಹೋರಾಟ ಮಾಡುವಾಗ ಇದ್ದ ಪೌರುಷ ಈಗ ರೈತರಿಗೆ ಅನ್ಯಾಯವಾಗುತ್ತಿರುವಾಗ ಆ ನಿಮ್ಮ ಪೌರುಷ ಈಗ ಯಾಕೇ ಇಲ್ಲ. ಕಾರ್ಖಾನೆ ವಿರುದ್ದ ಒಂದೇ ಒಂದು ಮಾತನಾಡದೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದೀರಾ ಅಂದರೆ ನಿಮ್ಮ ಹೋರಾಟ ರೈತ ಪರವಾಗಿರದೆ, ಕಾರ್ಖಾನೆಯ ಯಜಮಾನರ ಪರವಾಗಿ ಇತ್ತು ಎಂದು ರೈತರ ಮುಂದೆ ಒಪ್ಪಿಕೊಳ್ಳಿ ಎಂದಿದ್ದಾರೆ. ಇನ್ನೂ ಕಾರ್ಖಾನೆಯ ಮುಂದೆ ರಾಜಕೀಯ ನಾಯಕರ ಚಪ್ಪಲಿ ಬಿಡಲು ಬಿಡುವುದಿಲ್ಲ ಎಂದು ಹೇಳಿದ್ದಿರಿ. ನೀವು ಆ ಮಾತಿಗೆ ತಪ್ಪಿದರೆ ಚಿಂಚೋಳಿ ಜನತೆ ನಿಮಗೆ ರಸ್ತೆಯ ಮೇಲೆ ತಂದು ನಿಲ್ಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ. ಸಿದ್ಧಸಿರಿ ಕಾರ್ಖಾನೆ ಪ್ರಾರಂಭ ಮಾಡಲು ಹೋರಾಟ ಮಾಡಿದ ಪ್ರಾಯೋಜಿತ ನಕಲಿ ಹೋರಾಟಗಾರರು ಈಗ ಕಾರ್ಖಾನೆಯಿಂದ ದುಡಿದ ರೈತರ ಕಬ್ಬಿಗೆ ಬೆಲೆ ನೀಡದೆ ಅನ್ಯಾಯವಾಗುತ್ತಿದ್ದರೂ ಮಾತನಾಡದೇ, ಹೋರಾಟ ನಡೆಸದೇ ಯಾವ ಬಿಲದಲ್ಲಿ ಅಡಗಿ ಕುಳಿತ್ತಿದ್ದೀರಿ? ಎಂದು ಉಪಾಧ್ಯಕ್ಷ ಜಮಾದಾರ ಹಲಚೇರಿ ಪ್ರಶ್ನಿಸಿದ್ದಾರೆ.
